Indian Railway: ದೇಶದ ಈ ವಿಶಿಷ್ಠ ರೈಲು ನಿಲ್ದಾಣಗಳಿಗೆ ಹೆಸರೇ ಇಲ್ಲ, ಕಾರಣ ತುಂಬಾ ರೋಚಕವಾಗಿದೆ
ಇವುಗಳಲ್ಲಿ ಮೊದಲ ರೈಲು ನಿಲ್ದಾಣವು ಪಶ್ಚಿಮ ಬಂಗಾಳದ ಬರ್ಧಮಾನ್‌ನಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿದೆ. ಈ ನಿಲ್ದಾಣವನ್ನು ರೈನಾ ಮತ್ತು ರಾಯನಗರ ಎಂಬ ಎರಡು ಹಳ್ಳಿಗಳ ನಡುವೆ ನಿರ್ಮಿಸಲಾಗಿದೆ. ಮೊದಲು ಈ ನಿಲ್ದಾಣದ ಹೆಸರು ರಾಯನಗರ ಎಂದಿತ್ತು.
ಈ ನಿಲ್ದಾಣಕ್ಕೆ ರಾಯನಗರ ಎಂದು ಹೆಸರಿಸಿದ್ದು ರೈನಾ ಗ್ರಾಮದ ಜನರಿಗೆ ಇಷ್ಟವಾಗಲಿಲ್ಲ. ಇದಾದ ಬಳಿಕ ಎರಡು ಗ್ರಾಮಗಳ ನಡುವಿನ ಜಗಳ ಠಾಣೆ ಮೆಟ್ಟಲೇರಿತು. ಈ ನಿಲ್ದಾಣದ ಕಟ್ಟಡವನ್ನು ರೈನಾ ಗ್ರಾಮದ ಜಮೀನಿನಲ್ಲಿ ನಿರ್ಮಿಸಲಾಗಿದೆ, ಆದ್ದರಿಂದ ಇದಕ್ಕೆ ರೈನಾ ಎಂದು ಹೆಸರಿಸಬೇಕು ಎಂದು ಗ್ರಾಮಸ್ಥರು ವಾದಿಸಿದರು. ನಂತರ ಗ್ರಾಮಸ್ಥರ ದೂರು ಆಲಿಸಿದ ರೈಲ್ವೆ ಮಂಡಳಿಯು ನಿಲ್ದಾಣದ ಹೆಸರನ್ನೇ ತೆಗೆದುಹಾಕಿತು. ಅಂದಿನಿಂದ ಈ ನಿಲ್ದಾಣಕ್ಕೆ ಹೆಸರಿಡಲಾಗಿಲ್ಲ
ಈ ನಿಲ್ದಾಣವನ್ನು 2008 ರಲ್ಲಿ ನಿರ್ಮಿಸಲಾಗಿದೆ. ಅಂದಿನಿಂದ ಇದು ವಿವಾದಗಳಿಗೆ ಕಾರಣವಾಗಿದೆ. ಗ್ರಾಮಸ್ಥರ ವಾಗ್ವಾದದಿಂದಾಗಿ ನಿಲ್ದಾಣದ ಸೈನ್ ಬೋರ್ಡ್‌ನಿಂದ ನಿಲ್ದಾಣದ ಹೆಸರನ್ನು ತೆಗೆದುಹಾಕಲಾಗಿದೆ. ನಿಲ್ದಾಣಕ್ಕೆ ಹೆಸರಿಲ್ಲದ ಕಾರಣ ಇಲ್ಲಿಗೆ ಬರುವ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.
ಇಂತಹ ಮತ್ತೊಂದು ರೈಲು ನಿಲ್ದಾಣ ಜಾರ್ಖಂಡ್‌ನಲ್ಲಿದೆ, ಅದಕ್ಕೂ ಯಾವುದೇ ಹೆಸರಿಲ್ಲ. ಮಾಹಿತಿಯ ಪ್ರಕಾರ, ಈ ವಿಶಿಷ್ಟ ನಿಲ್ದಾಣವು ರಾಂಚಿಯಿಂದ ತೋರಿಗೆ ಹೋಗುವ ರೈಲು ಮಾರ್ಗದಲ್ಲಿದೆ. 2011 ರಲ್ಲಿ ಈ ನಿಲ್ದಾಣದಲ್ಲಿ ಮೊದಲ ಬಾರಿಗೆ ರೈಲು ಓಡಿಸಲಾಯಿತು. ಆಗ ಅದಕ್ಕೆ ಬಡ್ಕಿಚಂಪಿ ಎಂದು ಹೆಸರಿಡಲು ತೀರ್ಮಾನಿಸಲಾಗಿತ್ತಾದರೂ ಅಕ್ಕಪಕ್ಕದ ಕಾಮ್ಲೆ ಗ್ರಾಮದ ಜನರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಅಂದಿನಿಂದ ಈ ನಿಲ್ದಾಣಕ್ಕೂ ಕೂಡ ಯಾವುದೇ ಹೆಸರಿಡಲಾಗಿಲ್ಲ.