ಭಾರತೀಯ ರೈಲ್ವೆ ತಂದಿದೆ ಸ್ಪೆಷಲ್ ಟೂರ್ ಪ್ಯಾಕೇಜ್ , 17 ದಿನಗಳಲ್ಲಿ ಮಾಡಬಹುದು ಶ್ರೀ ರಾಮನಿಗೆ ಸಂಬಂಧಿಸಿದ ಧಾರ್ಮಿಕ ಸ್ಥಳಗಳ ಯಾತ್ರೆ
IRCTC ಯ 'ಶ್ರೀ ರಾಮಾಯಣ ಯಾತ್ರೆ' ಭಾರತೀಯ ರೈಲ್ವೆಯ 17 ದಿನಗಳ ಪ್ಯಾಕೇಜ್ ಆಗಿದೆ. ಇದನ್ನು ರೈಲ್ವೇಸ್‌ನ ದೇಖೋ ಅಪ್ನಾ ದೇಶ್ ಡಿಲಕ್ಸ್ ಎಸಿ ರೈಲು ಮೂಲಕ ನಡೆಸಲಾಗುತ್ತದೆ. ಈ ಯಾತ್ರೆಯಲ್ಲಿ ರಾಮಾಯಣದಲ್ಲಿ ಬರುವ ಪ್ರಮುಖ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತದೆ. ಈ ಪ್ಯಾಕೇಜ್‌ನ ಆರಂಭಿಕ ಬೆಲೆಯನ್ನು ಪ್ರಥಮ ದರ್ಜೆ ಎಸಿಗೆ ರೂ 1,02,095 ಮತ್ತು ಎರಡನೇ ದರ್ಜೆಯ ಎಸಿಗೆ ರೂ 82,950 ಎಂದು ನಿಗದಿಪಡಿಸಲಾಗಿದೆ.
ಈ 17 ದಿನಗಳ ಐಆರ್‌ಸಿಟಿಸಿ ಪ್ಯಾಕೇಜ್‌ನಲ್ಲಿ, ಅಯೋಧ್ಯೆ, ಜನಕ್‌ಪುರ, ವಾರಣಾಸಿ, ಪ್ರಯಾಗರಾಜ್, ಚಿತ್ರಕೂಟ್, ನಾಸಿಕ್, ಹಂಪಿ, ರಾಮೇಶ್ವರಂ ಇತ್ಯಾದಿ ಸ್ಥಳಗಳಿಗೆ ಭೇಟಿ ನೀಡಬಹುದು. ಪ್ರಯಾಣವು ದೆಹಲಿಯ ಸಫ್ದರ್‌ಜಂಗ್ ರೈಲ್ವೆ ನಿಲ್ದಾಣದಿಂದ ಪ್ರಾರಂಭವಾಗುತ್ತದೆ ಮತ್ತು ಅಲ್ಲಿಯೇ ಕೊನೆಗೊಳ್ಳುತ್ತದೆ.
ಐಆರ್‌ಸಿಟಿಸಿಯ 'ಶ್ರೀ ರಾಮಾಯಣ ಯಾತ್ರೆ' ಪ್ಯಾಕೇಜ್‌ನಲ್ಲಿ, ರೈಲಿನ ಪ್ರಥಮ ಮತ್ತು ದ್ವಿತೀಯ ದರ್ಜೆಯ ಎಸಿಯಲ್ಲಿ ಪ್ರಯಾಣಿಸಬಹುದು. ಇದರ ಹೊರತಾಗಿ, ನೀವು 8 ರಾತ್ರಿಗಳವರೆಗೆ ಡೀಲಕ್ಸ್ ವರ್ಗದ ವಾಸ್ತವ್ಯವನ್ನು ಕೂಡಾ ಪಡೆಯಲಿದ್ದೀರಿ. ಅಲ್ಲದೆ, ರೈಲಿನಲ್ಲಿ 8 ರಾತ್ರಿಗಳನ್ನು ಕಳೆಯಬೇಕಾಗುತ್ತದೆ. ಪ್ರಯಾಣದ ಸಮಯದಲ್ಲಿ, ರೈಲಿನಲ್ಲಿ ಕೇವಲ ವೆಜ್ ಆಹಾರವನ್ನು ಮಾತ್ರ ನೀಡಲಾಗುವುದು. ಇದಕ್ಕಾಗಿ ಪ್ರತ್ಯೇಕವಾಗಿ ಪಾವತಿಸಬೇಕಾಗಿಲ್ಲ. ಇದರ ಹೊರತಾಗಿ, ಪ್ರಯಾಣದ ಸಂದರ್ಭ ಹೊರತುಪಡಿಸಿದರೆ ಆಹಾರವನ್ನು ಉತ್ತಮ ಹೋಟೆಲ್‌ನಲ್ಲಿ ನೀಡಲಾಗುತ್ತದೆ.
ಪ್ರಯಾಣದ ಸಮಯದಲ್ಲಿ ಬೋಟಿಂಗ್ ಅಥವಾ ಸಾಹಸ ಕ್ರೀಡೆಗಳನ್ನು ಪ್ಯಾಕೇಜ್‌ನಲ್ಲಿ ಸೇರಿಸಲಾಗಿಲ್ಲ. ಯಾವುದೇ ರೀತಿಯ ರೂಂ ಸರ್ವಿಸ್ ಗೆ ಶುಲ್ಕ ವಿಧಿಸಲಾಗುತ್ತದೆ. ಚಾಲಕ, ವೈಟರ್ ಮತ್ತು ಗೈಡ್ ಗೆ ನೀಡುವ ಟಿಪ್ಸ್ ಅನ್ನು ನೀವೇ ಪಾವತಿಸಬೇಕು.ಇದರ ಹೊರತಾಗಿ, ಪ್ಯಾಕೇಜ್‌ನಲ್ಲಿ ಸೇರಿಸದ ಇತರ ಎಲ್ಲಾ ವೆಚ್ಚಗಳಿಗೆ ಪಾವತಿಸಬೇಕಾಗುತ್ತದೆ.