ಎಲ್ಲಾ ಮಾದರಿ ಕ್ರಿಕೆಟ್‌ʼಗೆ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾದ ಸ್ಟಾರ್‌ ವೇಗಿ: 10 ರನ್‌ʼಗೆ 4 ವಿಕೆಟ್‌ ಕಬಳಿಸಿ ಮಿಂಚಿದ್ದ ಬೌಲರ್ ಈತ

Fri, 30 Aug 2024-2:16 pm,

ಭಾರತೀಯ ಕ್ರಿಕೆಟಿಗ ಬರೀಂದರ್ ಸ್ರಾನ್ ತಮ್ಮ 31ನೇ ವಯಸ್ಸಿನಲ್ಲಿ ಕ್ರಿಕೆಟ್'ಗೆ ವಿದಾಯ ಹೇಳಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಶೇರ್‌ ಮಾಡುವ ಮೂಲಕ ಎಡಗೈ ವೇಗದ ಬೌಲರ್ ಅಂತರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌'ಗೆ ನಿವೃತ್ತಿ ಘೋಷಿಸಿದ್ದಾರೆ.

 

ಸ್ರಾನ್ ಅವರು ಜನವರಿ 2016 ಮತ್ತು ಜೂನ್ 2016ರ ನಡುವೆ ಭಾರತಕ್ಕಾಗಿ 6 ​​ODI ಮತ್ತು 2 T20 ಪಂದ್ಯಗಳನ್ನು ಆಡಿದ್ದರು. ಆದರೆ ಅದಾದ ಬಳಿಕ ಟೀಂ ಇಂಡಿಯಾದಲ್ಲಿ ಅವಕಾಶವೇ ಸಿಗಲಿಲ್ಲ.  

 

ಇನ್‌ʼಸ್ಟಾಗ್ರಾಂ ಪೋಸ್ಟ್‌ ಶೇರ್‌ ಮಾಡಿದ ಅವರು, "ಈಗ ನಾನು ಅಧಿಕೃತವಾಗಿ ಕ್ರಿಕೆಟ್‌ʼನಿಂದ ನಿವೃತ್ತನಾಗುತ್ತಿದ್ದೇನೆ. ನನ್ನ ಪ್ರಯಾಣವನ್ನು ಕೃತಜ್ಞತೆಯಿಂದ ಹಿಂತಿರುಗಿ ನೋಡುತ್ತೇನೆ. 2009 ರಲ್ಲಿ ಬಾಕ್ಸಿಂಗ್‌ʼನಿಂದ ಕ್ರಿಕೆಟ್‌ʼಗೆ ಬದಲಾದ ನನ್ನ ವೃತ್ತಿಬದುಕು, ನನಗೆ ಲೆಕ್ಕವಿಲ್ಲದಷ್ಟು ಮತ್ತು ನಂಬಲಾಗದ ಅನುಭವಗಳನ್ನು ನೀಡಿದೆ. ವೇಗದ ಬೌಲಿಂಗ್ ಶೀಘ್ರದಲ್ಲೇ ನನ್ನ ಅದೃಷ್ಟವನ್ನು ಬದಲಾಯಿಸಿತು. IPL ಫ್ರಾಂಚೈಸಿಯನ್ನು ಪ್ರತಿನಿಧಿಸುವ ಅದೃಷ್ಟದ ಬಾಗಿಲು ತೆರೆಯಿತು, ಇದು 2016 ರಲ್ಲಿ ಭಾರತವನ್ನು ಪ್ರತಿನಿಧಿಸುವ ಸರ್ವೋಚ್ಚ ಗೌರವಕ್ಕೆ ಕಾರಣವಾಯಿತು. ನನ್ನ ಅಂತರರಾಷ್ಟ್ರೀಯ ವೃತ್ತಿಜೀವನ ಚಿಕ್ಕದಾಗಿದ್ದರೂ, ಅದರ ನೆನಪುಗಳನ್ನು ಶಾಶ್ವತವಾಗಿ ಪಾಲಿಸುತ್ತೇನೆ. ನನ್ನ ಪ್ರಯಾಣದುದ್ದಕ್ಕೂ ನನಗೆ ಬೆಂಬಲ ನೀಡಿದ ತರಬೇತುದಾರ ಮತ್ತು ನಿರ್ವಹಣೆಯನ್ನು ನೀಡಿದ ದೇವರಿಗೆ ನಾನು ಯಾವಾಗಲೂ ಕೃತಜ್ಞರಾಗಿರುತ್ತೇನೆ" ಎಂದು ಭಾವನಾತ್ಮಕ ಪೋಸ್ಟ್‌ ಶೇರ್‌ ಮಾಡಿದ್ದಾರೆ.

 

ಕಿಂಗ್ಸ್ XI ಪಂಜಾಬ್‌ʼನ ಜಾಹೀರಾತು ನೋಡಿದ್ದ ರೈತನ ಮಗ ಬರಿಂದರ್ ಸ್ರಾನ್ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಅದರಲ್ಲಿ ಯುವಕರನ್ನು ಟ್ರಯಲ್ಸ್‌ʼನಲ್ಲಿ ಭಾಗವಹಿಸಲು ಆಹ್ವಾನಿಸಲಾಗಿತ್ತು. ಇದಕ್ಕೂ ಮುನ್ನ ಅವರು ಹರಿಯಾಣದ ಭಿವಾನಿ ಬಾಕ್ಸಿಂಗ್ ಕ್ಲಬ್‌‌ʼನಲ್ಲಿ ಬಾಕ್ಸರ್ ಆಗಿ ತರಬೇತಿ ಪಡೆಯುತ್ತಿದ್ದರು. ಟೆನ್ನಿಸ್ ಬಾಲ್‌ʼಗಳಲ್ಲಿ ಗಲ್ಲಿ ಕ್ರಿಕೆಟ್ ಆಡುತ್ತಿದ್ದ ಹುಡುಗ, ಕಿಂಗ್ಸ್ ಕಪ್ ತಲುಪಿ ಪಂಜಾಬ್‌ʼನ ಅಗ್ರ 35-40 ಅನ್‌ಕ್ಯಾಪ್ಡ್ ಕ್ರಿಕೆಟಿಗರಲ್ಲಿ ಒಬ್ಬನಾದ. ಅಂತಿಮವಾಗಿ, 2015 ರ ಐಪಿಎಲ್ ಹರಾಜಿನಲ್ಲಿ ಅವರನ್ನು ರಾಜಸ್ಥಾನ್ ರಾಯಲ್ಸ್ ತೆಗೆದುಕೊಂಡಿತು.

 

ಒಂದು ವರ್ಷದ ನಂತರ ಅವರು ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಭಾರತೀಯ ODI ತಂಡದಲ್ಲಿ ಆಯ್ಕೆಯಾದರು, ಇದು ಸ್ರಾನ್ ಅವರ ಕ್ರಿಕೆಟ್ ಪ್ರಯಾಣದ ಅತಿದೊಡ್ಡ ಕ್ಷಣ. ಅಲ್ಲಿಯವರೆಗೆ ಅವರು ತಮ್ಮ ಹೆಸರಿಗೆ ಎಂಟು ಲಿಸ್ಟ್ ಎ ಪಂದ್ಯಗಳ ಅನುಭವವನ್ನು ಹೊಂದಿದ್ದರಷ್ಟೇ... ಜನವರಿ 12 ರಂದು ಪರ್ತ್‌ʼನಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ 56 ರನ್‌ʼಗಳಿಗೆ 3 ವಿಕೆಟ್‌ʼಗಳನ್ನು ಪಡೆದರು.

 

ಬರಿಂದರ್ ಸ್ರಾನ್ ಜೂನ್ 2016 ರಲ್ಲಿ ಜಿಂಬಾಬ್ವೆಯ ವೈಟ್-ಬಾಲ್ ಪ್ರವಾಸಕ್ಕಾಗಿ ತಂಡದಲ್ಲಿ ಆಯ್ಕೆಯಾದರು. ಅಲ್ಲಿ ತಮ್ಮ T20 ಚೊಚ್ಚಲ ಪಂದ್ಯವನ್ನು ಆಡಿದ ಸ್ರಾನ್, ಹರಾರೆಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಅವರು 10 ರನ್‌ʼಗಳಿಗೆ 4 ವಿಕೆಟ್‌ ಕಬಳಿಸುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಇದು ಚೊಚ್ಚಲ ಟಿ20ಯಲ್ಲಿ ಯಾವುದೇ ಭಾರತೀಯ ಬೌಲರ್‌ʼನ ಅತ್ಯುತ್ತಮ ಪ್ರದರ್ಶನವಾಗಿದೆ.

 

ಒಟ್ಟಾರೆಯಾಗಿ ಸ್ರಾನ್ 2011 ಮತ್ತು 2021 ರ ನಡುವೆ 18 ಪ್ರಥಮ ದರ್ಜೆ, 31 ಲಿಸ್ಟ್-ಎ ಮತ್ತು 48 T20 ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್‌ʼನಲ್ಲಿ ರಾಯಲ್ಸ್, ಕಿಂಗ್ಸ್ ಇಲೆವೆನ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳನ್ನು ಪ್ರತಿನಿಧಿಸಿದ್ದರು. ಫೆಬ್ರವರಿ 2021 ರಲ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಮಧ್ಯಪ್ರದೇಶ ವಿರುದ್ಧ ಪಂಜಾಬ್ ಪರ ಸ್ರಾನ್ ಕೊನೆಯದಾಗಿ ಆಡಿದ್ದರು.

 

ಬರೀಂದರ್ ಸ್ರಾನ್ ಐಪಿಎಲ್‌ʼನಲ್ಲಿ ಮುಂಬೈ ಇಂಡಿಯನ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ರಾಜಸ್ಥಾನ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಪರ ಆಡಿದ್ದು, 2015 ಮತ್ತು 2019 ರ ನಡುವೆ 24 ಪಂದ್ಯಗಳಲ್ಲಿ 18 ವಿಕೆಟ್‌ʼಗಳನ್ನು ಪಡೆದಿದ್ದಾರೆ. 2020-21 ವಿಜಯ್ ಹಜಾರೆ ಟ್ರೋಫಿಯಲ್ಲಿ ಮಧ್ಯಪ್ರದೇಶ ವಿರುದ್ಧ ಪಂಜಾಬ್‌ʼಗಾಗಿ ತಮ್ಮ ಕೊನೆಯ ಸ್ಪರ್ಧಾತ್ಮಕ ಪಂದ್ಯವನ್ನು ಆಡಿದ್ದರು. 18 ಪ್ರಥಮ ದರ್ಜೆ ಪಂದ್ಯಗಳಲ್ಲಿ 47 ವಿಕೆಟ್ ಪಡೆದಿದ್ದಲ್ಲದೆ, 31 ಲಿಸ್ಟ್ ಎ ಪಂದ್ಯಗಳಲ್ಲಿ 45 ವಿಕೆಟ್ ಪಡೆದಿದ್ದಾರೆ.  48 ಟಿ20 ಪಂದ್ಯಗಳಲ್ಲಿ 45 ವಿಕೆಟ್‌ ಪಡೆದಿದ್ದಾರೆ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link