Indian Railways : ಟಿಕೆಟ್ ರದ್ದು ಮಾಡದೆಯೇ ಯಾತ್ರೆಯ ದಿನಾಂಕ ಬದಲಾಯಿಸಿಕೊಳ್ಳಲು ಹೀಗೆ ಮಾಡಿ

Thu, 08 Jul 2021-3:25 pm,

ಭಾರತೀಯ ರೈಲ್ವೆ ತನ್ನ ಪ್ರಯಾಣಿಕರಿಗೆ ಪ್ರಯಾಣದ ದಿನಾಂಕವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸುವ ಸೌಲಭ್ಯವನ್ನು ನೀಡುತ್ತದೆ. ಕನಫರ್ಮ್ , ಆರ್‌ಎಸಿ, ವೇಟಿಂಗ್ ಟಿಕೆಟ್‌ನಲ್ಲಿ ದಿನಾಂಕವನ್ನು ಬದಲಾಯಿಸಿಕೊಳ್ಳಬಹುದು.  ಭಾರತೀಯ ರೈಲ್ವೆಯ ಪ್ರಕಾರ, ಈ ಟಿಕೆಟ್‌ಗಳಲ್ಲಿ  ನಿಗದಿತ ಶುಲ್ಕವನ್ನು ಪಾವತಿಸಿ  ಪ್ರಯಾಣದ ದಿನಾಂಕವನ್ನು ಅದೇ ಗಮ್ಯಸ್ಥಾನಕ್ಕೆ ''Preponed' ಅಥವಾ 'Postponed' ಮಾಡಿಕೊಳ್ಳಬಹುದು. ಇದಲ್ಲದೆ, ರೈಲ್ವೆ ಪ್ರಯಾಣಿಕರಿಗೆ ತಮ್ಮ ಪ್ರಯಾಣವನ್ನು ವಿಸ್ತರಿಸಲು, ಮತ್ತು ತಮ್ಮ ಪ್ರಯಾಣದ ಬೋರ್ಡಿಂಗ್ ಕೇಂದ್ರವನ್ನು ಬದಲಾಯಿಸಲು ಮತ್ತು ತಮ್ಮ ಟಿಕೆಟ್‌ಗಳನ್ನು  ಅಪ್‌ಗ್ರೇಡ್ ಮಾದುವ ಅವಕಾಶ ಕೂಡಾ ಸಿಗಲಿದೆ.  ಈ ಕೆಲವು ಸೌಲಭ್ಯಗಳು ಆಫ್‌ಲೈನ್ ಟಿಕೆಟ್‌ಗಳಿಗೆ ಮಾತ್ರ ಅನ್ವಯವಾಗಿದ್ದರೆ, ಇನ್ನು ಕೆಲವು ಆಫ್‌ಲೈನ್ ಮತ್ತು ಆನ್‌ಲೈನ್ ಎರಡು ಟಿಕೆಟ್‌ಗಳಿಗೆ ಲಭ್ಯವಿದೆ.  

ಭಾರತೀಯ ರೈಲ್ವೆಯ ವೆಬ್‌ಸೈಟ್‌ನ ಪ್ರಕಾರ, ನಿಲ್ದಾಣದ ಕೌಂಟರ್‌ನಲ್ಲಿ ಕಾಯ್ದಿರಿಸಿದ ಟಿಕೆಟಿನ ಪ್ರಯಾಣದ ದಿನಾಂಕವನ್ನು 'Preponed' ಅಥವಾ 'Postponed' ಮಾಡಿಕೊಳ್ಳಬಹುದು. ಪ್ರಯಾಣದ ದಿನಾಂಕವನ್ನು Preponed' ಅಥವಾ 'Postponed'  ಮಾಡಲು ರೈಲು ಹೊರಡುವ 48 ಗಂಟೆಗಳ ಮೊದಲು ಮೀಸಲಾತಿ ಕಚೇರಿಗೆ ಹೋಗಿ ತನ್ನ ಟಿಕೆಟ್ ಅನ್ನು ಸಲ್ಲಿಸಬೇಕಾಗುತ್ತದೆ. ಈ ಸೌಲಭ್ಯವು ಆಫ್‌ಲೈನ್ ಟಿಕೆಟ್‌ಗಳಿಗೆ ಮಾತ್ರ ಲಭ್ಯವಿರುತ್ತದೆ. ಆನ್‌ಲೈನ್‌ನಲ್ಲಿ ಕಾಯ್ದಿರಿಸಿದ ಟಿಕೆಟ್‌ಗಳಲ್ಲಿ ಈ ಸೌಲಭ್ಯ ಇರುವುದಿಲ್ಲ.  

ಒಂದು ವೇಳೆ ನೀವು ಟಿಕೆಟ್ ಬುಕ್ ಮಾಡುವಾಗ ನಮೂದಿಸಿದ್ದ ಸ್ಟೇಶನ್ ಗಿಂತ ಮುಂದಿನ ಸ್ಟೇಷನ್ ವರೆಗೆ ಪ್ರಯಾಣ ಮಾಡಬೇಕಾದರೆ,  ನಿಮ್ಮ ಗಮ್ಯಸ್ಥಾನವನ್ನು ತಲುಪುವ ಮೊದಲೇ, ಟಿಕೆಟ್ ಚೆಕಿಂಗ್ ಸಿಬ್ಬಂದಿಯನ್ನು ಸಂಪರ್ಕಿಸಬೇಕು. ಮತ್ತು ಅವರಿಗೆ ಪ್ರಯಾಣದ ವಿವರವನ್ನು ಸಲ್ಲಿಸಬೇಕು. 

ಪ್ರಯಾಣಿಕರು ಮೂಲ ಬೋರ್ಡಿಂಗ್ ನಿಲ್ದಾಣದ ಸ್ಟೇಷನ್ ಮ್ಯಾನೇಜರ್‌ಗೆ ಲಿಖಿತವಾಗಿ ಅರ್ಜಿ ಸಲ್ಲಿಸುವ ಮೂಲಕ ಅಥವಾ ರೈಲು ಹೊರಡುವ 24 ಗಂಟೆಗಳ ಮೊದಲು ಗಣಕೀಕೃತ ಮೀಸಲಾತಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ, ಪ್ರಯಾಣದ ಬೋರ್ಡಿಂಗ್ ನಿಲ್ದಾಣವನ್ನು ಬದಲಾಯಿಸಬಹುದು. ಈ ಸೌಲಭ್ಯವು ಆಫ್‌ಲೈನ್ ಮತ್ತು ಆನ್‌ಲೈನ್ ಟಿಕೆಟ್‌ಗಳಲ್ಲಿ ಲಭ್ಯವಿದೆ.  

ನಿಮ್ಮ ಟಿಕೆಟ್ ಅನ್ನು ಅದೇ ರೈಲಿನಲ್ಲಿ ಅಪ್‌ಗ್ರೇಡ್ ಮಾಡಲು ಬಯಸಿದರೆ, ಅಂದರೆ, ನಿಮ್ಮ ಬುಕಿಂಗ್ ಸ್ಲೀಪರ್ ತರಗತಿಯಲ್ಲಿದ್ದರೆ ಮತ್ತು ನೀವು ಎಸಿಗೆ ಅಪ್‌ಗ್ರೇಡ್ ಮಾಡಬೇಕೆಂದಿದ್ದರೆ, ಪ್ರಯಾಣದ ಸಮಯದಲ್ಲಿ TTE ಯೊಂದಿಗೆ ಮಾತನಾಡಬೇಕಾಗುತ್ತದೆ. ಆಸನ ಲಭ್ಯತೆ ಇದ್ದರೆ ಟಿಟಿಇ ನಿಮ್ಮ ಟಿಕೆಟ್ ಅನ್ನು ಅಪ್‌ಗ್ರೇಡ್ ಮಾಡಬಹುದು. ಆದರೆ ಇದಕ್ಕಾಗಿ ನೀವು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಮೀಸಲಾತಿ ಶುಲ್ಕ ಮತ್ತು ಪ್ರಯಾಣದ ದೂರಕ್ಕೆ ಅನುಗುಣವಾಗಿ ನಿಮಗೆ ಶುಲ್ಕ ವಿಧಿಸಲಾಗುತ್ತದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link