Photo Gallery : ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 13 ವರ್ಷ ಪೂರೈಸಿದ ವಿರಾಟ್ ಕೊಹ್ಲಿ..!
ವಿರಾಟ್ ಕೊಹ್ಲಿ ತಮ್ಮ ಮೊದಲ ಏಕದಿನ ಶತಕ ಗಳಿಸಲು 14 ಮ್ಯಾಚ್ ಕಾಯಬೇಕಾಯಿತು. ಅಂದಿನಿಂದ ಇಲ್ಲಿಯವರೆಗೆ ಕೊಹ್ಲಿ 43 ಏಕದಿನ ಶತಕಗಳನ್ನು ಗಳಿಸಿದ್ದಾರೆ. (ಮೂಲ: ಟ್ವಿಟರ್)
ವಿರಾಟ್ ಕೊಹ್ಲಿ ಟೀಮ್ ಇಂಡಿಯಾವನ್ನ 37 ಟೆಸ್ಟ್ ಪಂದ್ಯಗಳನ್ನ ಗೆಲುವಿನತ್ತ ಮುನ್ನಡೆಸಿದ್ದಾರೆ, ಲಾರ್ಡ್ಸ್ ನಲ್ಲಿ ಇಂಗ್ಲೆಂಡ್ ವಿರುದ್ಧ ಇತ್ತೀಚಿನ ಜಯದೊಂದಿಗೆ ವೆಸ್ಟ್ ಇಂಡಿಸ್ ಆಟಗಾರ ಕ್ಲೈವ್ ಲಾಯ್ಡ್ ಅವರ 36-ಗೆಲುವಿನ ದಾಖಲೆಯನ್ನು ಮೀರಿಸಿದರು. (ಮೂಲ: ಟ್ವಿಟರ್)
ಕೊಹ್ಲಿ ಇಲ್ಲಿಯವರೆಗೆ 94 ಟೆಸ್ಟ್‌ಗಳಲ್ಲಿ 7609 ರನ್ ಗಳಿಸಿದ್ದಾರೆ, 51 ರ ಸರಾಸರಿಯಲ್ಲಿ 27 ಶತಕ ಗಳಿಸಿದ್ದಾರೆ. ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಔಟಾಗದೆ 254 ರನ್ ಗಳಿಸಿದ್ದಾರೆ. (ಮೂಲ: ಟ್ವಿಟರ್)
ವಿರಾಟ್ ಕೊಹ್ಲಿ 59.07 ಸರಾಸರಿಯಲ್ಲಿ 12,169 ರನ್ ಗಳಿಸಿದ್ದಾರೆ ಮತ್ತು ಪಾಕಿಸ್ತಾನದ ವಿರುದ್ಧ ಅವರ ಗರಿಷ್ಠ ಸ್ಕೋರ್ 183 ಆಗಿದೆ. ಕೊಹ್ಲಿಯ 43 ಏಕದಿನ ಶತಕಗಳ ಮೊತ್ತವು ಸಚಿನ್ ತೆಂಡೂಲ್ಕರ್ ನಂತರ ಎರಡನೇ ಸ್ಥಾನದಲ್ಲಿದೆ. (ಮೂಲ: ಟ್ವಿಟರ್)
ವಿರಾಟ್ ಕೊಹ್ಲಿ 13 ವರ್ಷಗಳ ಹಿಂದೆ ಕೊಲಂಬೊದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಬ್ಯಾಟಿಂಗ್ ಆರಂಭಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. (ಮೂಲ: ಟ್ವಿಟರ್)