Indian Places Lookalike Foreign Destinations: ವಿದೇಶಿ ಸ್ಥಳಗಳನ್ನು ಹೋಲುವ ಭಾರತೀಯ ತಾಣಗಳು

Mon, 27 Sep 2021-11:48 am,

ಚಂಪಾ ಗಾಲಿ (Champa Gali) ದಕ್ಷಿಣ ದೆಹಲಿಯ ಸಾಕೇತ್‌ನಲ್ಲಿದೆ. ಅಲ್ಲಿ ಐಷಾರಾಮಿ ಕೆಫೆಗಳು ಮತ್ತು ಕರಕುಶಲ ಮಳಿಗೆಗಳಿವೆ, ಇವುಗಳನ್ನು ಪ್ಯಾರಿಸ್ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ. 

ಹರಿಯಾಣದ ಗುರುಗ್ರಾಮದಲ್ಲಿ ಕನಸಿನ ಸಾಮ್ರಾಜ್ಯವಿದೆ. ಇದರ ಹೆಸರು ಕಿಂಗ್ಡಮ್ ಆಫ್ ಡ್ರೀಮ್ಸ್ (Kingdom Of Dreams). ಇದು ಕನಸಿನ ನಗರದಂತೆ ಭಾಸವಾಗುತ್ತದೆ. ಇಲ್ಲಿ ಸಂಸ್ಕೃತಿ ಬೀದಿ ಇದ್ದು ಅದು ಬಹುತೇಕ ಜನರಿಗೆ ತುಂಬಾ ಇಷ್ಟವಾಗುತ್ತದೆ. ಇದು ರಾಜ್ಯ ಮಂಟಪ, ಕರಕುಶಲ ಗ್ರಾಮ ಮತ್ತು ವಿಷಯಾಧಾರಿತ ರೆಸ್ಟೋರೆಂಟ್‌ಗಳನ್ನು ಹೊಂದಿದೆ.  

ಗ್ರ್ಯಾಂಡ್ ವೆನಿಸ್ ಮಾಲ್ (The Grand Venice Mall) ಅನ್ನು ಉತ್ತರ ಪ್ರದೇಶದ ನೋಯ್ಡಾದಲ್ಲಿ (Uttar Pradesh) ಇಟಲಿಯ ಥೀಮ್ ಮೇಲೆ ನಿರ್ಮಿಸಲಾಗಿದೆ. ನೀವು ಇಲ್ಲಿಗೆ ಹೋದಾಗ ನಿಮಗೆ ವೆನಿಸ್‌ನಂತೆ ಭಾಸವಾಗುತ್ತದೆ. ನೀಲಿ ನೀರಿನ ಮಾರ್ಗದಲ್ಲಿ ನೀವು ಇಲ್ಲಿ ದೋಣಿ ಸವಾರಿ ಕೂಡ ಮಾಡಬಹುದು.

ನಿಮಗೆ ಬೇಕಾದರೆ, ದೇಶದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೇ ವಿಶ್ವದ 6 ಅಂತಾರಾಷ್ಟ್ರೀಯ ಸ್ಥಳಗಳನ್ನು ಒಂದೇ ಸ್ಥಳದಲ್ಲಿ ಕಣ್ತುಂಬಿಕೊಳ್ಳಬಹುದು. ವಿಶ್ವದ ಏಳು ಅದ್ಭುತಗಳನ್ನು ವೇಸ್ಟ್ ಟು ವಂಡರ್ ಥೀಮ್ ಪಾರ್ಕ್‌ನಲ್ಲಿ (Waste to Wonder Theme Park) ವಿನ್ಯಾಸಗೊಳಿಸಲಾಗಿದೆ. ಇಲ್ಲಿ ನೀವು ಗಿಜಾದ ಪಿರಮಿಡ್, ಕೊಲೊಸಿಯಮ್ ಆಫ್ ರೋಮ್, ಅಮೆರಿಕದ ಲಿಬರ್ಟಿ ಪ್ರತಿಮೆ, ಬ್ರೆಜಿಲ್‌ನ ರಿಡೀಮರ್, ಇಟಲಿಯ ಪಿಸಾ ಗೋಪುರ ಮತ್ತು ಫ್ರಾನ್ಸ್‌ನ ಐಫೆಲ್ ಟವರ್ ಅನ್ನು ನೋಡಬಹುದು. (ಫೈಲ್ ಫೋಟೋ/ಕ್ರೆಡಿಟ್- ಪಿಟಿಐ)

ಇದನ್ನೂ ಓದಿ- ಏರ್ಪೋರ್ಟ್ ಅನ್ನು ಮೀರಿಸುವಂತಿದೆ ಈ ರೈಲು ನಿಲ್ದಾಣದ Lounge

ದೆಹಲಿಯ ಲೋಟಸ್ ಟೆಂಪಲ್ (Lotus Temple) ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಒಪೇರಾ ಹೌಸ್ ಅನ್ನು ಹೋಲುತ್ತದೆ. ಇದು ಕಮಲದ ಹೂವಿನಂತೆ ಕಾಣುತ್ತದೆ. ಲೋಟಸ್ ಟೆಂಪಲ್ ಬಳಿಯ ಉದ್ಯಾನದ ನೋಟವು ಸುಂದರವಾಗಿದೆ.

ದೆಹಲಿಯಲ್ಲಿರುವ ಕುತುಬ್ ಮಿನಾರ್ (Qutub Minar) ಮತ್ತು ಇಟಲಿಯ ಪಿಸಾ ಗೋಪುರ ಕೂಡ ನೋಟದಲ್ಲಿ ಹೋಲುತ್ತವೆ. ಪಿಸಾ ಗೋಪುರವು 57 ಮೀಟರ್ ಎತ್ತರದಲ್ಲಿದ್ದರೆ, ಕುತುಬ್ ಮಿನಾರ್ 73 ಮೀಟರ್ ಎತ್ತರದಲ್ಲಿದೆ. ಕುತುಬ್-ಉದ್-ದಿನ್ ಐಬಕ್, ಗುಲಾಮ ರಾಜವಂಶದ ಸುಲ್ತಾನ, ಕುತುಬ್ ಮಿನಾರ್ ಅನ್ನು ನಿರ್ಮಿಸಿದ. (ಫೈಲ್ ಫೋಟೋ/ಕ್ರೆಡಿಟ್- ಪಿಟಿಐ)

ಇದನ್ನೂ ಓದಿ- mAadhaar App: ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಈ 35 ಕೆಲಸಗಳನ್ನು ಮನೆಯಿಂದಲೇ ಮಾಡಬಹುದು, ಇಲ್ಲಿದೆ ಮಾರ್ಗ

ದೇಶದ ರಾಜಧಾನಿ ದೆಹಲಿಯಲ್ಲಿರುವ ಇಂಡಿಯಾ ಗೇಟ್ ಕೂಡ ಫ್ರಾನ್ಸ್‌ನ ಆರ್ಕ್ ಡಿ ಟ್ರಯಂಫೆ  (Arc de Triomphe) ಯಂತೆ ಕಾಣುತ್ತದೆ. ಇಂಡಿಯಾ ಗೇಟ್‌ನ ನಿರ್ಮಾಣವು 12 ಫೆಬ್ರವರಿ 1931 ರಂದು ಪೂರ್ಣಗೊಂಡಿತು. ಇಂಡಿಯಾ ಗೇಟ್‌ನ ಮೊದಲ ಹೆಸರು 'ಆಲ್ ಇಂಡಿಯಾ ವಾರ್ ಮೆಮೋರಿಯಲ್'. (ಫೈಲ್ ಫೋಟೋ/ಕ್ರೆಡಿಟ್- ಪಿಟಿಐ)

ZEENEWS TRENDING STORIES

By continuing to use the site, you agree to the use of cookies. You can find out more by Tapping this link