ಇಂದಿನಿಂದ ‘ಭಾರತ ದರ್ಶನ’ ವಿಶೇಷ ಪ್ರವಾಸಿ ರೈಲು ಆರಂಭ: ಇಲ್ಲಿದೆ ವಿವರ
‘ಭಾರತ ದರ್ಶನ’ ವಿಶೇಷ ಪ್ರವಾಸಿ ರೈಲಿನ ಬುಕ್ಕಿಂಗ್ ಆನ್‌ಲೈನ್‌ನಲ್ಲಿ ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಐಆರ್‌ಸಿಟಿಸಿ ಪ್ರವಾಸಿ ಸೌಲಭ್ಯ ಕೇಂದ್ರ, ವಲಯ ಕಚೇರಿಗಳು ಮತ್ತು ಪ್ರಾದೇಶಿಕ ಕಚೇರಿಗಳ ಮೂಲಕವೂ ಬುಕಿಂಗ್ ಮಾಡಬಹುದು
‘ಭಾರತ ದರ್ಶನ’ ವಿಶೇಷ ಪ್ರವಾಸಿ ರೈಲು ಹೈದರಾಬಾದ್ - ಅಹಮದಾಬಾದ್ - ಸಮುದ್ರದ ಮಧ್ಯೆ ಇರುವ ನಿಷ್ಕಲಂಕ ಮಹಾದೇವನ ಸನ್ನಿಧಿ - ಜೋಧಪುರ - ಜೈಪುರ - ಉದಯಪುರ - ಏಕತೆಯ ಪ್ರತಿಮೆಯ ಗಮ್ಯಸ್ಥಾನಗಳನ್ನು ಒಳಗೊಂಡಿದೆ.
ಮಧುರೈ, ದಿಂಡಿಗಲ್, ತಿರುಚ್ಚಿರಾಪಳ್ಳಿ, ಕರೂರ್, ಈರೋಡ್, ಸೇಲಂ, ಜೋಲಾರ್‌ಪೆಟ್ಟೈ, ಕಟಪಾಡಿ, ಎಂಜಿಆರ್ ಚೆನ್ನೈ ಸೆಂಟ್ರಲ್, ನೆಲ್ಲೂರು ಮತ್ತು ವಿಜಯವಾಡ ಈ ವಿಶೇಷ ಪ್ರವಾಸಿ ರೈಲಿನ ಬೋರ್ಡಿಂಗ್ ಪಾಯಿಂಟ್‌ಗಳಾಗಿವೆ.
IRCTCಯು ವಿಶೇಷ 11 ರಾತ್ರಿಗಳು/12 ದಿನಗಳ ಪ್ಯಾಕೇಜ್ ಅನ್ನು ನೀಡುತ್ತದೆ, ಇದು ವಯಸ್ಕರಿಗೆ 11,340 ರೂ. ವೆಚ್ಚವಾಗುತ್ತದೆ.
ಐಆರ್‌ಸಿಟಿಸಿ ಪ್ರವಾಸಿಗರಿಗೆ ಲಸಿಕೆ ಪ್ರಮಾಣಪತ್ರ ಅಥವಾ ಆರ್‌ಟಿ-ಪಿಸಿಆರ್ ಋಣಾತ್ಮಕ ವರದಿಯನ್ನು (ಪ್ರಯಾಣದ ದಿನಾಂಕಕ್ಕಿಂತ 48 ಗಂಟೆಗಳ ಮೊದಲು) ಇಟ್ಟುಕೊಳ್ಳುವಂತೆ ನಿರ್ದೇಶಿಸಿದೆ. ಹೆಚ್ಚುವರಿಯಾಗಿ ಪ್ರವಾಸಿಗರಿಗೆ ಪ್ರಯಾಣ ವಿಮೆ ಮತ್ತು ನೈರ್ಮಲ್ಯ ಕಿಟ್‌ಗಳನ್ನು ಒದಗಿಸಲಾಗುವುದು.
ರೈಲು ಪ್ರಯಾಣವು ಸ್ಲೀಪರ್ ಕ್ಲಾಸ್ ಆಗಿರುತ್ತದೆ. ಧರ್ಮಶಾಲೆಗಳಲ್ಲಿ ರಾತ್ರಿ ತಂಗುವುದು ಮತ್ತು ಫ್ರೆಶ್ ಅಪ್ ಆಗಲು ಸೌಲಭ್ಯ ಒದಗಿಸಲಾಗುತ್ತದೆ. ಬೆಳಗ್ಗೆ ಚಹಾ/ಕಾಫಿ, ಉಪಹಾರ, ಊಟ, ಭೋಜನ ಮತ್ತು ದಿನಕ್ಕೆ 1 ಲೀಟರ್ ಕುಡಿಯುವ ನೀರನ್ನು ಒದಗಿಸಲಾಗುತ್ತದೆ .