ಹೊಸ ವರ್ಷದಲ್ಲಿ ಶನಿ, ರಾಹು ಕೇತು ಈ ಐದು ರಾಶಿಗಳಿಗೆ ನೀಡಲಿದ್ದಾರೆ ಸಂಕಷ್ಟ, ರೂಪುಗೊಳ್ಳಲಿದೆ ಭಯಾನಕ ಯೋಗ
ಹೊಸ ವರ್ಷದಲ್ಲಿ, ಕನ್ಯಾ ರಾಶಿಯ ಜಾತಕದಲ್ಲಿ ಆರನೇ ಮನೆಯಲ್ಲಿ ಶನಿಯ ಸಂಚಾರವು ಸಂಭವಿಸಲಿದೆ. ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ, ಶನಿ ಸಂಕ್ರಮಣದ ಸಮಯದಲ್ಲಿ ಆರೋಗ್ಯದಲ್ಲಿ ಏರುಪೇರುಗಳು ಉಂಟಾಗುತ್ತವೆ. ಇದಲ್ಲದೆ, ಮೂತ್ರಪಿಂಡ ಮತ್ತು ಯಕೃತ್ತಿನ ರೋಗಗಳು ಕಾಣಿಸಿಕೊಳ್ಳಬಹುದು. ಇದರೊಂದಿಗೆ ಬೆನ್ನುನೋವಿನ ಸಮಸ್ಯೆಯೂ ಕಾಡುತ್ತದೆ.
2022 ರಲ್ಲಿ ಶನಿ, ರಾಹು, ಕೇತುಗಳ ಬದಲಾವಣೆಯಿಂದಾಗಿ, ವೃಷಭ ರಾಶಿಯ ಜನರು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ರಾಹುವು ಜಾತಕದ 12 ನೇ ಮನೆಯಲ್ಲಿ ಸಾಗುತ್ತಾನೆ. ಇದಲ್ಲದೆ, ಕೇತುವು ಜಾತಕದ ಆರನೇ ಮನೆಗೆ ಪ್ರವೇಶಿಸುತ್ತಾನೆ. ಜಾತಕದ ಆರನೇ ಮನೆ ರೋಗದಿಂದ ಕೂಡಿರುತ್ತದೆ. ಈ ಮನೆಗಳಲ್ಲಿ ಕೇತುವಿನ ಆಗಮನದಿಂದ ವೃಷಭ ರಾಶಿಯವರಿಗೆ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಅದರಲ್ಲೂ ಹೊಟ್ಟೆ ಅಥವಾ ಕಿಡ್ನಿ ಸಮಸ್ಯೆಗಳು ಹೆಚ್ಚು ಕಾಡುತ್ತವೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೀನ ರಾಶಿಯವರಿಗೆ 2022ರಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆಗಳು ಎದುರಾಗುತ್ತವೆ. ಶನಿ ಮತ್ತು ಕೇತುವಿನ ಕಾರಣದಿಂದ ಈ ಸಮಸ್ಯೆಗಳು ಬರುತ್ತವೆ. ಮೀನ ರಾಶಿಯವರಿಗೆ ಹೊಸ ವರ್ಷದಲ್ಲಿ ಪಾದಗಳು ಮತ್ತು ಮೊಣಕಾಲುಗಳಿಗೆ ಸಂಬಂಧಿಸಿದ ಸಮಸ್ಯೆಗಳಿರಬಹುದು.
ವೃಶ್ಚಿಕ ರಾಶಿಯವರಿಗೆ 2022 ರ ವರ್ಷವು ತೊಂದರೆಗಳಿಂದ ತುಂಬಿರುತ್ತದೆ. ಕೇತುವು ಏಪ್ರಿಲ್‌ನಲ್ಲಿ ಜಾತಕದ ಎಂಟನೇ ಮನೆಯಲ್ಲಿ ಸಾಗುತ್ತಾನೆ. ಇದಲ್ಲದೆ, ರಾಹುವು ಜಾತಕದ ಆರನೇ ಮನೆಯ ಮೂಲಕ ಸಾಗುತ್ತಾನೆ. ಈ ಕಾರಣದಿಂದಾಗಿ, ಕೆಟ್ಟ ಚಟಗಳ ಕಾರಣದಿಂದ ಅರೋಗ್ಯ ಹದಗೆಡಬಹುದು. ಇದಲ್ಲದೇ ರಾಹುವಿನ ಕಾರಣ ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
2022 ರಲ್ಲಿ ಶನಿ, ರಾಹು ಮತ್ತು ಕೇತುಗಳ ಸಂಕ್ರಮಣವು ಕರ್ಕ ರಾಶಿಯವರಿಗೆ ತೊಂದರೆಯನ್ನು ಉಂಟುಮಾಡುತ್ತದೆ. ಆರೋಗ್ಯ ಜಾತಕದ ಪ್ರಕಾರ, ಶನಿಯಿಂದ ಆರೋಗ್ಯ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಶನಿಯು 2022 ರಲ್ಲಿ ಜಾತಕದ 8 ನೇ ಮನೆಯನ್ನು ತಲುಪುತ್ತಾನೆ. ಈ ಸಂದರ್ಭದಲ್ಲಿ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಇದರ ಹೊರತಾಗಿ, ಒಬ್ಬರು ಎಲೆಕ್ಟ್ರಿಕ್ ಸಾಧನಗಳೊಂದಿಗೆ ಜಾಗರೂಕರಾಗಿರಬೇಕು. ಮತ್ತೊಂದೆಡೆ, ಮಹಿಳೆಯರು ಗರ್ಭಾಶಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.