IND vs AUS: ಏರ್ಪೋರ್ಟ್ ನಲ್ಲಿ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಕಾಣಿಸಿಕೊಂಡ ರೀತಿ ಕಂಡು ನೀವು ಖುಷಿಪಡುವಿರಿ

Sun, 18 Sep 2022-12:15 pm,

1, ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು - ಪ್ರಸ್ತುತ ಟೀಂ ಇಂಡಿಯಾ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಟಿ20 ಪಂದ್ಯಕ್ಕಾಗಿ ಮೊಹಾಲಿ ಏರ್ಪೋರ್ಟ್ ತಲುಪಿದ ರಾಹುಲ್ ಅವರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ನೆರೆದಿದರು.  

2. ಮಾಸ್ಕ್ ಮೇಲೆ RD ಬರೆಯಲಾಗಿತ್ತು - ಈ ಸಂದರ್ಭದಲ್ಲಿ ರಾಹುಲ್ ಧರಿಸಿದ್ದ ಮಾಸ್ಕ್ ಮೇಲೆ RD ಬರೆಯಲಾಗಿತ್ತು. ಇದು ಅವರ ಹೆಸರಿನ ಶಾರ್ಕ್ ಫಾರ್ಮ್ ಕೂಡ ಆಗಿದೆ.

3. ಕೇವಲ ಟಿ-ಶರ್ಟ್ ಹಾಗೂ ಜೀನ್ಸ್ ನಲ್ಲಿ ಕಂಡ ರಾಹುಲ್ - ರಾಹುಲ್ ಮೊಹಾಲಿ ವಿಮಾನ ನಿಲ್ದಾಣದಲ್ಲಿ ಇಳಿದಾಗ ಕಿತ್ತಳೆ ಬಣ್ಣದ ಟಿಶರ್ಟ್ ಹಾಗೂ ಜೀನ್ಸ್ ಧರಿಸಿದ್ದರು. ಅದರ ಜೊತೆಗೆ ಗಾಢ ನೀಲಿ ಬಣ್ಣದ ಕ್ಯಾಶುವಲ್ ಶೂ ಕೂಡ ಧರಿಸಿದ್ದರು. ಪಂಜಾಬ್ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸೆಕ್ಯೂರಿಟಿ ಮಧ್ಯೆ ನಿಲ್ದಾಣದಿಂದ ಹೊರಹೋಗಿದ್ದಾರೆ.

4. ಟೀಂ ಇಂಡಿಯಾಗೆ ಸೋಲು- ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಷ್ಯಾ ಕಪ್ 2022 ರಲ್ಲಿ ಭಾರತೀಯ ತಂದ ಸೋಲನ್ನು ಅನುಭವಿಸಿದೆ. ರೋಹಿತ್ ಶರ್ಮಾ ನೇತೃತ್ವದ ತಂಡಕ್ಕೆ ಕೇವಲ ಸೂಪರ್ 4 ಹಂತಕ್ಕೆ ಮಾತ್ರ ತಲುಪಲು ಯಶಸ್ವಿಯಾಗಿದೆ. ರಾಹುಲ್ ದ್ರಾವಿಡ್ ತಂಡದ ಕೋಚ್ ಆಗಿದ್ದರು. ಈ ಟೂರ್ನಾಮೆಂಟ್ ನಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಭಾರತವನ್ನು ಸೋಲಿಸಿವೆ.

5. ಮೊಹಾಲಿ ತಲುಪಿದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ - ಇದಲ್ಲದೆ ಟೀಂ ಇಂಡಿಯಾ ನಾಯಕ ಹಾಗೂ ಹಿಟ್ ಮ್ಯಾನ್ ರೋಹಿತ್ ಶರ್ಮಾ ಹಾಗೂ ರನ್ ಮಶೀನ್ ಎಂದೇ ಖ್ಯಾತ ವಿರಾಟ್ ಕೊಹ್ಲಿ ಕೂಡ ಮೊಹಾಲಿ ತಲುಪಿದ್ದಾರೆ. ಇವರನ್ನು ಹೊರತುಪಡಿಸಿ ಹಾರ್ದಿಕ್ ಪಾಂಡ್ಯಾ, ಕೆ.ಎಲ್ ರಾಹುಲ್, ಯಜುವೆಂದ್ರ ಚಾಹಲ್ ಹಾಗೂ ಜಸ್ಪ್ರೀತ್ ಬೂಮ್ರಾ ಕೂಡ ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link