IND vs SA: ಸೌತ್ ಆಫ್ರಿಕಾ ತಂಡದ ವಿರುದ್ಧ ಅತಿ ಹೆಚ್ಚು ರನ್ ಗಳಿಸಿರುವ ಇಂಡಿಯನ್ ಪ್ಲೇಯರ್ಸ್

Tue, 27 Sep 2022-2:48 pm,

ಭಾರತ ಕ್ರಿಕೆಟ್ ತಂಡದ ಹಿಟ್ ಮ್ಯಾನ್, ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ  ದಕ್ಷಿಣ ಆಫ್ರಿಕಾ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 13 ಪಂದ್ಯಗಳಲ್ಲಿ 362 ರನ್ ಗಳಿಸಿದ್ದಾರೆ. 

ಸುರೇಶ್ ರೈನಾ ದಕ್ಷಿಣ ಆಫ್ರಿಕಾ ವಿರುದ್ಧ 12 ಪಂದ್ಯಗಳಲ್ಲಿ 339 ರನ್ ಗಳಿಸಿದ್ದು, ಇದರಲ್ಲಿ ಬಿರುಸಿನ ಶತಕವೂ ಸೇರಿದೆ. ಸುರೇಶ್ ರೈನಾ 15 ಆಗಸ್ಟ್ 2020 ರಂದು ಕ್ರಿಕೆಟ್‌ನಿಂದ ನಿವೃತ್ತರಾದರು. 

ವಿಶ್ವದ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿ, ದಕ್ಷಿಣ ಆಫ್ರಿಕಾ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರರಾಗಿದ್ದಾರೆ. ಕೊಹ್ಲಿ ಆಫ್ರಿಕಾ ತಂಡದ ವಿರುದ್ಧ 10 ಪಂದ್ಯಗಳಲ್ಲಿ 254 ರನ್ ಗಳಿಸಿದ್ದಾರೆ. 

ಶಿಖರ್ ಧವನ್ ಸದ್ಯ ಭಾರತ ಟಿ20 ತಂಡದ ಭಾಗವಾಗಿಲ್ಲ. ಧವನ್ ದಕ್ಷಿಣ ಆಫ್ರಿಕಾ ವಿರುದ್ಧ 10 ಪಂದ್ಯಗಳಲ್ಲಿ 233 ರನ್ ಗಳಿಸಿದ್ದಾರೆ. 

ಇಶಾನ್ ಕಿಶನ್ ಬಹಳ ದಿನಗಳಿಂದ ಭಾರತ ತಂಡದಿಂದ ಹೊರಗುಳಿಯುತ್ತಿದ್ದಾರೆ. ಟಿ20 ವಿಶ್ವಕಪ್‌ನಲ್ಲೂ ಅವರಿಗೆ ಸ್ಥಾನ ಸಿಗಲಿಲ್ಲ. ಇಶಾನ್ ಕಿಶನ್ ದಕ್ಷಿಣ ಆಫ್ರಿಕಾ ವಿರುದ್ಧ 5 ಪಂದ್ಯಗಳಲ್ಲಿ 206 ರನ್ ಗಳಿಸಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link