ಗೃಹಸ್ಥಾಶ್ರಮ ಪ್ರವೇಶಿಸಿದ ಕ್ರಿಕೆಟಿಗ Vijya Shankar : ಹೀಗಿತ್ತು ಮದುವೆ ಸಂಭ್ರಮ
ಐಪಿಎಲ್ ತಂಡ ಸನ್‌ರೈಸರ್ಸ್ ಹೈದರಾಬಾದ್ (SRH) ವಿಜಯ್ ಶಂಕರ್ (Vijya Shankar) ಅವರ ವಿವಾಹದ ಫೋಟೋಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ವಿಜಯ್ ಶಂಕರ್ ವೈವಾಹಿಕ ಜೀವನ ಸುಖಕರವಾಗಿರಲೆಂದು ಹಾರೈಸಿದ್ದಾರೆ.
ಐಪಿಎಲ್ 2020 ಕ್ಕೆ ದುಬೈಗೆ ತೆರಳುವ ಮೊದಲು ವಿಜಯ್ ಶಂಕರ್ ವೈಶಾಲಿ ವಿಶ್ವೇಶ್ವರನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ವಿಶೇಷ ಸಂದರ್ಭದ ಫೋಟೋವನ್ನು ಶಂಕರ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
30 ವರ್ಷದ ವಿಜಯ್ ಶಂಕರ್ ಅವರು ಮಾರ್ಚ್ 2018 ರಲ್ಲಿ ಕೊಲಂಬೊದಲ್ಲಿ ಶ್ರೀಲಂಕಾ ವಿರುದ್ಧ ಟಿ 20 ಚೊಚ್ಚಲ ಪಂದ್ಯವನ್ನಾಡಿದರು. ನಂತರ 2019 ರ ಜನವರಿಯಲ್ಲಿ ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯವನ್ನು ಆಡಿದರು. 3 ವರ್ಷಗಳ ನಂತರ, ಇದೀಗ ವಿಜಯ್ ಶಂಕರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ತಮಿಳುನಾಡು ಮೂಲದ ವಿಜಯ್ ಶಂಕರ್, ಇಂಗ್ಲೆಂಡ್‌ನಲ್ಲಿ ನಡೆದ 2019 ರ ವಿಶ್ವಕಪ್‌ನಲ್ಲಿ ಬಾಗವಹಿಸಿದ್ದರು. ವಿಶ್ವಕಪ್ ತಂಡದಲ್ಲಿ ವಿಜಯ್ ಶಂಕರ್ ಆಯ್ಕೆಯ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬಂದಿತ್ತು. ಆದರೆ ಅವರು ವಿಶ್ವಕಪ್‌ನಲ್ಲಿ ತಮ್ಮ ಮೊದಲ ಎಸೆತದೊಂದಿಗೆ ವಿಕೆಟ್ ಪಡೆಯುವ ಮೂಲಕ ಎಲ್ಲಾ ಟೀಕೆಗಳಿಗೂ ಉತ್ತರಿಸಿದ್ದರು. ನಂತರ ಗಾಯಗೊಂಡ ಕಾರಣ, ತಂಡದಿಂದ ದೂರ ಉಳಿಯಬೇಕಾಯಿತು. ಮದುವೆಯ ನಂತರ ಮತ್ತೆ ಅದೃಷ್ಟದಬಾಗಿಲು ತೆರೆದು, ಮತ್ತೆ ಭಾರತ ತಂಡದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.