IND vs SA: ಈ ಪಂಚ ಆಟಗಾರರೇ ಕೆಎಲ್ ರಾಹುಲ್‌ಗೆ ಮಾರಕ ಅಸ್ತ್ರ!

Sun, 05 Jun 2022-12:31 pm,

ಐಪಿಎಲ್‌ ಸೀಸನ್‌ನಲ್ಲಿ ಕೊನೆಯ ಓವರ್‌ಗಳಲ್ಲಿ ಅರ್ಷದೀಪ್ ಸಿಂಗ್ ತುಂಬಾ ಅದ್ಭುತ ಪ್ರದರ್ಶನ ನೀಡಿದ್ದರು. ಈ ಸೀಸನ್‌ನಲ್ಲಿ ಬುಮ್ರಾಗಿಂತ ಹೆಚ್ಚು ಯಾರ್ಕರ್‌ಗಳನ್ನು ಬೌಲ್ ಮಾಡಿದ್ದಾರೆ. ಈ ಸರಣಿಯಲ್ಲೂ ಅರ್ಷದೀಪ್ ಸಿಂಗ್ ಅವರಿಂದ ಕೆಎಲ್ ರಾಹುಲ್ ಇದೇ ರೀತಿಯ ಆಟವನ್ನು ನಿರೀಕ್ಷಿಸಲಿದ್ದಾರೆ. 

ಸನ್‌ರೈಸರ್ಸ್ ಹೈದರಾಬಾದ್ ತಂಡದ ವೇಗದ ಬೌಲರ್ ಉಮ್ರಾನ್ ಮಲಿಕ್ ಮೊದಲ ಬಾರಿಗೆ ಟೀಂ ಇಂಡಿಯಾದಲ್ಲಿ ಆಡಲಿದ್ದಾರೆ. ಉಮ್ರಾನ್ ಮಲಿಕ್ 150 ಕಿಮೀ ವೇಗದಲ್ಲಿ ಸ್ಥಿರವಾಗಿ ಬೌಲಿಂಗ್ ಮಾಡುವಲ್ಲಿ ಪರಿಣತರಾಗಿದ್ದಾರೆ. ಈ ವೇಗದ ಬೌಲರ್ ಕೆಎಲ್ ರಾಹುಲ್ ಅವರ ದೊಡ್ಡ ಅಸ್ತ್ರ ಎಂದು ಸಾಬೀತುಪಡಿಸಬಹುದು.  

ಟೀಂ ಇಂಡಿಯಾದ ಮಾರಕ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಹಾರ್ದಿಕ್ ಪಾಂಡ್ಯ ಕೂಡ ಈ ಸರಣಿಯ ಭಾಗವಾಗಿದ್ದಾರೆ. 2021ರ ಟಿ20 ವಿಶ್ವಕಪ್ ಬಳಿಕ ಹಾರ್ದಿಕ್ ಮೊದಲ ಬಾರಿಗೆ ಟೀಂ ಇಂಡಿಯಾದಲ್ಲಿ ಆಡಲಿದ್ದಾರೆ. ಐಪಿಎಲ್ 2022 ರಲ್ಲಿ ಹಾರ್ದಿಕ್ ಪಾಂಡ್ಯ 487 ರನ್ ಗಳಿಸಿ 8 ವಿಕೆಟ್ ಪಡೆದಿದ್ದರು. ಈ ಸರಣಿಯಲ್ಲಿ ಅವರು ದೊಡ್ಡ ಮ್ಯಾಚ್ ವಿನ್ನರ್ ಎಂದು ಸಾಬೀತುಪಡಿಸಬಹುದು.  

3 ವರ್ಷಗಳ ನಂತರ ಟೀಂ ಇಂಡಿಯಾದಲ್ಲಿ ದಿನೇಶ್ ಕಾರ್ತಿಕ್ ಅವಕಾಶ ಪಡೆದಿದ್ದಾರೆ. ಅವರು ಇತ್ತೀಚೆಗೆ ಐಪಿಎಲ್ 2022 ರಲ್ಲಿ ತಮ್ಮ ಪ್ರಚಂಡ ಫಿನಿಶರ್ ಅವತಾರವನ್ನು ತೋರಿಸಿದ್ದರು. ಈ ಸರಣಿಯಲ್ಲೂ ದಿನೇಶ್ ಕಾರ್ತಿಕ್ ಫಿನಿಶರ್ ಆಗಿ ಆಟವಾಡಲಿದ್ದಾರೆ.  

ಈ ಸರಣಿಯಲ್ಲಿ ಆರಂಭಿಕ ರೋಹಿತ್ ಶರ್ಮಾ ಬದಲಿಗೆ ಇಶಾನ್ ಕಿಶನ್ ಆಡಲಿದ್ದಾರೆ. ಇಶಾನ್ ಕಿಶನ್ ಐಪಿಎಲ್ 2022 ರಲ್ಲಿ 418 ರನ್ ಗಳಿಸಿದ್ದರು. ಇಶಾನ್ ಕಿಶನ್‌ ಉತ್ತಮ ಆಟ ಪ್ರದರ್ಶಿಸಿದರೆ ನಾಯಕನಾಗಿ ಕೆಎಲ್ ರಾಹುಲ್ ಮೊದಲ ಸರಣಿ ಗೆಲ್ಲುತ್ತಾರೆ. ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link