Indian Railway: ಒಂದು ಕಿಲೋಮೀಟರ್ ಉದ್ದದ ರೈಲ್ವೇ ಟ್ರ್ಯಾಕ್ ಹಾಕಲು ಎಷ್ಟು ಕೋಟಿ ಖರ್ಚಾಗುತ್ತೆ ಗೊತ್ತಾ?

Mon, 12 Dec 2022-9:13 am,

ಭಾರತೀಯರ ಜೀವನದ ಪ್ರಮುಖ ಭಾಗವಾಗಿರುವ ರೈಲ್ವೆ: ಭಾರತೀಯ ರೈಲ್ವೆಯು ದೂರದ ಪ್ರಯಾಣಗಳಿಗೆ ಮಾತ್ರವಲ್ಲ ಪ್ರತಿ ನಿತ್ಯ ಹಳ್ಳಿಯಿಂದ ನಗರಗಳಿಗೆ, ಒಂದು ನಗರದಿಂದ ಇನ್ನೊಂದು ನಗರಕ್ಕೆ ವಿದ್ಯಾಭ್ಯಾಸಕ್ಕಾಗಿ, ಉದ್ಯೋಗಕ್ಕಾಗಿ ತೆರಳುವವರಿಗೂ ಕೂಡ ಅಗತ್ಯ ಸೇವೆ ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರೈಲುಗಳು ಚಲಿಸಲು ಹಳಿಗಳು ಬಹಳ ಮುಖ್ಯ. ಆದರೆ, ಹಳಿಗಳನ್ನು ಸ್ಥಾಪಿಸಲು ಎಷ್ಟು ವೆಚ್ಚವಾಗುತ್ತದೆ ಎಂದು ಎಂದಾದರೂ ಯೋಚಿಸಿದ್ದೀರಾ? 

ರೈಲ್ವೆ ಹಳಿಗಳನ್ನು ತಯಾರಿಸಲು ವಿಶೇಷ ರೀತಿಯ ಉಕ್ಕಿನ ಬಳಕೆ : ಯಾವಾಗಲೂ ತೆರೆದ ಆಕಾಶದ ಅಡಿಯಲ್ಲಿ ಮತ್ತು ಆಮ್ಲಜನಕ ಮತ್ತು ತೇವಾಂಶದೊಂದಿಗೆ ಸಂಪರ್ಕದಲ್ಲಿರುವ ರೈಲ್ವೆ ಹಳಿಗಳು ಬೇಗನೆ ತುಕ್ಕು ಹಿಡಿಯುವುದನ್ನು ತಡೆಯಲು ಇದರ ತಯಾರಿಕೆಯಲ್ಲಿ ವಿಶೇಷ ರೀತಿಯ ಉಕ್ಕನ್ನು ಬಳಸುತ್ತಾರೆ. . ವಾಸ್ತವವಾಗಿ, ಮೆಂಗಲೋಯ್ ಅನ್ನು ಟ್ರ್ಯಾಕ್‌ಗಳಿಗಾಗಿ ಉಕ್ಕಿನಲ್ಲಿ ಬೆರೆಸಲಾಗುತ್ತದೆ. ಉಕ್ಕು ಮತ್ತು ಮಂಗಲೋಯ್ ಒಟ್ಟಿಗೆ ಬೆರೆತಾಗ ಅದನ್ನು ಮ್ಯಾಂಗನೀಸ್ ಸ್ಟೀಲ್ ಎಂದು ಕರೆಯಲಾಗುತ್ತದೆ. ಈ ಮ್ಯಾಂಗನೀಸ್ ಸ್ಟೀಲ್ ನಿಂದ ತಯಾರಿಸಲ್ಪಟ್ಟ ಹಳಿಗಳು ಬೇಸಿಗೆಯಿರಲಿ, ಮಳೆಯಿರಲಿ, ಮಂಜಿರಲಿ ಬೇಗನೆ ತುಕ್ಕು ಹಿಡಿಯುವುದಿಲ್ಲ. 

ಒಂದು ಕಿಲೋಮೀಟರ್ ರೈಲ್ವೇ ಹಳಿ ಹಾಕಲು ಎಷ್ಟು ವೆಚ್ಚವಾಗುತ್ತೆ?  ಸಾಮಾನ್ಯವಾಗಿ ಮೂಡುವ ಪ್ರಶ್ನೆ ಎಂದರೆ ಒಂದು ಕಿಲೋಮೀಟರ್ ರೈಲ್ವೇ ಹಳಿ ಹಾಕಲು ಎಷ್ಟು ವೆಚ್ಚವಾಗುತ್ತೆ? ವಾಸ್ತವವಾಗಿ, ರೈಲಿನ ಹಳಿಗಳನ್ನು ಹಾಕುವ ವೆಚ್ಚವು ಯಾವ ಪ್ರದೇಶದಲ್ಲಿ ರೈಲ್ವೆ ಹಳಿಗಳನ್ನು ಹಾಕಲಾಗುತ್ತಿದೆ ಎಂಬುದನ್ನು ಅವಲಂಬಿಸಿರುತ್ತದೆ.  ಉದಾಹರಣೆಗೆ, ಸಾಮಾನ್ಯ ಭೂಪ್ರದೇಶಗಳಲ್ಲಿ ಹಳಿ ಹಾಕುವುದಕ್ಕಿಂತ ಗುಡ್ಡಗಾಡು ಪ್ರದೇಶಗಳಲ್ಲಿ ಟ್ರ್ಯಾಕ್ ಹಾಕುವುದು ದುಬಾರಿ ಆಗುತ್ತದೆ.

ಮಾರ್ಗ ಮತ್ತು ತಂತ್ರಜ್ಞಾನದ ಬಳಕೆಯ ವೆಚ್ಚವೂ ಪರಿಣಾಮ ಬೀರುತ್ತದೆ: ರೈಲ್ವೆ ಹಳಿಗಳನ್ನು ಹಾಕುವ ವೆಚ್ಚವು ಪ್ರದೇಶದ ಹೊರತಾಗಿ, ಮಾರ್ಗ ಮತ್ತು ತಂತ್ರಜ್ಞಾನದ ಬಳಕೆಯ ವೆಚ್ಚವನ್ನೂ ಸಹ ಅವಲಂಭಿಸಿರುತ್ತದೆ. ಇದಲ್ಲದೆ, ಟ್ರ್ಯಾಕ್ ಮಾಡಲು ಬಳಸುವ ಉಕ್ಕಿನ ತೂಕದ ಮೇಲೆ ವೆಚ್ಚವೂ ಇದರ ಮೇಲೆ ಪರಿಣಾಮ ಬೀರುತ್ತದೆ. ಸರಾಸರಿ, ಒಂದು ಮೀಟರ್ ಉದ್ದದ ಒಂದು ಟ್ರ್ಯಾಕ್‌ನ ತೂಕವು 45 ಕೆಜಿ ವರೆಗೆ ಇರುತ್ತದೆ.

ಪ್ರಸ್ತುತ, ಭಾರತೀಯ ರೈಲ್ವೆಯ ಅಂಕಿಅಂಶಗಳ ಪ್ರಕಾರ, ಸಮತಟ್ಟಾದ ಭೂಮಿಯಲ್ಲಿ ಒಂದು ಕಿಲೋಮೀಟರ್ ಹಳಿ ಹಾಕಲು ಸುಮಾರು 10 ರಿಂದ 12 ಕೋಟಿ ವೆಚ್ಚವಾಗುತ್ತದೆ. ಸ್ಥಳವು ಎತ್ತರವಾಗಿದ್ದರೆ ಅಥವಾ ನದಿಯ ಮೇಲಿದ್ದರೆ, ನಂತರ ಖರ್ಚು ಹೆಚ್ಚಾಗುತ್ತದೆ. ಅದೇ ಸಮಯದಲ್ಲಿ, ಹೈಸ್ಪೀಡ್ ರೈಲು ಕಾರಿಡಾರ್‌ನ  ಎಂದರೆ ಬುಲೆಟ್ ಟ್ರೈನ್ ಓಡಿಸಬಹುದಾದಂತಹ ರೈಲು ಮಾರ್ಗದಲ್ಲಿ ಒಂದು ಕಿಲೋಮೀಟರ್ ಉದ್ದದ ಹಳಿಗಳನ್ನು ಹಾಕಲು 100 ರಿಂದ 140 ಕೋಟಿ ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link