ಈ ದೇವಸ್ಥಾನದಲ್ಲಿ ದಿನಕ್ಕೆ ಮೂರು ಬಾರಿ ರೂಪ ಬದಲಿಸುವ ದೇವಿಯ ಮೂರ್ತಿ, ಭಗ್ನಗೊಂಡಾಗ ಉತ್ತರಾಖಂಡದಲ್ಲಿ ಎದುರಾಗಿತ್ತು ಭೀಕರ ಅನಾಹುತ!
ಭಾರತದ ಎಲ್ಲಾ ಪುರಾತನ ದೇವಾಲಯಗಳಲ್ಲಿ, ಒಂದಾದ ಧಾರಿ ದೇವಿ ದೇವಾಲಯದ ರಹಸ್ಯವು ಇಂದಿಗೂ ವಿಜ್ಞಾನಿಗಳಿಗೆ ಸವಾಲಾಗಿ ಉಳಿದಿದೆ. ಧಾರಿ ದೇವಿ ದೇವಸ್ಥಾನದಲ್ಲಿರುವ ವಿಗ್ರಹವು ದಿನಕ್ಕೆ ಮೂರು ಬಾರಿ ತನ್ನ ರೂಪವನ್ನು ಬದಲಾಯಿಸುತ್ತದೆ
ದೇವಾಲಯದ ವಿಗ್ರಹವು ಬೆಳಿಗ್ಗೆ ಕನ್ಯೆಯಂತೆ ಕಂಡರೆ, ಮಧ್ಯಾಹ್ನ ಹುಡುಗಿಯಂತೆ ಕಾಣುತ್ತದೆ ಮತ್ತು ಸಂಜೆಯ ಹೊತ್ತಿಗೆ ದೇವಾಲಯದ ವಿಗ್ರಹವು ಮುದುಕಿಯಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ.
ಧಾರಿ ದೇವಿ ದೇವಸ್ಥಾನವು ಉತ್ತರಾಖಂಡದ ಶ್ರೀನಗರದಿಂದ 14 ಕಿ.ಮೀ ದೂರದಲ್ಲಿದೆ. ಈ ದೇವಾಲಯವನ್ನು ಅತ್ಯಂತ ಅದ್ಭುತವಾದ ದೇವಾಲಯವೆಂದು ಕರೆಯಲಾಗುತ್ತದೆ. ಈ ದೇವಾಲಯದ ಪವಾಡವನ್ನು ನೋಡಿದ ಜನರು ತುಂಬಾ ಆಶ್ಚರ್ಯ ಪಡುತ್ತಾರೆ.
ಪುರಾಣಗಳ ಪ್ರಕಾರ, ಧಾರಿ ದೇವಿ ದೇವಸ್ಥಾನವು ಒಮ್ಮೆ ತೀವ್ರ ಪ್ರವಾಹದಲ್ಲಿ ಕೊಚ್ಚಿಹೋಗಿತ್ತು. ಈ ವೇಳೆ ದೇವಸ್ಥಾನದಲ್ಲಿದ್ದ ಅಮ್ಮನವರ ವಿಗ್ರಹವೂ ಕೊಚ್ಚಿ ಹೋಗಿಟ್ಟು. ಧಾರೋ ಗ್ರಾಮದ ಬಳಿ ಇರುವ ಬಂಡೆಗೆ ಡಿಕ್ಕಿ ಹೊಡೆದ ವಿಗ್ರಹ ಅಲ್ಲೇ ನಿಂತಿದೆ. ಈ ಸಮಯದಲ್ಲಿ ವಿಗ್ರಹದಿಂದ ಒಂದು ಧ್ವನಿ ಹೊರಬಂದಿತು ಎನ್ನಲಾಗಿದೆ. ಈ ಧ್ವನಿಯು ವಿಗ್ರಹವನ್ನು ಪ್ರತಿಷ್ಠಾಪಿಸಲು ಗ್ರಾಮಸ್ಥರಿಗೆ ಸೂಚಿಸಿತ್ತು. ಇದಾದ ಬಳಿಕ ಗ್ರಾಮಸ್ಥರು ಅಲ್ಲಿ ಅಮ್ಮನವರ ದೇವಸ್ಥಾನ ನಿರ್ಮಿಸಿದ್ದರು.
2013ರಲ್ಲಿ ಉತ್ತರಾಖಂಡದಲ್ಲಿ ಭೀಕರ ಪ್ರವಾಹ ಉಂಟಾಗಿತ್ತು. ಈ ದುರಂತದಲ್ಲಿ ಸಾವಿರಾರು ಜನರು ಪ್ರಾಣ ಕಳೆದು ಕೊಂಡಿದ್ದರು. ಆ ಸಂದರ್ಭದಲ್ಲಿ ಅಮ್ಮನವರ ದೇವಸ್ಥಾನವನ್ನು ಕೂಡಾ ಕೆಡವಲಾಯಿತು. ಅಲ್ಲದೆ, ವಿಗ್ರಹವನ್ನು ಅದರ ಮೂಲ ಸ್ಥಳದಿಂದ ತೆಗೆದುಹಾಕಲಾಯಿತು. ಈ ಕಾರಣದಿಂದಾಗಿಯೇ ಉತ್ತರಾಖಂಡದಲ್ಲಿ ಭೀಕರ ಅನಾಹುತ ಸಂಭವಿಸಿತ್ತು ಎನ್ನುವುದು ಕ್ಷೇತ್ರದ ಭಕ್ತರ ಮಾತು. 2013 ರ ಜೂನ್ 16 ರ ಸಂಜೆ ಧಾರಾ ದೇವಿ ದೇವಸ್ಥಾನದ ವಿಗ್ರಹವನ್ನು ಅದರ ಮೂಲ ಸ್ಥಳದಿಂದ ತೆಗೆದುಹಾಕಲಾಯಿತು. ಇದಾದ ಕೆಲವೇ ಗಂಟೆಗಳಲ್ಲಿ ರಾಜ್ಯದಲ್ಲಿ ಭೀಕರ ಅನಾಹುತ ಸೃಷ್ಟಿ ಆಯಿತು ಎನ್ನುವುದು ಇಲ್ಲಿನ ಭಕ್ತರ ನಂಬಿಕೆ.