ಈ ಪುಟ್ಟ ಕಾಯಿಯನ್ನು ಈ ರೀತಿ ಸೇವಿಸಿದರೆ ತಕ್ಷಣವೇ ಇಳಿದು ಬಿಡುವುದು ಬ್ಲಡ್ ಶುಗರ್! ತಿನ್ನುವ ಸಮಯ ಇದಾಗಿರಬೇಕು
ಮಧುಮೇಹ ರೋಗಿಗಳು ತಮ್ಮ ಆರೋಗ್ಯವನ್ನು ಉತ್ತಮವಾಗಿ ಇರಿಸಿಕೊಳ್ಳಲು ನೆಲ್ಲಿಕಾಯಿಯನ್ನು ಸೇವಿಸಬೇಕು. ನೆಲ್ಲಿಕಾಯಿಯನ್ನು ಪೋಷಕಾಂಶಗಳ ಪವರ್ ಹೌಸ್ ಎಂದು ಕರೆಯಲಾಗುತ್ತದೆ.
ನೆಲ್ಲಿಕಾಯಿ ವಿಟಮಿನ್ ಸಿ, ಫೈಬರ್, ಕಾರ್ಬೋಹೈಡ್ರೇಟ್ ಗಳು, ಒಮೆಗಾ 3 ಕೊಬ್ಬಿನಾಮ್ಲಗಳು, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂನ ಆಗರವಾಗಿದೆ. ಇದರಿಂದಾಗಿ ಇದು ಸೂಪರ್ ಫುಡ್ ಎನ್ನಲಾಗುತ್ತದೆ.
ಮಧುಮೇಹ ರೋಗಿಗಳು ನೆಲ್ಲಿಕಾಯಿ ಜ್ಯೂಸ್ ತೆಗೆದು ಅದರಲ್ಲಿ ಅಲೋವೆರಾ ಜೆಲ್ ಮತ್ತು ಅಮೃತಬಳ್ಳಿ ರಸವನ್ನು ಬೆರೆಸಿ ಕುಡಿಯಬೇಕು. ಹೀಗೆ ಕುಡಿದರೆ ರಕ್ತದ ಸಕ್ಕರೆ ತಕ್ಷಣವೇ ನಿಯಂತ್ರಣಕ್ಕೆ ಬರುತ್ತದೆ.
ನೆಲ್ಲಿಕಾಯಿ ರಸವನ್ನು ಅರಿಶಿನದೊಂದಿಗೆ ಬೆರೆಸಿ ಕೂಡಾ ಕುಡಿಯಬಹುದು. ಹೀಗೆ ಸೇವಿಸಿದರೆ ಕೂಡಾ ಬ್ಲಡ್ ಶುಗರ್ ನಿಯಂತ್ರಣಕ್ಕೆ ಬರುವುದು. ನೆಲ್ಲಿಕಾಯಿಯನ್ನು ಹಾಗೆಯೇ ನೇರವಾಗಿ ಅಗಿದು ತಿನ್ನುವುದರಿಂದಲೂ ಡಯಾಬಿಟೀಸ್ ನಾರ್ಮಲ್ ಆಗುವುದು.
ಆಮ್ಲಾವನ್ನು ಹೊರತುಪಡಿಸಿ, ಕ್ಯಾರೆಟ್ ಜ್ಯೂಸ್, ಸೇಬಿನ ರಸ, ಸೌತೆಕಾಯಿ ರಸ ಅಥವಾ ಸೌತೆಕಾಯಿಯನ್ನು ಕೂಡಾ ಸೇವಿಸುವ ಮೂಲಕ ರಕ್ತದ ಸಕ್ಕರೆಯನ್ನು ನಿಯಂತ್ರಿಸಬಹುದು. ಅಲ್ಲದೆ ಪೇರಳೆ ಎಲೆಗಳನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ಕುಡಿಯುವ ಮೂಲಕ ಕೂಡಾ ಬ್ಲಡ್ ಶುಗರ್ ನಾರ್ಮಲ್ ಮಾಡಬಹುದು.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)