Virat, Maahi ಸೇರಿದಂತೆ ಈ ಕ್ರಿಕೆಟ್ ಕಲಿಗಳ ಮೊದಲ ಸಂತಾನ ಹೆಣ್ಣು..
ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜೀವನದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಧೋನಿಗೆ ಒಬ್ಬ ಮಗಳಿದ್ದಾಳೆ. ಧೋನಿ ಮಗಳ ಹೆಸರು ಜೀವಾ. ಜೀವಾ ಸಾಮಾನ್ಯವಾಗಿ ತನ್ನ ತಂದೆ ಮಹೇಂದ್ರ ಸಿಂಗ್ ಧೋನಿ ಮತ್ತು ತಾಯಿ ಸಾಕ್ಷಿ ಜೊತೆ ಕಾಣಸಿಗುತ್ತಾರೆ. ಇತ್ತೀಚೆಗೆ, ಧೋನಿ ಮತ್ತು ಜೀವ ಒಂದು ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ಬೌಲರ್ ಆರ್ ಅಶ್ವಿನ್ ಅವರು ಕೂಡಾ ಇಬ್ಬರು ಹೆಣ್ಣು ಮಕ್ಕಳ ತಂದೆ.. ಅಶ್ವಿನ್ ಅವರ ಹಿರಿಯ ಮಗಳ ಹೆಸರು ಅಧ್ಯಾ ಮತ್ತು ಕಿರಿಯ ಮಗಳ ಹೆಸರು ಅಕಿರಾ.
ರವೀಂದ್ರ ಜಡೇಜಾ ಇಲ್ಲದೆ ಟೀಮ್ ಇಂಡಿಯಾ ಎಂದಿಗೂ ಅಪೂರ್ಣ ಅನಿಸುತ್ತದೆ. ಟೀಂ ಇಂಡಿಯಾದ ಆಟಗಾರರು ಇವರನ್ನ ಸರ್ ಜಡೇಜಾ ಎಂದು ಕರೆಯುತ್ತಾರೆ. ರವೀಂದ್ರ ಜಡೇಜಾಗೆ ಕೂಡ ಒಬ್ಬ ಮುದ್ದಾದ ಮಗಳಿದ್ದಾಳೆ. ಜಡೇಜಾ ತನ್ನ ಮಗಳಿಗೆ ನಿಧಾಯನ ಎಂದು ಹೆಸರಿಟ್ಟಿದ್ದಾರೆ.
ಸುರೇಶ್ ರೈನಾ ಕೂಡಾ ಹೆಣ್ಣು ಮಗುವಿನ ತಂದೆ. ಇವರಮಗಳ ಹೆಸರು ಗ್ರೇಸಿಯಾ.. ಈ ಹೆಸರಿನ ಅರ್ಥ ದೇವರಕೃಪೆ ಎಂದು..
ಒಂದು ಕಾಲದಲ್ಲಿ ಹರ್ಭಜನ್ ಸಿಂಗ್ ಎದುರಾಳಿ ತಂಡದ ದಾಂಡಿಗರ ಬೆವರಿಳಿಸಿ ಬಿಡುತ್ತಿದ್ದರು. ಇವರಿಗೂ ಒಬ್ಬ ಮುದ್ದಾದ ಮಗಳಿದ್ದಾಳೆ. ಹರ್ಭಜನ್ ತಮ್ಮ ಮಗಳೊಂದಿಗೆ ಅತಿ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಆಕೆಯ ಹೆಸರು, ಹಿನಾಯ ಹೀರ್..
ಟೀ ಇಂಡಿಯಾದ ಹಿಟ್ ಮ್ಯಾನ್ ರೋಹಿತ್ ಶರ್ಮಾಗೂ ಪುತ್ರಿಯ ಹೆಸರು ಸಮೈರಾ. ರೋಹಿತ್ ಶರ್ಮಾ ತಮ್ಮ ಪುತ್ರಿಯೊಂದಿಗಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ.
ಭಾರತ ಕ್ರಿಕೆಟ್ ತಂಡದ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರಿಗೂ ಒಬ್ಬಮಗಳಿದ್ದಾಳೆ. ಸಚಿನ್ ಪುತ್ರಿಯ ಹೆಸರು ಸಾರಾ.. ಸಾರಾ ಬಹಳಷ್ಟು ಬಾರಿ ತನ್ನ ತಂದೆಯೊಂದಿಗೆ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ಗೌತಮ್ ಗಂಭೀರ್ ಅವರಿಗೂ ಇಬ್ಬರು ಹೆಣ್ಣುಮಕ್ಕಳು. ಒಬ್ಬರ ಹೆಸರು ಅಜನಾ, ಇನ್ನೊಬ್ಬರ ಹೆಸರು ಅನಾಯಿಜಾ..
ಟೀ ಇಂಡಿಯಾ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯಾ ರಹಾನೆಗೂ ಮುದ್ದಾದ ಹೆಣ್ಣುಮಗುವಿದೆ. ಆ ಮಗುವಿನ ಹೆಸರು ಆರ್ಯ.. ಅಜಿಂಕ್ಯಾ ಸಾಮಾನ್ಯವಾಗಿ ಆರ್ಯ ಜೊತೆಗಿನ ಫೋಟೋವನ್ನು ತನ್ನ ಅಭಿಮಾನಿಗಳೊಂದಿಗೆ ಶೇರ್ ಮಾಡುತ್ತಿರುತ್ತಾರೆ..