ರೈಲ್ವೆ ನಿಲ್ದಾಣದಲ್ಲಿ ಹಳದಿ ಬೋರ್ಡ್ ಮೇಲೆ PH ಎಂದು ಏಕೆ ಬರೆದಿರುತ್ತಾರೆ ಗೊತ್ತಾ..?

Wed, 01 Nov 2023-4:34 pm,

'PH' ಎಂದರೆ 'ಪ್ರಯಾಣಿಕರ ನಿಲುಗಡೆ'. ಈ ನಿಲ್ದಾಣಗಳು ವಾಸ್ತವವಾಗಿ ವರ್ಗ 'ಡಿ' ನಿಲ್ದಾಣಗಳ ಅಡಿಯಲ್ಲಿ ಬರುತ್ತವೆ. ಲೂಪ್ ಲೈನ್ ಮತ್ತು ಸಿಗ್ನಲಿಂಗ್ ಕೊರತೆಯಿಂದಾಗಿ ಈ ನಿಲ್ದಾಣಗಳಲ್ಲಿ ಯಾವುದೇ ನೌಕರರನ್ನು ನಿಯೋಜಿಸಲಾಗಿರುವುದಿಲ್ಲ. ಆದ್ದರಿಂದ ಈ ನಿಲ್ದಾಣ ಪ್ರಯಾಣಿಕ ರೈಲು ನಿಲುಗಡೆಗೆ ಮಾತ್ರ.

ಇಂತಹ ಪಿಎಚ್‌ ನಿಲ್ದಾಣಗಳು ಸಾಮಾನ್ಯವಾಗಿ ಸಣ್ಣ ಹಳ್ಳಿಗಳಲ್ಲಿ ಅಥವಾ ದೂರದ ಪ್ರದೇಶಗಳಲ್ಲಿ ಕಂಡುಬರುತ್ತವೆ. ಪ್ಯಾಸೆಂಜರ್ ರೈಲಿನ ಲೋಕೋ ಪೈಲಟ್ ಸೂಚನೆಗಳ ಪ್ರಕಾರ, ರೈಲನ್ನು ಇಲ್ಲಿ 2 ನಿಮಿಷಗಳ ಕಾಲ ನಿಲ್ಲಿಸುತ್ತಾರೆ.

ಈ ನಿಲ್ದಾಣಗಳಲ್ಲಿ ಟಿಕೆಟ್‌ಗಳನ್ನು ಯಾರು ಮಾರಾಟ ಮಾಡುತ್ತಾರೆ ಎಂಬ ಪ್ರಶ್ನೆ ಬರಬಹುದು. ಟಿಕೆಟ್ ಮಾರಾಟ ಮಾಡಲು, ರೈಲ್ವೆ ಇಲಾಖೆ ಸ್ಥಳೀಯ ಜನರನ್ನು ಗುತ್ತಿಗೆ ಮತ್ತು ಕಮಿಷನ್ ಆಧಾರದ ಮೇಲೆ ನೇಮಿಸುತ್ತದೆ.

ರೈಲ್ವೆ ಇಲಾಖೆಯು ಟಿಕೆಟ್ ಮಾರಾಟದ ಸಂಖ್ಯೆಯ ಆಧಾರದ ಮೇಲೆ ಈ ನಿಲ್ದಾಣಗಳಲ್ಲಿ ಟಿಕೆಟ್ ಕೌಂಟರ್‌ಗಳು, ಪ್ಲಾಟ್‌ಫಾರ್ಮ್‌ಗಳು ಮತ್ತು ಫುಟ್ ಓವರ್ ಬ್ರಿಡ್ಜ್‌ಗಳಂತಹ ಕೆಲವು ಸೌಲಭ್ಯಗಳನ್ನು ಸೇರಿಸುತ್ತದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link