Indian Railways: ಅತ್ಯಧಿಕ ಸಂಖ್ಯೆಯ ಪ್ಲಾಟ್‌ಫಾರ್ಮ್ ಹೊಂದಿರುವ ಭಾರತದ ರೈಲ್ವೆ ನಿಲ್ದಾಣಗಳು
ಪಶ್ಚಿಮ ಬಂಗಾಳದ ಹೌರಾ ಜಂಕ್ಷನ್ ರೈಲು ನಿಲ್ದಾಣ(HWH)ವು ಅತಿಹೆಚ್ಚು ಅಂದರೆ 23 ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದೆ. ಕೋಲ್ಕತ್ತಾದ ಸೀಲ್ದಾಹ್ ರೈಲು ನಿಲ್ದಾಣ (SDAH)ವು 21 ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದೆ.
ಮಹಾರಾಷ್ಟ್ರದ ಛತ್ರಪತಿ ಶಿವಾಜಿ ಟರ್ಮಿನಸ್ (CST) ಒಟ್ಟು 18 ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದೆ. ಅದೇ ರೀತಿ ಚೆನ್ನೈನ ಸೆಂಟ್ರಲ್ ರೈಲು ನಿಲ್ದಾಣ (MAS)ವು 17 ಪ್ಲಾಟ್‌ಫಾರ್ಮ್‌ಗಳನ್ನುಹೊಂದಿದೆ.
ಹೊಸ ದೆಹಲಿ ರೈಲು ನಿಲ್ದಾಣ (NDLS)ವು 16 ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದ್ದು, ಅಹಮದಾಬಾದ್ ಜಂಕ್ಷನ್ ರೈಲು ನಿಲ್ದಾಣ (ADI)ದಲ್ಲಿ 12 ಪ್ಲಾಟ್‌ಫಾರ್ಮ್‌ಗಳಿವೆ.
ಪಶ್ಚಿಮ ಬಂಗಾಳದ ಖರಗ್‌ಪುರ ಜಂಕ್ಷನ್ ರೈಲು ನಿಲ್ದಾಣ (KGP)ವು 12 ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದ್ದು, ಉತ್ತರ ಪ್ರದೇಶದ ಕಾನ್ಪುರ್ ಸೆಂಟ್ರಲ್ ರೈಲು ನಿಲ್ದಾಣ (CNB)ದಲ್ಲಿ 10 ಪ್ಲಾಟ್‌ಫಾರ್ಮ್‌ಗಳಿವೆ.
ಉತ್ತರಪ್ರದೇಶದ ಪ್ರಯಾಗ್‍ರಾಜ್ (ಅಲಹಾಬಾದ್) ಜಂಕ್ಷನ್ ರೈಲು ನಿಲ್ದಾಣ(ALD)ವು 10 ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದ್ದರೆ, ಬಿಹಾರಾದ ಪಾಟ್ನಾ ಜಂಕ್ಷನ್ ರೈಲು ನಿಲ್ದಾಣ (PNBE)ದಲ್ಲಿ 10 ಪ್ಲಾಟ್‌ಫಾರ್ಮ್‌ಗಳಿವೆ.