IND vs AUS: ಮೂರನೇ ಟೆಸ್ಟ್‌ಗೆ ಟೀಮ್ ಇಂಡಿಯಾದ ಪ್ಲೇಯಿಂಗ್ XI ಘೋಷಣೆ
ರೋಹಿತ್ ಶರ್ಮಾ ಅವರ ಮರಳುವಿಕೆಗಾಗಿ ಲಕ್ಷಾಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದರು. ಈಗ ಅವರು ಸಿಡ್ನಿ ಟೆಸ್ಟ್ನಲ್ಲಿ ರೋಹಿತ್ ಶರ್ಮಾ (Rohit Sharma) ಅವರ ಅದ್ಭುತ ಬ್ಯಾಟಿಂಗ್ ಅನ್ನು ಆನಂದಿಸಲು ಅವಕಾಶ ಸಿಗಳಿಗೆ. ಕಳಪೆ ಬ್ಯಾಟಿಂಗ್‌ನಿಂದಾಗಿ ಮಾಯಂಕ್ ಅಗರ್‌ವಾಲ್ ಅವರನ್ನು ಪ್ಲೇಯಿಂಗ್ ಇಲೆವೆನ್‌ನಿಂದ ಕೈಬಿಡಲಾಗಿದೆ.
ಮೊಹಮ್ಮದ್ ಶಮಿ ಗಾಯಗೊಂಡ ನಂತರ, ಮೊಹಮ್ಮದ್ ಸಿರಾಜ್ (Mohammad siraj) ಅವರಿಗೆ ಮೆಲ್ಬೋರ್ನ್ ಟೆಸ್ಟ್ನಲ್ಲಿ ಪದಾರ್ಪಣೆ ಮಾಡಲು ಅವಕಾಶ ನೀಡಲಾಯಿತು. ಈ ಪಂದ್ಯದಲ್ಲಿ ಸಿರಾಜ್ 5 ವಿಕೆಟ್ ಕಬಳಿಸಿ ಆಸ್ಟ್ರೇಲಿಯಾದ ಭರವಸೆಯನ್ನು ಕುಸಿಯುವಂತೆ ಮಾಡಿದರು.
ಇದನ್ನೂ ಓದಿ : 'ಸೌರವ್ ಗಂಗೂಲಿ ವಿಮಾನ ಹಾರಾಟ, ಮ್ಯಾರಥಾನ್ ಮಾಡುವಷ್ಟು ಸಧೃಡರಾಗಿದ್ದಾರೆ'
ಗಾಯಗೊಂಡ ಉಮೇಶ್ ಯಾದವ್ ಅವರ ಬದಲಿಗೆ ತಂಡದಲ್ಲಿ ನವದೀಪ್ ಸೈನಿ ಅವರಿಗೆ ಅವಕಾಶ ನೀಡಲಾಗಿದೆ. ಈ ಪಂದ್ಯದ ಮೂಲಕ ಅವರು ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಅವರು ಟೀಮ್ ಇಂಡಿಯಾದ 299ನೇ ಟೆಸ್ಟ್ ಆಟಗಾರರಾಗಲಿದ್ದಾರೆ.
ಇದನ್ನೂ ಓದಿ : ಭಾರತ ಕ್ರಿಕೆಟ್ ತಂಡದ ಸಾಮರ್ಥ್ಯದ ಬಗೆಗಿನ ಗುಟ್ಟು ಬಿಚ್ಚಿಟ್ಟ ಜಸ್ಟೀನ್ ಲ್ಯಾಂಗರ್