Longest Train Journey: ಇವೇ ನೋಡಿ ಭಾರತದ 5 ಸುದೀರ್ಘ ರೈಲು ಮಾರ್ಗಗಳು
Dehradun Kochuveli Superfast Express: ಇದು 9 ರಾಜ್ಯಗಳ ಮೂಲಕ 57 ಗಂಟೆ 20 ನಿಮಿಷಗಳಲ್ಲಿ ಒಟ್ಟು 3,437 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ.
Raptisagar Express – Trivandrum Central and Gorakhpur: ರಪ್ತಿಸಾಗರ್ ಎಕ್ಸ್‌ಪ್ರೆಸ್ 3,248 ಕಿಲೋಮೀಟರ್ ದೂರವನ್ನು 57 ಗಂಟೆ 05 ನಿಮಿಷಗಳಲ್ಲಿ ಕ್ರಮಿಸುತ್ತದೆ.
Thiruvananthapuram – Guwahati Superfast Express: ತಿರುವನಂತಪುರಂ-ಗುವಾಹಟಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ 65 ಗಂಟೆಗಳಲ್ಲಿ 3,553 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ.
Kashmir Himsagar Express: ಕಾಶ್ಮೀರ ಹಿಮಸಾಗರ ಎಕ್ಸ್‌ಪ್ರೆಸ್ ಕನ್ಯಾಕುಮಾರಿ ಮತ್ತು ಶ್ರೀ ಮಾತಾ ವೈಷ್ಣೋದೇವಿ ಕತ್ರಾ ನಡುವೆ ಚಲಿಸುತ್ತದೆ. ಇದು 12 ರಾಜ್ಯಗಳ ಮೂಲಕ ಹಾದುಹೋಗುತ್ತದೆ. ಒಟ್ಟು 72 ಗಂಟೆಗಳಲ್ಲಿ 3,787 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ.
Vivek Express – Dibrugarh to Kanyakumari: ವಿವೇಕ್ ಎಕ್ಸ್‌ಪ್ರೆಸ್ ದೂರ ಮತ್ತು ಸಮಯದ ದೃಷ್ಟಿಯಿಂದ ಭಾರತೀಯ ರೈಲ್ವೆ ಜಾಲದ ಅತಿ ಉದ್ದದ ಮಾರ್ಗವಾಗಿದೆ. ಇದು ಒಟ್ಟು 4,286 ಕಿಲೋಮೀಟರ್ ದೂರವನ್ನು 80 ಗಂಟೆ 15 ನಿಮಿಷಗಳ ರನ್ನಿಂಗ್ ಸಮಯದೊಂದಿಗೆ ಕ್ರಮಿಸುತ್ತದೆ.