ಕೊನೆ ದಿನಗಳಲ್ಲಿ ಒಂದೊಂದು ರೂಪಾಯಿಗೂ ಪರದಾಡಿದ್ದರಂತೆ ದರ್ಶನ್ ತಂದೆ! ತೂಗುದೀಪ ಶ್ರೀನಿವಾಸ್ ಅವರ ಸ್ಥಿತಿ ನಿಜಕ್ಕೂ ಹೀಗಾಗಿತ್ತಾ?
ನಟ ತೂಗುದೀಪ್ ಶ್ರೀನಿವಾಸ ತಮ್ಮ ಕಣ್ಣಿನಲ್ಲೇ ನಟನೆ ಮಾಡುವ ಮೂಲಕ ಎಲ್ಲರಲ್ಲೂ ನಡುಕ ಹುಟ್ಟಿಸುತ್ತಿದ್ದರು.. ಖಡಕ್ ವಿಲನ್ ಎಂದರೇ ಮೊದಲು ನೆನಪಾಗೋದು ತೂಗುದೀಪ್ ಎಂದರೇ ಅತಿಶಯೋಕ್ತಿಯಲ್ಲ..
ಇನ್ನು ತೂಗುದೀಪ ಶ್ರೀನಿವಾಸ್ ಇಷ್ಟು ದೊಡ್ಡ ನಟನಾದರೂ ಕೂಡ ಅವರ ಮಕ್ಕಳಾದ ದರ್ಶನ್ ಹಾಗೂ ದಿನಕರ್ ಸಿನಿಮಾ ಇಂಡ್ರಸ್ಟಿಗೆ ಕಾಲಿಡಲು ಯಾಕೆ ಅಷ್ಟು ಕಷ್ಟಪಡಬೇಕಾಯಿತು.. ತೂಗುದೀಪ ಶ್ರೀನಿವಾಸ ಅವರು ಕೊನೆಗಾಲದಲ್ಲಿ ಎದುರಿಸಿದ ಕಷ್ಟಗಳೇನು? ಇದೆಲ್ಲದರ ಸಣ್ಣ ಮಾಹಿತಿ ಇಲ್ಲಿದೆ..
ಖಳನಾಯಕ ತೂಗುದೀಪ ಶ್ರೀನಿವಾಸ್ ಅವರು ಮೂಲತಃ ಮೈಸೂರಿನವರು.. ನಾಯ್ಡು ಆದರೂ ಅಪ್ಪಟ ಕನ್ನಡ ಕುಟುಂಬದಲ್ಲಿ ಇವರು ಜನಿಸಿದರು.. ಚಿಕ್ಕ ವಯಸ್ಸಿನಲ್ಲಿಯೇ ನಟ ತಂದೆ-ತಾಯಿಯನ್ನು ಕಳೆದುಕೊಳ್ಳುತ್ತಾರೆ.. ಹೀಗಾಗಿ ಕಷ್ಟದಲ್ಲೇ ಬೆಳೆಯುವಂತಹ ಪರಿಸ್ಥಿತಿ ಅವರಿಗೆ ಎದುರಾಗುತ್ತದೆ..
ಬಾಲ್ಯದಿಂದಲೂ ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದ ನಟ ತೂಗುದೀಪ್ ನಾಟಕಗಳಲ್ಲಿಯೂ ಮಿಂಚಿ ಒಳ್ಳೆಯ ಹೆಸರು ಮಾಡುತ್ತಾರೆ.. ಬಳಿಕ ತೂಗುದೀಪ ಎನ್ನುವ ಸಿನಿಮಾದ ಮೂಲಕ ನಟ ಶ್ರೀನಿವಾಸ್ ಬಣ್ಣದ ಲೋಕಕ್ಕೆ ಕಾಲಿಟ್ಟರು..
ಮೇಯರ್ ಮುತ್ತಣ್ಣ, ಪಂಜರದ ಗಿಣಿ, ಸಿಪಾಯಿ ರಾಮು ಹೀಗೆ ಹಲವಾರು ಹಿಟ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡ ಸಿನಿಮಾರಂಗದಲ್ಲಿ ತಮ್ಮದೇ ಆದ ದೊಡ್ಡ ಛಾಪು ಮೂಡಿಸಿದರು..
ಸಿನಿಮಾಗಳಲ್ಲಿ ಖಡಕ್ ವಿಲನ್ ಪಾತ್ರ ಮಾಡುತ್ತಿದ್ದ ನಟ ತೂಗುದೀಪ್ ಅವರ ನಿಜಜೀವನದಲ್ಲಿ ತುಂಬಾ ಮೃದು ವ್ಯಕ್ತಿತ್ವದವರಾಗಿದ್ದರು.. ಆದರೆ ಬಹುತೇಕ ನಟರಿಗೆ ಇದ್ದಂತೆ ಇವರಿಗೂ ಆಲ್ಕೋಹಾಲ್ ಸೆಳೆತವಿತ್ತು..
ಹೀಗಾಗಿ ಅವರಿಗೆ ಕಿಡ್ನಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ.. ಆಗ ಬೇರೋಬ್ಬರು ಇವರಿಗೆ ಕಿಡ್ನಿ ದಾನವಾಗಿ ನೀಡುವ ಪರಿಸ್ಥಿತಿ ಬರುತ್ತದೆ.. ಬಳಿಕ ಅವರ ಪತ್ನಿ ಮೀನಾ ತೂಗುದೀಪ್ ಅವರು ಕಿಡ್ನಿ ಪತಿ ತೂಗುದೀಪ್ ಶ್ರೀನಿವಾಸ ಅವರಿಗೆ ಕಿಡ್ನಿ ದಾನ ಮಾಡುತ್ತಾರೆ..
ಆಗ ಬೇಕಾದ ಖರ್ಚಿಗಾಗಿ ಮನೆಯಲ್ಲಿದ್ದ ಒಡವೆಗಳನ್ನೆಲ್ಲ ಮಾರುವ ಪರಿಸ್ಥಿತಿ ಬರುತ್ತದೆ.. ಹೀಗಾಗಿ ತೂಗುದೀಪ್ ಶ್ರೀನಿವಾಸ ಅವರ ಕುಟುಂಬ ಕೊನೆಗಾಲದಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ.. ಅಲ್ಲದೇ ಅಲ್ಲಿಂದ ಒಂದು ವರ್ಷ ಮಾತ್ರ ತೂಗುದೀಪ್ ಅವರು ಬದುಕುಳಿದರು..