ಪಾಕಿಸ್ತಾನಿ ಸಿನಿಮಾಗಳಲ್ಲಿ ನಟಿಸಿದ ಭಾರತದ ಖ್ಯಾತ ತಾರೆಯರು ಇವರು
ಶ್ವೇತಾ ತಿವಾರಿ: ಭಾರತೀಯ ಟೆಲಿವಿಷನ್ ಉದ್ಯಮದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ ನಟಿ ಶ್ವೇತಾ ತಿವಾರಿ ಅವರು ಪಾಕಿಸ್ತಾನಿ ಚಲನಚಿತ್ರಗಳಲ್ಲಿಯೂ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ನಟಿ 2014 ರ ಸುಲ್ತಾನತ್ ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರವು ಪಾಕಿಸ್ತಾನಿ ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಹಿಟ್ ಆಗಿತ್ತು.
ನೇಹಾ ಧೂಪಿಯಾ: ತನ್ನ ಸಖತ್ ನಟನೆಗೆ ಹೆಸರುವಾಸಿಯಾಗಿರುವ ನೇಹಾ ಧೂಪಿಯಾ ಪಾಕಿಸ್ತಾನಿ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ವರದಿಗಳ ಪ್ರಕಾರ, ನೇಹಾ ಧೂಪಿಯಾ ಪಾಕಿಸ್ತಾನಿ ಚಿತ್ರ 'ಪ್ಯಾರ್ ನಾ ಕರ್ನಾ'ದಲ್ಲಿ ಐಟಂ ನಂಬರ್ ಮಾಡಿದ್ದಾರೆ.
ಕಿರಣ್ ಖೇರ್: ಹಲವು ಚಿತ್ರಗಳು ಮತ್ತು ರಿಯಾಲಿಟಿ ಶೋಗಳಲ್ಲಿ ತಮ್ಮ ಕೈಚಳಕವನ್ನು ತೋರಿಸಿರುವ ಕಿರಣ್ ಖೇರ್, ಪಾಕಿಸ್ತಾನಿ ಚಿತ್ರದಲ್ಲೂ ಕೆಲಸ ಮಾಡಿದ್ದಾರೆ. 2003 ರಲ್ಲಿ ಬಿಡುಗಡೆಯಾದ ಪಾಕಿಸ್ತಾನಿ ಚಲನಚಿತ್ರ ಖಾಮೋಶ್ ಪಾನಿಯಲ್ಲಿ ನಟಿ ಕಾಣಿಸಿಕೊಂಡರು.
ಜಾನಿ ಲಿವರ್: ಈ ಪಟ್ಟಿಯಲ್ಲಿ ಅತ್ಯಂತ ಆಶ್ಚರ್ಯಕರ ಹೆಸರು ಜಾನಿ ಲಿವರ್. ಖ್ಯಾತ ಹಾಸ್ಯನಟ ಜಾನಿ ಲಿವರ್ ಅವರು ಪಾಕಿಸ್ತಾನಿ ಚಲನಚಿತ್ರ 'ಲವ್ ಮೇ ಗಮ್' ನಲ್ಲಿ ಕೆಲಸ ಮಾಡಿದ್ದಾರೆ.
ಅರ್ಬಾಜ್ ಖಾನ್: ನಟ ಸಲ್ಮಾನ್ ಖಾನ್ ಅವರ ಸಹೋದರ ಅರ್ಬಾಜ್ ಖಾನ್ ಅವರು ಪಾಕಿಸ್ತಾನಿ ಚಲನಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ‘ಗಾಡ್ ಫಾದರ್’ ಚಿತ್ರದಲ್ಲಿ ಶಾಕಿರ್ ಖಾನ್ ಪಾತ್ರದಲ್ಲಿ ಅರ್ಬಾಜ್ ಖಾನ್ ನಟಿಸಿದ್ದರು.