Eyes Care: ಮಕ್ಕಳನ್ನು ಕನ್ನಡಕದಿಂದ ದೂರವಿರಿಸಲು, ದೃಷ್ಟಿ ಸುಧಾರಣೆಗೆ ಡಯಟ್ನಲ್ಲಿ ಇರಲೇಬೇಕು ಈ ಆಹಾರಗಳು
ಪ್ರಸ್ತುತ, ಗ್ಯಾಜೆಟ್ ಗಳ ಅತಿಯಾದ ಬಳಕೆಯಿಂದಾಗಿ ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಕನ್ನಡಕ ಧರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದುರ್ಬಲ ದೃಷ್ಟಿಯಿಂದಾಗಿ ಉದ್ಭವಿಸಿರುವ ಈ ಸಮಸ್ಯೆಗಳ ಬಗ್ಗೆ ಸರಿಯಾಗಿ ಕಾಳಜಿ ವಹಿಸದಿದ್ದರೆ, ಸಾರ್ವಕಾಲಿಕವಾಗಿ ಕನ್ನಡಕ ಧರಿಸಬೇಕಾಗುತ್ತದೆ. ಇದನ್ನು ತಪ್ಪಿಸಲು ಡಯಟ್ನಲ್ಲಿ ಕೆಲವು ಆಹಾರಗಳನ್ನು ಸೇರಿಸುವುದು ತುಂಬಾ ಅಗತ್ಯವಾಗಿದೆ. ಅಂತಹ ಆಹಾರಗಳೆಂದರೆ...
ಕ್ಯಾರೆಟ್: ಮಕ್ಕಳ ದಿನ ನಿತ್ಯದ ಡಯಟ್ನಲ್ಲಿ ಕ್ಯಾರೆಟ್ ಅನ್ನು ಸೇವಿಸುವುದರಿಂದ ದೃಷ್ಟಿ ದೋಷವನ್ನು ನಿವಾರಿಸಬಹುದು. ಕ್ಯಾರೆಟ್‌ನಿಂದ ತಯಾರಿಸಿದ ವಸ್ತುಗಳನ್ನು ಮಕ್ಕಳ ಆಹಾರದಲ್ಲಿ ಸೇರಿಸಬೇಕು. ವಾಸ್ತವವಾಗಿ, ಕ್ಯಾರೆಟ್ ನಲ್ಲಿ ವಿಟಮಿನ್ ಎ ಕಂಡು ಬರುತ್ತದೆ. ಇದು ಕಣ್ಣಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ಕಿತ್ತಳೆ ಹಣ್ಣು: ಕಣ್ಣಿನ ತಜ್ಞರ ಪ್ರಕಾರ, ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿ ಕಂಡು ಬರುತ್ತದೆ. ಇದರಲ್ಲಿರುವ ಪೋಷಕಾಂಶಗಳು ದೃಷ್ಟಿಯನ್ನು ಸುಧಾರಿಸಲು ಸಹಕಾರಿ ಆಗಿರುವುದರಿಂದ ನಿತ್ಯ ನಿಮ್ಮ ಆಹಾರದಲ್ಲಿ ಅದರಲ್ಲೂ ವಿಶೇಷವಾಗಿ ಮಕ್ಕಳ ಆಹಾರದಲ್ಲಿ ಕಿತ್ತಳೆಹಣ್ಣನ್ನು ಸೇರಿಸುವುದರಿಂದ ದೃಷ್ಟಿಯನ್ನು ಬಳಪಡಿಸಬಹುದು.
ಪರಂಗಿ ಹಣ್ಣು: ಪರಂಗಿ ಹಣ್ಣಿನಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಹೇರಳವಾಗಿ ಕಂಡು ಬರುತ್ತದೆ. ಹಾಗಾಗಿ, ಮಕ್ಕಳಲ್ಲಿ ದೃಷ್ಟಿ ದೋಷವನ್ನು ನಿವಾರಿಸಿ, ಅವರ ದೃಷ್ಟಿಯನ್ನು ಸುಧಾರಿಸಲು ಪರಂಗಿ ಹಣ್ಣು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.
ಬೀನ್ಸ್: ಬೀನ್ಸ್ ನಲ್ಲಿ ಕಂಡು ಬರುವ ಕೆಲವು ಪೋಷಕಾಂಶಗಳು ದೃಷ್ಟಿ ದೋಷವನ್ನು ನಿವಾರಿಸಲು ತುಂಬಾ ಪ್ರಯೋಜನಕಾರಿ ಆಗಿದೆ.
ಬ್ರೊಕೊಲಿ: ಬ್ರೊಕೊಲಿಯಲ್ಲಿ ವಿಟಮಿನ್ ಗಳು ಉತ್ತಮ ಪ್ರಮಾಣದಲ್ಲಿ ಕಂಡು ಬರುತ್ತದೆ. ಪ್ರತಿ ದಿನ ಬ್ರೊಕೊಲಿ ಸೇವಿಸುವುದರಿಂದ ಇದು ತೂಕ ಇಳಿಕೆಯನ್ನು ಉತ್ತೇಜಿಸುವ ಜೊತೆಗೆ ದೃಷ್ಟಿಯನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.