Indian Railway Facts: ಭಾರತದ 5 ಅನನ್ಯ ರೈಲ್ವೆ ನಿಲ್ದಾಣಗಳಿವು, ಇಲ್ಲಿಗೆ ಪ್ರಯಾಣಿಸಲು ವೀಸಾ ಕೂಡ ಅಗತ್ಯ
ದೆಹಲಿ-ಮುಂಬೈ ರೈಲು ಮಾರ್ಗದಲ್ಲಿರುವ ಭವಾನಿ ಮಂಡಿ ರೈಲು ನಿಲ್ದಾಣವು ಎರಡು ವಿಭಿನ್ನ ರಾಜ್ಯಗಳಿಗೆ ಸಂಪರ್ಕವನ್ನು ಹೊಂದಿದೆ. ಈ ರೈಲು ನಿಲ್ದಾಣವನ್ನು ನಿರ್ದಿಷ್ಟವಾಗಿ ರಾಜಸ್ಥಾನ ಮತ್ತು ಮಧ್ಯಪ್ರದೇಶದ ನಡುವೆ ವಿಂಗಡಿಸಲಾಗಿದೆ. ಈ ನಿಲ್ದಾಣದಲ್ಲಿ ನಿಲ್ಲುವ ಪ್ರತಿ ರೈಲಿನ ಇಂಜಿನ್ ರಾಜಸ್ಥಾನದಲ್ಲಿ ನಿಂತರ ಉಳಿದ ಕೋಚ್ ಗಳು ಮಧ್ಯಪ್ರದೇಶದಲ್ಲಿ ನಿಲ್ಲುತ್ತವೆ.
ಭಾರತದಲ್ಲಿರುವ ವಿಶಿಷ್ಟವಾದ ರೈಲು ನಿಲ್ದಾಣಗಳಲಿ ನವಪುರ ರೈಲು ನಿಲ್ದಾಣವೂ ಒಂದು. ಈ ರೈಲು ನಿಲ್ದಾಣದಲ್ ಒಂದು ಭಾಗ ಮಹಾರಾಷ್ಟ್ರದಲ್ಲಿದ್ದರೆ, ಇನ್ನೊಂದು ಭಾಗ ಗುಜರಾತ್‌ನಲ್ಲಿದೆ. ಹಾಗಾಗಿಯೇ, ಈ ರೈಲು ನಿಲ್ದಾಣದಲ್ಲಿ ಮರಾಠಿ ಮತ್ತು ಗುಜರಾತಿ ಎರಡೂ ಭಾಷೆಗಳಲ್ಲಿ ಬರೆಯಲಾಗಿದೆ.
ಭಾರತದಲ್ಲಿರುವ ಅನನ್ಯ ರೈಲು ನಿಲ್ದಾಣ ಈ ಅಟ್ಟಾರಿ ರೈಲು ನಿಲ್ದಾಣ. ನೀವು ಈ ರೈಲು ನಿಲ್ದಾಣದಲ್ಲಿ ಇಳಿಯಲು ಬಯಸಿದರೆ ವೀಸಾ ಪಡೆಯುವುದು ತುಂಬಾ ಅವಶ್ಯಕ. ವಾಸ್ತವವಾಗಿ, ಅಮೃತಸರದ ಅಟ್ಟಾರಿ ರೈಲು ನಿಲ್ದಾಣ ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿರುವುದರಿಂದ ಈ ನಿಲ್ದಾಣದಲ್ಲಿ ವೀಸಾ ಇಲ್ಲದೆ ಇಳಿಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಜಾರ್ಖಂಡ್‌ನ ರಾಜಧಾನಿ ರಾಂಚಿಯಿಂದ ತೋರಿಗೆ ಹೋಗುವ ಹಾದಿಯಲ್ಲಿ ಹೆಸರೇ ಇಲ್ಲದ ಒಂದು ರೈಲು ನಿಲ್ದಾಣವಿದೆ. 2011 ರಲ್ಲಿಮೊದಲ ಬಾರಿಗೆ ಇಲ್ಲಿ ರೈಲು ಸಂಚಾರ ಆರಂಭವಾದಾಗ ಇಯಕ್ಕೆ ಬಡ್ಕಿಚಂಪಿ ನಿಲ್ದಾಣ ಎಂದು ಕರೆಯಲಾಗುತ್ತಿತ್ತು. ಆದರೆ. ಸ್ಥಳೀಯರ ವಿರೋಧದಿಂದ ಈ ಹೆಸರನ್ನು ತೆಗೆಯಲಾಗಿದ್ದು, ಅಂದಿನಿಂದ ಈ ನಿಲ್ದಾಣಕ್ಕೆ ಯಾವುದೇ ಹೆಸರನ್ನೂ ನಾಮಕರಣ ಮಾಡಲಾಗಿಲ್ಲ.
2008 ರಲ್ಲಿ ಬಂಕುರಾ-ಮಸಾಗ್ರಾಮ್ ರೈಲು ಮಾರ್ಗದಲ್ಲಿ ನಿರ್ಮಿಸಲಾಗಿರುವ ರೈಲು ನಿಲ್ದಾಣವು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೂ, ಈ ರೈಲು ನಿಲ್ದಾಣಕ್ಕೂ ಕೂಡ ಯಾವುದೇ ಹೆಸರನ್ನು ನಾಮಕರಣ ಮಾಡಲಾಗಿಲ್ಲ. ಆರಂಭದಲ್ಲಿ ಇದಕ್ಕೆ ರಾಯನಗರ ಎಂದು ನಾಮಕರಣ ಮಾಡಲಾಗಿತ್ತು. ಆದರೂ, ಸ್ಥಳೀಯರ ವಿರೋಧದಿಂದಾಗಿ ಆ ಹೆಸರನ್ನು ತೆಗೆಯಲಾಯಿತು.