ತನಗಿಂತ 10 ವರ್ಷ ಕಿರಿಯ ಯುವತಿ ಜತೆ ಇರ್ಫಾನ್ ಪಠಾಣ್ ಮದ್ವೆ! ಸೌಂದರ್ಯದಲ್ಲಿ ನಟಿಯರನ್ನೂ ಮೀರಿಸ್ತಾಳೆ ಈ ಬ್ಯೂಟಿ

Sat, 15 Jun 2024-5:36 pm,

ಭಾರತದ ಮಾಜಿ ಸ್ಟಾರ್ ಕ್ರಿಕೆಟಿಗ ಇರ್ಫಾನ್ ಪಠಾಣ್ ತಮ್ಮ ಪತ್ನಿ ಸಫಾ ಬೇಗ್ ಜೊತೆಗಿನ ಅನೇಕ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ

ಸಫಾ ಬೇಗ್ ಹುಟ್ಟಿದ್ದು ಸೌದಿ ಅರೇಬಿಯಾದ ಜೆಡ್ಡಾ ಜಿಲ್ಲೆಯ ಅಜೀಜಿಯಾದಲ್ಲಿ. ಅದಾದ ಬಳಿಕ ಸೌದಿ ಅರೇಬಿಯಾದ ಇಂಟರ್‌ನ್ಯಾಶನಲ್ ಇಂಡಿಯನ್ ಸ್ಕೂಲ್‌’ನಲ್ಲಿ ಶಿಕ್ಷಣ ಪೂರ್ತಿಗೊಳಿಸಿದ್ದಾರೆ. ಸಫಾ ಮತ್ತು ಇರ್ಫಾನ್ ಮೊದಲ ಬಾರಿಗೆ 2014 ರಲ್ಲಿ ದುಬೈನಲ್ಲಿ ಭೇಟಿಯಾಗಿದ್ದರು ಎನ್ನಲಾಗಿದೆ. ಇನ್ನು ಇವರಿಬ್ಬರು 2016ರಲ್ಲಿ ವಿವಾಹವಾದರು.

ಭಾರತೀಯ ತಂಡದ ಮಾಜಿ ಆಟಗಾರ ಇರ್ಫಾನ್ ಪಠಾಣ್ 23 ಅಕ್ಟೋಬರ್ 1984 ರಂದು ಜನಿಸಿದರೆ, ಪತ್ನಿ ಸಫಾ ಬೇಗ್ 28 ಫೆಬ್ರವರಿ 1994 ರಂದು ಸೌದಿ ಅರೇಬಿಯಾದಲ್ಲಿ ಜನಿಸಿದರು. ಅಂದರೆ ಇರ್ಫಾನ್ ಪತ್ನಿ ಅವರಿಗಿಂತ 10 ವರ್ಷ ಚಿಕ್ಕವರು.

ಇರ್ಫಾನ್ ಪಠಾಣ್ ಮತ್ತು ಸಫಾ ಬೇಗ್ ಎರಡು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದಾರೆ. ಇದರ ನಂತರ ಇಬ್ಬರೂ ವಿವಾಹವಾದರು. 4 ಫೆಬ್ರವರಿ 2016 ರಂದು, ಇರ್ಫಾನ್ ಪಠಾಣ್ ಮತ್ತು ಸಫಾ ಬೇಗ್ ವಿವಾಹವಾದರು.

ಸಫಾ ಬೇಗ್ ತುಂಬಾ ಸುಂದರವಾಗಿದ್ದು, ಮಧ್ಯಪ್ರಾಚ್ಯ ಏಷ್ಯಾದ ದೊಡ್ಡ ಮಾಡೆಲ್ ಕೂಡ ಆಗಿದ್ದಾರೆ. ಈಕೆಯ ಫೋಟೋಗಳು ಅನೇಕ ಫ್ಯಾಷನ್ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದೆ. ಇನ್ನು ಸಫಾ ಅತ್ಯುತ್ತಮ ನೇಲ್ ಆರ್ಟಿಸ್ಟ್ ಕೂಡ ಹೌದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link