Expensive Cars: ಭಾರತೀಯ ಕ್ರಿಕೆಟಿಗರ ಗ್ಯಾರೇಜ್‌ನಲ್ಲಿವೆ ದುಬಾರಿ ಬೆಲೆಯ ಕಾರುಗಳು…

Sun, 05 Sep 2021-1:25 pm,

ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ MINI Countryman ದುಬಾರಿ ಕಾರಿನ ಹೆಮ್ಮೆಯ ಮಾಲೀಕರಾಗಿದ್ದಾರೆ. ಈ ಕಾರಿನ ಬೆಲೆ ಭಾರತದಲ್ಲಿ ಸುಮಾರು 38.5 ಲಕ್ಷ ರೂ. ಆಗುತ್ತದೆ.

ಟೀಂ ಇಂಡಿಯಾದ ಸ್ಫೋಟಕ ಆರಂಭಿಕ ಆಟಗಾರ, ಹಿಟ್ ಮ್ಯಾನ್ ರೋಹಿತ್ ಶರ್ಮಾ Lamborghini Urus ದುಬಾರಿ ಬೆಲೆಯ ಕಾರು ಹೊಂದಿದ್ದಾರೆ. ಈ ಕಾರಿನ ಬೆಲೆ ಸುಮಾರು 3 ಕೋಟಿ ರೂ.ನಷ್ಟಿದೆ.

ಟೀಂ ಇಂಡಿಯಾದ ಕ್ಯಾಪ್ಟನ್, ರನ್ ಮಷಿನ್ ವಿರಾಟ್ ಕೊಹ್ಲಿ 2018ರಲ್ಲಿ ತಮ್ಮ ಸಹೋದರ ವಿಕಾಸ್ ಹೆಸರಿನಲ್ಲಿ ‘Bentley Continental GT’ ದುಬಾರಿ ಕಾರು ಖರೀದಿಸಿದರು. ಈ ಕಾರಿನ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 3.29 ಕೋಟಿ ರೂ.ನಷ್ಟಿದೆ.  

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ಇತ್ತೀಚೆಗಷ್ಟೇ  BWN M8 ದುಬಾರಿ ಕಾರು ಖರೀದಿಸಿದ್ದಾರೆ. ಇದರ ಬೆಲೆ 2.18 ಕೋಟಿ ರೂ. ಇದೆ.   

ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ SUV Audi Q5 ಕಾರಿನ ಹೆಮ್ಮೆಯ ಮಾಲೀಕರಾಗಿದ್ದಾರೆ. ಈ ಕಾರಿನ ಬೆಲೆ 55 ಲಕ್ಷ ರೂ. ಆಗಿದೆ.

ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿಯವರು Hummer H2 ಕಾರಿನ ಹೆಮ್ಮೆಯ ಒಡೆಯರಾಗಿದ್ದಾರೆ. ಈ ಕಾರಿನ ಬೆಲೆ ಸುಮಾರು 75 ಲಕ್ಷ ರೂ.ನಿಂದ 1 ಕೋಟಿ ರೂ.ನಷ್ಟಿದೆ.  

ಟೀಂ ಇಂಡಿಯಾದ ಮಾಜಿ ಆಟಗಾರ ವಿರೇಂದ್ರ ಸೆಹವಾಗ್ ಅವರು ದುಬಾರಿ ಬೆಲೆಯ Bentley Continental Flying Spur ಕಾರು ಹೊಂದಿದ್ದಾರೆ. ಈ ಕಾರಿನ ಬೆಲೆ ಸುಮಾರು 3.21 ಕೋಟಿ ರೂ.ನಷ್ಟಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link