ಸಾವಿರ ಕೋಟಿ ಸಾಮ್ರಾಜ್ಯದ ಒಡೆಯ ವಿರಾಟ್ ಕೊಹ್ಲಿ ವಿದ್ಯಾರ್ಹತೆ ಏನು ಗೊತ್ತಾ? ತಿಳಿದರೆ ದಂಗಾಗೋದು ಖಂಡಿತ
ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇನ್ನು ಕೊಹ್ಲಿಗೆ ಅಪಾರ ಪ್ರಮಾಣದಲ್ಲಿ ಅಭಿಮಾನಿ ಬಳಗವಿದೆ. ಇವೆಲ್ಲದರ ಹೊರತಾಗಿ, ನಾವಿಂದು ಈ ವರದಿಯಲ್ಲಿ ವಿರಾಟ್ ಕೊಹ್ಲಿ ಶಿಕ್ಷಣದ ಬಗ್ಗೆ ಮಾಹಿತಿ ನೀಡಲಿದ್ದೇವೆ.
ವಿರಾಟ್ ಕೊಹ್ಲಿ 5 ನವೆಂಬರ್ 1988 ರಂದು ದೆಹಲಿಯಲ್ಲಿ ಜನಿಸಿದರು. ವಿರಾಟ್ ತಂದೆ ಪ್ರೇಮ್ ಕೊಹ್ಲಿ ವೃತ್ತಿಯಲ್ಲಿ ಕ್ರಿಮಿನಲ್ ವಕೀಲರಾಗಿದ್ದರು. ತಾಯಿ ಸರೋಜ್ ಕೊಹ್ಲಿ ಗೃಹಿಣಿ. ವಿರಾಟ್ ಅಣ್ಣನ ಹೆಸರು ವಿಕಾಸ್ ಮತ್ತು ಅಕ್ಕನ ಹೆಸರು ಭಾವನಾ.
ಸದ್ಯ ಸಾವಿರ ಕೋಟಿ ಸಾಮ್ರಾಜ್ಯ ಕಟ್ಟಿರುವ ವಿರಾಟ್ ಕೊಹ್ಲಿ, ಅಧ್ಯಯನದ ವಿಷಯದಲ್ಲಿ ಮಾತ್ರ ಹಿಂದುಳಿದಿದ್ದರು. ಕೊಹ್ಲಿ ಓದಿದ್ದು ಕೇವಲ 12ನೇ ತರಗತಿ.
ವಿಶಾಲ್ ಭಾರತಿ ಪಬ್ಲಿಕ್ ಸ್ಕೂಲ್’ನಲ್ಲಿ 9 ನೇ ತರಗತಿಯವರೆಗೆ ಓದಿದರೆ, ನಂತರ 12ನೇ ತರಗತಿಯವರೆಗೆ ಪಶ್ಚಿಮ ವಿಹಾರ್’ನ ಸೇವಿಯರ್ ಕಾನ್ವೆಂಟ್ ಶಾಲೆಯಲ್ಲಿ ಓದಿದರು. ಕ್ರಿಕೆಟ್ ಕಾರಣದಿಂದಲೇ ಅಧ್ಯಯನದಿಂದ ದೂರವಿದ್ದರು.
ವಿರಾಟ್ ಕೊಹ್ಲಿಗೆ ‘ಇತಿಹಾಸ’ವೆಂದರೆ ನೆಚ್ಚಿನ ವಿಷಯವಾಗಿತ್ತು ಎಂದು ಅನೇಕ ಸಂದರ್ಶನಗಳಲ್ಲಿ ವಿವರಿಸಿದ್ದಾರೆ. ಇತರ ಅನೇಕ ವಿದ್ಯಾರ್ಥಿಗಳಂತೆ ಗಣಿತ ಅಂದ್ರೆ ಇಷ್ಟವಿರಲಿಲ್ಲವಂತೆ.
ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಅವರಿಂದ ಹೆಚ್ಚು ಪ್ರಭಾವಿತರಾಗಿದ್ದರು. ಕ್ರಿಕೆಟ್ ಮೇಲಿನ ಉತ್ಸಾಹದಿಂದಾಗಿ, ತಂದೆ ಪ್ರೇಮ್ ಕೊಹ್ಲಿ ಅವರಿಗೆ 9ನೇ ವಯಸ್ಸಿನಲ್ಲಿ ಕ್ರಿಕೆಟ್ ತರಬೇತಿ ನೀಡಲು ಪ್ರಾರಂಭಿಸಿದರು. ದೆಹಲಿ ಕ್ರಿಕೆಟ್ ಅಕಾಡೆಮಿಯಲ್ಲಿ ಕೊಹ್ಲಿ ತಮ್ಮ ಕ್ರಿಕೆಟ್ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ.