ವಿಚ್ಛೇದಿತೆಯನ್ನ ಪ್ರೀತಿಸಿ ಮದ್ವೆಯಾದ ಟೀಂ ಇಂಡಿಯಾದ ಈ ಸ್ಪಿನ್ ಮಾಂತ್ರಿಕ ಓದಿದ್ದು ಇಂಜಿನಿಯರಿಂಗ್, ಆಗಿದ್ದು ಕ್ರಿಕೆಟರ್! ಯಾರೆಂದು ತಿಳಿಯಿತೇ?

Sun, 09 Jun 2024-4:44 pm,

ಭಾರತೀಯ ಕ್ರಿಕೆಟ್‌’ನಲ್ಲಿ ಜಂಬೋ ಎಂದೇ ಖ್ಯಾತರಾಗಿರುವ ಅನಿಲ್ ಕುಂಬ್ಳೆ ಅತ್ಯಂತ ಸರಳ ಜೀವನ ನಡೆಸಿದವರು. ಅವರ 18 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಯಾವೊಂದು ವಿವಾದದಲ್ಲೂ ಅವರ ಹೆಸರು ಕೇಳಿಬಂದಿಲ್ಲ.

ಸ್ಪಿನ್ ಬೌಲರ್ ಆಗಿ ವೃತ್ತಿ ಜೀವನ ಆರಂಭಿಸಿದ ಕುಂಬ್ಳೆ ಟೀಂ ಇಂಡಿಯಾ ನಾಯಕತ್ವವನ್ನೂ ವಹಿಸಿದ್ದರು. ನಿವೃತ್ತಿಯ ನಂತರ ಭಾರತ ತಂಡದ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದರು. ಸಾಮಾನ್ಯವಾಗಿ ಕ್ರಿಕೆಟಿಗರಿಗೆ ಭಾರತದಲ್ಲಿ ಸೆಲೆಬ್ರಿಟಿ ಸ್ಥಾನಮಾನ ಸಿಗುತ್ತದೆ. ಅಷ್ಟೇ ಅಲ್ಲದೆ, ಅದೆಷ್ಟೋ ಹುಡುಗಿಯರು, ಕ್ರಿಕೆಟಿಗರನ್ನು ಮದುವೆಯಾಗುವ ಇಚ್ಛೆ ಹೊಂದಿರುತ್ತಾರೆ. ಆದರೆ ಕುಂಬ್ಳೆ ಮಾತ್ರ ಮದುವೆಯಾಗಿದ್ದು ವಿವಾಹಿತ ಮಹಿಳೆಯನ್ನು.

ಅನಿಲ್ ಕುಂಬ್ಳೆ ಅವರು ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಚೇತನಾ ರಾಮತೀರ್ಥ ಅವರನ್ನು ಮೊದಲ ಭೇಟಿಯಲ್ಲೇ ಪ್ರೀತಿಸುತ್ತಿದ್ದರು. ಆ ಸಮಯದಲ್ಲಿ ಚೇತನಾ ಮದುವೆಯಾಗಿದ್ದರು. 1986 ರಲ್ಲಿ, ಚೇತನಾ ಮೈಸೂರಿನ ಅಂಗಡಿ ದಲ್ಲಾಳಿಯನ್ನು ವಿವಾಹವಾಗಿದ್ದರು. ಆದರೆ ಆ ಮದುವೆಯಿಂದ ಅವರು ಸಂತೋಷವಾಗಿರಲಿಲ್ಲ.

1998ರಲ್ಲಿ ಚೇತನಾ ತನ್ನ ಪತಿಯಿಂದ ವಿಚ್ಛೇದನ ಪಡೆದರು. ಆ ವಿಚ್ಛೇದನವನ್ನು ಪಡೆದುಕೊಳ್ಳುವಾಗ ಕುಂಬ್ಳೆ ಚೇತನಾಗೆ ಬೆಂಬಲವಾಗಿ ನಿಂತಿದ್ದರು. ಕೆಲ ದಿನಗಳ ಬಳಿಕ ಕುಂಬ್ಳೆ ಚೇತನಾರ ಬಳಿ ಮದುವೆ ಪ್ರಸ್ತಾಪವಿಟ್ಟಾಗ ಆಕೆ ಒಪ್ಪಲಿಲ್ಲ. ತನಗೆ ಪ್ರೀತಿ, ಮದುವೆಯಂತಹ ಸಂಬಂಧಗಳಲ್ಲಿ ನಂಬಿಕೆ ಇಲ್ಲ ಎಂದು ಹೇಳುತ್ತಲೇ ಇದ್ದರು. ಕಡೆಗೂ ಕುಂಬ್ಳೆ ಪ್ರೀತಿಗೆ ಮಣಿದ ಚೇತನ 1999 ರಲ್ಲಿ ವಿವಾಹವಾದರು.

ಯಾವುದೇ ಕಷ್ಟದಲ್ಲೂ ಛಲ ಬಿಡದ ಆಟಗಾರರಲ್ಲಿ ಅನಿಲ್ ಕುಂಬ್ಳೆ ಕೂಡ ಒಬ್ಬರು. 2002 ರಲ್ಲಿ, ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಟೆಸ್ಟ್ ಪಂದ್ಯ ನಡೆಯುತ್ತಿತ್ತು, ಇದರಲ್ಲಿ ಕುಂಬ್ಳೆ, ಮಾರ್ವನ್ ಧಿಲ್ಲೋನ್ ಅವರ ಬೌನ್ಸರ್‌’ನಿಂದ ಗಾಯಗೊಂಡರು. ಇಷ್ಟೆಲ್ಲಾ ಆದರೂ ಮೈದಾನದಿಂದ ಹೊರಬರದೆ 14 ಓವರ್ ಬೌಲಿಂಗ್ ಮಾಡಿ ದವಡೆ ಮುರಿದುಕೊಂಡಿದ್ದರು.

ದಾಂಪತ್ಯ ವಿಚಾರಕ್ಕೆ ಬಂದರೂ ಸಹ, ಕುಂಬ್ಳೆ ಚೇತನಾರ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಲ್ಲದೆ ಆಕೆಗೆ ಸಂಬಂಧಿಸಿದ ಪ್ರತಿಯೊಂದು ಸಂಬಂಧವನ್ನು ತನ್ನದೆಂದು ಪರಿಗಣಿಸಿದ್ದರು. ಚೇತನಾ ಅವರಿಗೆ ಒಬ್ಬಳು ಮಗಳಿದ್ದಳು. ವಿಚ್ಛೇದನದ ನಂತರ ಕುಂಬ್ಳೆ, ಆಕೆಯನ್ನು ತಮ್ಮ ಮಗಳೆಂದೇ ಪರಿಗಣಿಸಿದರು.

1998 ರಿಂದ 2004 ರವರೆಗೆ, ಕುಂಬ್ಳೆ ಮತ್ತು ಚೇತನಾ ತಮ್ಮ ಮಗಳು ಅರುಣಿಗಾಗಿ ನ್ಯಾಯಾಲಯದಲ್ಲಿ ಹೋರಾಡಿದರು. ಆರಂಭದಲ್ಲಿ ನ್ಯಾಯಾಲಯ ಚೇತನಾ ಅವರ ಅರ್ಜಿಯನ್ನು ತಿರಸ್ಕರಿಸಿತ್ತು, ಆದರೆ ನಂತರ ತಾಯಿಯ ಪರವಾಗಿ ತೀರ್ಪು ನೀಡಿತು. ಕುಟುಂಬದೊಂದಿಗಿನ ಫೋಟೋಗಳನ್ನು ಕುಂಬ್ಳೆ ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ.

ಅಂದಹಾಗೆ ಅನಿಲ್ ಕುಂಬ್ಳೆ, ಭಾರತದ ಅತ್ಯಂತ ವಿದ್ಯಾವಂತ ಕ್ರಿಕೆಟಿಗರಲ್ಲಿ ಒಬ್ಬರು. ರಾಷ್ಟ್ರೀಯ ವಿದ್ಯಾಲಯ ಕಾಲೇಜ್ ಆಫ್ ಇಂಜಿನಿಯರಿಂಗ್ (RVCE) ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌’ನಲ್ಲಿ ಪದವಿ ಪಡೆದಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link