22ನೇ ವಯಸ್ಸಿಗೆ ನಿವೃತ್ತಿ ಘೋಷಿಸಿದ ಭಾರತದ ಸ್ಟಾರ್‌ ಕ್ರಿಕೆಟರ್‌: ಈತ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟಿಗ... 70 ಸಾವಿರ ಕೋಟಿಗೂ ಅಧಿಕ ಸಾಮ್ರಾಜ್ಯದ ಒಡೆಯ!

Wed, 04 Dec 2024-2:33 pm,

ಸದ್ಯ ಭಾರತ ಕ್ರಿಕೆಟ್ ತಂಡದಲ್ಲಿರುವ ಅತ್ಯಂತ ಶ್ರೀಮಂತ ಕ್ರಿಕೆಟಿಗ ಯಾರು ಎಂದು ಕೇಳಿದರೆ ಎಲ್ಲರೂ ಹೇಳುವುದು ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಅಥವಾ ಸಚಿನ್ ತೆಂಡೂಲ್ಕರ್. ಇದು ನಿಜವೂ ಹೌದು. ಈ ಭಾರತೀಯ ಕ್ರಿಕೆಟಿಗರ ನಿವ್ವಳ ಮೌಲ್ಯ ಸಾವಿರ ಕೋಟಿಗೂ ಹೆಚ್ಚು. ಈ ಆಟಗಾರರ ಹೆಸರುಗಳು ಬ್ರಾಂಡ್ ಆಗಿ ಮಾರ್ಪಟ್ಟಿವೆ.

ಆದರೆ ವಿರಾಟ್, ಧೋನಿ ಮತ್ತು ಸಚಿನ್‌ಗಿಂತ ಅನೇಕ ಪಟ್ಟು ಶ್ರೀಮಂತ ಭಾರತೀಯ ಕ್ರಿಕೆಟಿಗರೊಬ್ಬರು ಇದ್ದಾರೆ. ಈ ಕ್ರಿಕೆಟಿಗನಿಗೆ ಹೆಸರಲ್ಲಿದೆ ಅಪಾರ ಸಂಪತ್ತು ಇದೆ.

ಈ ಆಟಗಾರನ ಹೆಸರು ಆರ್ಯಮನ್ ಬಿರ್ಲಾ, ಅವರು ತಮ್ಮ ಕ್ರಿಕೆಟ್ ವೃತ್ತಿಜೀವನಕ್ಕೆ ವಿರಾಮ ನೀಡಿದ ನಂತರ ತಮ್ಮ ತಂದೆ ಕುಮಾರ್ ಮಂಗಲಂ ಬಿರ್ಲಾ ಅವರ ವ್ಯವಹಾರವನ್ನು ವಹಿಸಿಕೊಂಡಿದ್ದಾರೆ. ಆರ್ಯಮಾನ್ ಬಿರ್ಲಾ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ. ಅವರ ಸಂಪತ್ತಿನ ಬಗ್ಗೆ ಹೇಳುವುದಾದರೆ 70 ಸಾವಿರ ಕೋಟಿಗೂ ಹೆಚ್ಚು ಒಡೆಯ. ಇಷ್ಟೊಂದು ಅಪಾರ ಸಂಪತ್ತು ಇದ್ದರೂ ಆರ್ಯಮನ್ ಟೀಂ ಇಂಡಿಯಾ ಪರ ಆಡಲು ಸಾಧ್ಯವಾಗಲಿಲ್ಲ.

 

ಆರ್ಯಮನ್ 2017ರಲ್ಲಿ ಮಧ್ಯಪ್ರದೇಶಕ್ಕಾಗಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು.

 

ಮರುವರ್ಷವೇ ಲಿಸ್ಟ್ ʼಎʼ ನಲ್ಲಿಯೂ ಆಡುವ ಅವಕಾಶ ಸಿಕ್ಕಿತು. ಪ್ರಥಮ ದರ್ಜೆ ಕ್ರಿಕೆಟ್ ಆರ್ಯಮನ್ 9 ಪಂದ್ಯಗಳ 16 ಇನ್ನಿಂಗ್ಸ್‌ಗಳಲ್ಲಿ 1 ಶತಕ ಮತ್ತು 1 ಅರ್ಧಶತಕದೊಂದಿಗೆ ಒಟ್ಟು 414 ರನ್ ಗಳಿಸಿದರು. ಇದಲ್ಲದೇ ಆರ್ಯಮನ್ 4 ಪಂದ್ಯಗಳಲ್ಲಿ 36 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಆರ್ಯಮನ್ ಅವರು ಕೇವಲ 22 ವರ್ಷದವರಾಗಿದ್ದಾಗ 2019 ರಲ್ಲಿ ಕೊನೆಯ ಬಾರಿಗೆ ಆಟವನ್ನಾಡಿದ್ದು, ಆ ಬಳಿಕ ನಿವೃತ್ತಿ ಘೋಷಿಸಿದ್ದರು.

 

ಕ್ರಿಕೆಟ್ ತೊರೆದ ನಂತರ, ಆರ್ಯಮಾನ್ ತನ್ನ ತಂದೆಯ ವ್ಯವಹಾರವನ್ನು ನಿಭಾಯಿಸುತ್ತಿದ್ದಾರೆ. 2023 ರಲ್ಲಿ ಆದಿತ್ಯ ಬಿರ್ಲಾ ಫ್ಯಾಷನ್ ಮತ್ತು ರಿಟೇಲ್ ಲಿಮಿಟೆಡ್ (ABFRL) ನಲ್ಲಿ ನಿರ್ದೇಶಕರಾಗಿ ಆರ್ಯಮನ್ ಅವರನ್ನು ಆದಿತ್ಯ ಬಿರ್ಲಾ ಗ್ರೂಪ್‌ಗೆ ಸೇರಿಸಲಾಯಿತು. ಆದಿತ್ಯ ಬಿರ್ಲಾ ಮ್ಯಾನೇಜ್‌ಮೆಂಟ್ ಲಿಮಿಟೆಡ್ ಮತ್ತು ಗ್ರಾಸಿಮ್ ಇಂಡಸ್ಟ್ರೀಸ್ ಎರಡರ ಮಂಡಳಿಗಳಲ್ಲಿಯೂ ಸಹ ನಿರ್ದೇಶಕರಾಗಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link