ರೈಲು ಪ್ರಯಾಣಿಕರೇ ಎಚ್ಚರ ! ಇನ್ನು ಈ ನಿಯಮಗಳನ್ನು ಪಾಲಿಸದೇ ಹೋದರೆ ಜೈಲೇ ಗತಿ ! 99% ಪ್ರಯಾಣಿಕರು ಈ ನಿಯಮಗಳನ್ನು ನಿರ್ಲಕ್ಷಿಸುವುದೇ ಹೆಚ್ಚು
ರೈಲಿನಲ್ಲಿ ಪ್ರಯಾಣಿಕರು ಗಲಾಟೆ ಮಾಡುವುದು, ನಿಂದಿಸುವುದು ಅಥವಾ ಕಿರುಕುಳ ನೀಡುವುದು ತಪ್ಪು.
ಚಲಿಸುತ್ತಿರುವ ರೈಲಿನ ಕಿಟಕಿಯಿಂದ ನಿಮ್ಮ ಕೈಯನ್ನು ಹೊರಗೆ ಹಾಕುವುದು ಅತ್ಯಂತ ಅಪಾಯಕಾರಿ. ಒಂದು ವೇಳೆ ಹೀಗೆ ಮಾಡಿದರೆ ಗಂಭೀರವಾಗಿ ಗಾಯಗೊಳ್ಳುವ ಅಪಾಯವಿದೆ.
ರೈಲಿನಲ್ಲಿ ಮದ್ಯಪಾನ ಮಾಡುವುದು ಕಾನೂನು ಬಾಹಿರ.ಇದು ಇತರ ಪ್ರಯಾಣಿಕರಿಗೆ ತೊಂದರೆ ಉಂಟುಮಾಡಬಹುದು. ಹೀಗೆ ಮಾಡಿದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬಹುದು.
ರೈಲಿನಲ್ಲಿ ಧೂಮಪಾನ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಹೀಗೆ ಮಾಡಿದರೆ, ಭಾರೀ ದಂಡ ಮತ್ತು ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.
ಕಾಯ್ದಿರಿಸಿದ ಆಸನವನ್ನು ಹೊಂದಿದ್ದರೆ, ಆ ಆಸನದಲ್ಲಿ ಮಾತ್ರ ಕುಳಿತುಕೊಳ್ಳಬೇಕು.ಅದನ್ನು ಬಿಟ್ಟು ಬೇರೊಬ್ಬರ ಸೀಟಿನಲ್ಲಿ ಕುಳಿತುಕೊಳ್ಳುವುದು ತಪ್ಪು ಮತ್ತು ಈ ತಪ್ಪಿಗಾಗಿ ದಂಡ ವಿಧಿಸಬಹುದು.