Team India: ಗೋವಾದಲ್ಲಿ ರಹಸ್ಯವಾಗಿ ಮದುವೆಯಾದ ಟೀಂ ಇಂಡಿಯಾದ ಕ್ರಿಕೆಟಿಗ

Thu, 10 Mar 2022-11:04 am,

ಭಾರತ ಕ್ರಿಕೆಟ್ ತಂಡದ ಲೆಗ್ ಸ್ಪಿನ್ನರ್ ರಾಹುಲ್ ಚಹಾರ್ ತಮ್ಮ ಬಹುಕಾಲದ ಗೆಳತಿ ಇಶಾನಿ ಜೋಹರ್ ಅವರನ್ನು ರಹಸ್ಯವಾಗಿ ವಿವಾಹವಾದರು. ರಾಹುಲ್ ಚಹಾರ್ ಮತ್ತು ಅವರ ಬಹುಕಾಲದ ಗೆಳತಿ ಇಶಾನಿ ಜೋಹರ್ ಇಬ್ಬರೂ ಗೋವಾದ ಅತ್ಯಂತ ಸುಂದರವಾದ ಮದುವೆಯ ತಾಣದಲ್ಲಿ ಸಪ್ತಪದಿ ತುಳಿದಿದ್ದಾರೆ.

ರಾಹುಲ್ ಚಹಾರ್ ಮತ್ತು ಇಶಾನಿ ಜೋಹರ್ 2019 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು ಮತ್ತು ಇಬ್ಬರೂ ಮಾರ್ಚ್ 9, 2022 ರಂದು ವಿವಾಹವಾದರು. ರಾಹುಲ್ ಚಹಾರ್ ಪತ್ನಿ ಇಶಾನಿ ಜೋಹರ್ ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್. ಹಲವು ವರ್ಷಗಳ ಡೇಟಿಂಗ್ ನಂತರ, ಈ ಜೋಡಿ ಇದೀಗ ಸಪ್ತಪದಿ ತುಳಿದಿದ್ದಾರೆ. ವರದಿಗಳ ಪ್ರಕಾರ, ಮಾರ್ಚ್ 12 ರಂದು ಮದುವೆಯ ಆರತಕ್ಷತೆ ನಡೆಯಲಿದೆ.

ರಾಹುಲ್ ಚಹಾರ್ ಮತ್ತು ಅವರ ಬಹುಕಾಲದ ಗೆಳತಿ ಇಶಾನಿ ಜೋಹರ್ ಇಬ್ಬರೂ ಗೋವಾದ ಅತ್ಯಂತ ಸುಂದರವಾದ ಮದುವೆಯ ತಾಣದಲ್ಲಿ ಸಪ್ತಪದಿ ತುಳಿದಿದ್ದಾರೆ.  ರಾಹುಲ್ ಚಹಾರ್ ಮತ್ತು ಇಶಾನಿ ಜೋಹರ್ ಗೋವಾದ ಒಂದು ಹೋಟೆಲ್‌ನಲ್ಲಿ ವಿವಾಹವಾಗಿದ್ದಾರೆ.  

ರಾಹುಲ್ ಚಹಾರ್ ಕ್ರೀಂ ಬಣ್ಣದ ಕಸೂತಿ ಹೊಂದಿರುವ ಶೇರ್ವಾನಿ ಧರಿಸಿದ್ದರು.  ಅದೇ ಸಮಯದಲ್ಲಿ, ಇಶಾನಿ ರಾಮಾ ಗ್ರೀನ್ ಬಣ್ಣದ ಲೆಹೆಂಗಾ ಮತ್ತು ಚೋಲಿ ಧರಿಸಿದ್ದರು. ಹೊಂದಾಣಿಕೆಗಾಗಿ, ರಾಹುಲ್ ಕೂಡಾ ಅದೇ ಬಣ್ಣದ ಸ್ಟೋಲ್ ಅನ್ನು ಹಾಕಿದ್ದಾರೆ. ರಾಹುಲ್ ಮದುವೆಯಲ್ಲಿ ಅವರ ಸೋದರ ಸಂಬಂಧಿಗಳಾದ ಕ್ರಿಕೆಟಿಗ ದೀಪಕ್ ಚಹಾರ್, ಶಿವಂ ಮಾವಿ ಪಾಲ್ಗೊಂಡಿದ್ದರು. ಮಾರ್ಚ್ 12 ರಂದು ಆಗ್ರಾದ ಸ್ಟಾರ್ ಹೋಟೆಲ್‌ನಲ್ಲಿ ನಡೆಯಲಿರುವ ಆರತಕ್ಷತೆ ಸಮಾರಂಭದಲ್ಲಿ ಹಲವಾರು ಭಾರತೀಯ ಕ್ರಿಕೆಟಿಗರು ಭಾಗವಹಿಸುವ ನಿರೀಕ್ಷೆಯಿದೆ.

22 ವರ್ಷ ವಯಸ್ಸಿನ ಭಾರತೀಯ ಕ್ರಿಕೆಟ್ ತಂಡದ ಲೆಗ್ ಸ್ಪಿನ್ನರ್ ರಾಹುಲ್ ಚಹಾರ್ ಅವರು ಭಾರತಕ್ಕಾಗಿ 6 ​​ಟಿ20 ಪಂದ್ಯಗಳನ್ನು ಆಡಿದ್ದಾರೆ, ಅದರಲ್ಲಿ ಅವರು 7 ವಿಕೆಟ್ಗಳನ್ನು ಪಡೆದಿದ್ದಾರೆ. ಅವರು 2021 ರಲ್ಲಿ ಶ್ರೀಲಂಕಾ ವಿರುದ್ಧ ತಮ್ಮ ಏಕೈಕ ODI ಪಂದ್ಯವನ್ನು ಆಡಿದರು. ಈ ಪಂದ್ಯದಲ್ಲಿ ಅವರು 3 ವಿಕೆಟ್ ಪಡೆದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link