ಗೆದ್ದ ಪ್ರೀತಿಗಾಗಿ ಜಾರಿತು ಕಣ್ಣ ಹನಿ..ತರುಣ್‌ ತಾಳಿ ಕಟ್ಟುತ್ತಿದ್ದಂತೆ ಭಾವುಕರಾದ ಸೋನಾಲ್‌

Sun, 11 Aug 2024-12:07 pm,

ಗೋಲ್ಡ್‌ ಹಾಗೂ ರೆಡ್‌ ಬಾರ್ಡರ್‌ ಸೀರೆಯಲ್ಲಿ ವಧುವಾಗಿ ಅಲಂಕಾರಗೊಂಡ ಸೋನಾಲ್‌ ಎಲ್ಲರ ಕಣ್ಮನ ಸೆಳೆದರು. ತರುಣ್‌ ಸುಧೀರ್‌ ಕೂಡ ಗೋಲ್ಡ್‌ ಬಣ್ಣದ ಉಡುಪು ಧರಿಸಿ ಮದುವೆ ಸಮಾರಂಭದಲ್ಲಿ ಮಿಂಚಿದರು.

ಇಂದು(ಆಗಸ್ಟ್‌ 11)ರಂದು ತರುಣ್‌ ಹಾಗೂ ಸುಧೀರ್‌ ಮದುವೆ ಅದ್ದೂರಿಯಾಗಿ ನೆರವೇರಿದೆ.  

ಸೋನಾಲ್‌ ಅದ್ದೂರಿ ಸ್ವಾಗತದೊಂದಿಗೆ ಮಂಟಪದೊಳಗೆ ಎಂಟ್ರಿ ಕೊಟ್ಟರು. ಡೊಳ್ಳು ವಾದ್ಯ ಹಾಗೂ ದೀಪದಾರತಿಯ ನಡುವೆ ಸೋನಾಲ್‌ ಅವರನ್ನು ಮಂಟಪಕ್ಕೆ ಸ್ವಾಗತಿಸಲಾಯಿತು.  

ಮಂಟಪದಲ್ಲಿ ಜೊತೆಯಾಗಿ ಕೂತ ನವಜೋಡಿ ಪುರೋಹಿತರು ಹೇಳಿಕೊಟ್ಟ ಮಂತ್ರಗಳನ್ನು ಉಚ್ಚರಿಸಿದರು. ನಂತರ ತರುಣ್‌ ಸೋನಾಲ್‌ ಅವರಿಗೆ ತಾಳಿ ಕಟ್ಟಿದ್ರು.  

ತರುಣ್‌ ಸುಧೀರ್‌ ಸೋನಾಲ್‌ ಅವರಿಗೆ ತಾಳಿ ಕಟ್ಟುತ್ತಿದ್ದಂತೆ ಸೋನಾಲ್‌ ಅವರ ಕಣ್ಣಿನಿಂದ ಕಣ್ಣಿನ ಹನಿ ಜಾರ ತೊಡಗಿತ್ತು. ಪ್ರೀತಿ ಗೆದ್ದ ಖುಷಿಯಲ್ಲಿ ಭಾವುಕರಾದ ಸೋನಾಲ್‌ ಆನಂದ ಭಾಷ್ಪ ಸುರಿಸಿದರು.  

ತಾಳಿ ಕಟ್ಟಿ ಹಣೆಗೆ ಕುಂಕುಮವನ್ನಿಟ್ಟು ತರುಣ್‌ ಹಾಗೂ ಸೋನಾಲ್‌ ಗಣ್ಯರ ಮುಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link