ಇವರ ಪ್ರೀತಿಗೆ ಅಡ್ಡವಾಗಿಲ್ಲ ಧರ್ಮದ ಗೋಡೆ! ಅನ್ಯಧರ್ಮಿಯರನ್ನು ವರಿಸಿ ಸುಖಸಂಸಾರ ನಡೆಸುತ್ತಿರುವ ಭಾರತದ ಲೆಜೆಂಡರಿ ಕ್ರಿಕೆಟಿಗರಿವರು
ಭಾರತದಲ್ಲಿ ಧರ್ಮವೆಂದೇ ಪರಿಗಣಿತವಾಗಿರುವ ಈ ಕ್ರಿಕೆಟ್ʼನಲ್ಲಿ ಧರ್ಮಕ್ಕಿಂತ ಮೇಲುಗೈ ಸಾಧಿಸಿ ಪ್ರೀತಿಯ ಗಂಟು ಹಾಕಿದ ಕ್ರಿಕೆಟಿಗರು ಸಾಕಷ್ಟಿದ್ದಾರೆ. ಅಂದರೆ, ಭಾರತ ಕ್ರಿಕೆಟ್ ತಂಡದಲ್ಲಿ 4 ಮುಸ್ಲಿಂ ಕ್ರಿಕೆಟಿಗರು ಹಿಂದೂ ಹುಡುಗಿಯರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಆ 4 ಮುಸ್ಲಿಂ ಕ್ರಿಕೆಟಿಗರು ಧರ್ಮದ ಸಂಕೋಲೆಯನ್ನು ಮುರಿದು ಹಿಂದೂ ಹುಡುಗಿಯರನ್ನು ತಮ್ಮ ಸಂಗಾತಿಯನ್ನಾಗಿ ಆರಿಸಿಕೊಂಡು ಸುಖ ಸಂಸಾರ ನಡೆಸುತ್ತಿದ್ದಾರೆ.
ಭಾರತದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ತನ್ನ ಧರ್ಮವನ್ನು ಮೀರಿ ರಾಜಮನೆತನದ ಹಿಂದೂ ಹುಡುಗಿಯನ್ನು 2017 ರಲ್ಲಿ ಬಾಲಿವುಡ್ ನಟಿ ಸಾಗರಿಕಾ ಘಾಟ್ಗೆ ಅವರನ್ನು ವಿವಾಹವಾಗಿದ್ದರು. ಇನ್ನು ಸಾಗರಿಕಾ ಘಾಟ್ಗೆ ಬಾಲಿವುಡ್ ಚಿತ್ರ 'ಚಕ್ ದೇ ಇಂಡಿಯಾ'ದಲ್ಲಿ ಕೆಲಸ ಮಾಡಿದ್ದಾರೆ. ಸಾಗರಿಕಾ ಮೊದಲು, ಜಹೀರ್ ಖಾನ್ ಬಾಲಿವುಡ್ ನಟಿ ಇಶಾ ಶರ್ವಾನಿ ಜೊತೆ ಸಂಬಂಧ ಹೊಂದಿದ್ದರು. ಎಂಟು ವರ್ಷಗಳ ಕಾಲ ಸಂಬಂಧದಲ್ಲಿದ್ದ ನಂತರ, 2011 ರ ವಿಶ್ವಕಪ್ ಸಮಯದಲ್ಲಿ ಮದುವೆಯ ವರದಿಗಳು ಬಂದವು. ಆದರೆ ನಂತರ ಬ್ರೇಕಪ್ ಮಾಡಿಕೊಂಡರು.
2002ರಲ್ಲಿ ಇಂಗ್ಲೆಂಡ್ʼನಲ್ಲಿ ನಡೆದ ನ್ಯಾಟ್ ವೆಸ್ಟ್ ಟ್ರೋಫಿಯನ್ನು ಭಾರತ ಗೆಲ್ಲುವಲ್ಲಿ ಮೊಹಮ್ಮದ್ ಕೈಫ್ ಪ್ರಮುಖ ಪಾತ್ರ ವಹಿಸಿದ್ದರು. ಆ ನ್ಯಾಟ್ ವೆಸ್ಟ್ ಟ್ರೋಫಿ ಕೂಡ ಭಾರತೀಯ ಕ್ರಿಕೆಟ್ʼನ ಅದೃಷ್ಟವನ್ನೇ ಬದಲಿಸಿತ್ತು. ಆದರೆ ಮೊಹಮ್ಮದ್ ಕೈಫ್ ಅವರ ವೃತ್ತಿಜೀವನವು ಹೆಚ್ಚು ಕಾಲ ಉಳಿಯಲಿಲ್ಲ, ಇನ್ನು ಇವರು ಹಿಂದೂ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಆಕೆ ಹೆಸರು ಪೂಜಾ ಯಾದವ್.
ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ, ಮಾಜಿ ಲೆಜೆಂಡರಿ ನಾಯಕ ಮನ್ಸೂರ್ ಅಲಿ ಖಾನ್ ಪಟೌಡಿ ಮತ್ತು ಬಾಲಿವುಡ್ ನಟಿ ಶರ್ಮಿಳಾ ಟ್ಯಾಗೋರ್ ಅವರ ಜೋಡಿ ತುಂಬಾ ವಿಶೇಷವಾಗಿದೆ. ಮನ್ಸೂರ್ ಅಲಿ ಧರ್ಮದ ಅಡ್ಡಗೋಡೆಯನ್ನು ಮುರಿದು ಹಿಂದೂ-ಬಂಗಾಳಿ ಹುಡುಗಿ ಶರ್ಮಿಳಾ ಟ್ಯಾಗೋರ್ ಅವರನ್ನು ತನ್ನ ಜೀವನ ಸಂಗಾತಿಯನ್ನಾಗಿ ಮಾಡಿಕೊಂಡರು.
ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಮೊದಲು ಮದುವೆಯಾಗಿದ್ದು ನೌರೀನ್ ಎಂಬಾಕೆಯನ್ನು. ತನ್ನದೇ ಸಮುದಾಯದ ಯುವತಿಯನ್ನು ಮದುವೆಯಾಗಿದ್ದ ಅಜರ್, ನಟಿ ಸಂಗೀತಾ ಬಿಜಲಾನಿಯವರನ್ನು ಪ್ರೀತಿಸಲು ಶುರು ಮಾಡಿದ್ದರು. 1996 ರಲ್ಲಿ ನೌರೀನ್ʼಗೆ ವಿಚ್ಛೇದನ ನೀಡಿದ ಅಜರುದ್ದೀನ್ ಬಾಲಿವುಡ್ ನಟಿ ಸಂಗೀತಾ ಬಿಜಲಾನಿ ಅವರನ್ನು ಎರಡನೇ ಬಾರಿಗೆ ವಿವಾಹವಾದರು. ಆದರೆ ಸಂಗೀತಾ ಜೊತೆಗಿನ ಸಂಬಂಧವೂ ಹೆಚ್ಚು ಕಾಲ ಉಳಿಯಲಿಲ್ಲ.