74ರಲ್ಲೂ ಸಖತ್ ಫಿಟ್ ನಮ್ಮ ತಲೈವಾ..! ಫಿಟ್‌ನೆಸ್ ಕಾಪಾಡಿಕೊಳ್ಳಲು ರಜನಿ ಈ ಸರಳ ಟಿಪ್ಸ್ ಫಾಲೋ ಮಾಡ್ತಾರಂತೆ..
ನಟರಿಗೆ ಸಂಬಂಧಿಸಿದಂತೆ, ಅವರ ವಯಸ್ಸು ಏನೇ ಇರಲಿ, ಅವರು ಕ್ಯಾಮೆರಾಗಳು ಮತ್ತು ಅಭಿಮಾನಿಗಳಿಗಾಗಿ ಕೆಲವು ಕೆಲಸಗಳನ್ನು ಮಾಡಬೇಕು. ಆದರೆ ಒಂದು ನಿರ್ದಿಷ್ಟ ವಯಸ್ಸಿನ ನಂತರ ಅವರು ತಮ್ಮ ಹಳೆಯ ನೋಟವನ್ನು ಕಳೆದುಕೊಳ್ಳುತ್ತಾರೆ. 70ರ ಹರೆಯವನ್ನು ದಾಟಿ ಇನ್ನೂ ಗಟ್ಟಿಮುಟ್ಟಾಗಿರುವ ಏಕೈಕ ನಟ ನಮ್ಮ ಸೂಪರ್ ಸ್ಟಾರ್ ರಜನಿಕಾಂತ್.
ಯೌವನದಲ್ಲಿ ಹೀರೋ ಆಗಿ ನಟಿಸುವುದು ಸುಲಭದ ಕೆಲಸ. ಆದರೆ 74ರ ಹರೆಯದಲ್ಲಿ ಯುವಕರು ನಾಚುವಂತೆ, ಹಾಡಿಗೆ ಕುಣಿದು, ಹೊಡೆದಾಟದ ದೃಶ್ಯಗಳಲ್ಲಿ ನಟಿಸಿ, ಅಭಿಮಾನಿಗಳಿಂದ ಸಿಳ್ಳೆ ಹೊಡೆಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ.
ಇತ್ತೀಚೆಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರು 74ನೇ ವರ್ಷಕ್ಕೆ ಕಾಲಿಟ್ಟರು. ಮೊದ ಮೊದಲು ಸಾಮಾನ್ಯರಂತೆ ಕೆಲವು ಕೆಟ್ಟ ಚಟಗಳನ್ನು ಹೊಂದಿದ್ದ ತಲೈವಾ ಅವುಗಳನ್ನು ಹೋಗಲಾಡಿಸಿ ವಿಭಿನ್ನ ವ್ಯಕ್ತಿಯಾಗಿದ್ದಾರೆ. ಬನ್ನಿ ಇಳಿ ವಯಸ್ಸಿನಲ್ಲೂ ಫಿಟ್‌ನೆಸ್ ಹೇಗೆ ಕಾಪಾಡಿಕೊಂಡಿದ್ದಾರೆ ಎನ್ನುವುದನ್ನು ತಿಳಿಯೋಣ..
ರಜನಿ ಇತರರಂತೆ ಭಾರೀ ಯೋಗ ಮಾಡಲ್ಲ. ಅವರು ಸರಳ ಯೋಗ ಮತ್ತು ಉಸಿರಾಟದ ವ್ಯಾಯಾಮ ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಇದು ದೇಹವನ್ನು ಫಿಟ್ ಆಗಿ ಇಡುವುದಲ್ಲದೆ ಮನಸ್ಸನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.
ಪ್ರತಿದಿನ ಪ್ರಾಣಾಯಾಮ ಉಸಿರಾಟದ ಅಭ್ಯಾಸ ಮಾಡುವಾಗ ರಜಿನಿ ಧ್ಯಾನ ಮಾಡುವುದನ್ನು ಎಂದಿಗೂ ಮರೆಯುವುದಿಲ್ಲ. ಇದು ಶ್ವಾಸಕೋಶದ ಕಾರ್ಯವನ್ನು ಹೆಚ್ಚಿಸುತ್ತದೆ ಮತ್ತು ಉಸಿರಾಟವನ್ನು ಸುಲಭಗೊಳಿಸುತ್ತದೆ.
ನಟ ರಜನಿಕಾಂತ್ ಕೂಡ ಮನುಷ್ಯ. ಅವರೂ ಕೂಡ ತಮ್ಮ ಯೌವನದಲ್ಲಿ ನಾನಾ ದುಶ್ಚಟಗಳಿಗೆ ವ್ಯಸನಿಯಾಗಿದ್ದರು. ಈ ಬಗ್ಗೆ ಹಲವು ವೇದಿಕೆಗಳಲ್ಲಿ ಮಾತನಾಡಿದ್ದಾರೆ. ದಿನಕ್ಕೆ ಒಂದು ಪ್ಯಾಕ್ ಸಿಗರೇಟ್ ಸೇದುತ್ತಿದ್ದರಂತೆ. ಕುಡಿತದ ಚಟವೂ ಇತ್ತು. ಆದರೆ, ಒಂದು ಹಂತದ ನಂತರ ಅವೆಲ್ಲವನ್ನೂ ಕೈಬಿಟ್ಟು, ಈಗ ಉತ್ತಮ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದಾರೆ..
ನಟ ರಜನಿಕಾಂತ್ ಕಳೆದ ಕೆಲವು ವರ್ಷಗಳಿಂದ ಆರೋಗ್ಯಕರ ಆಹಾರ ಕ್ರಮವನ್ನು ಅನುಸರಿಸುತ್ತಿದ್ದಾರೆ. ಹಣ್ಣುಗಳು, ತರಕಾರಿಗಳು, ಧಾನ್ಯ ಮತ್ತು ಪ್ರೋಟೀನ್ ಆಹಾರವನ್ನು ಒಳಗೊಂಡ ಆಹಾರವನ್ನು ಪ್ರತಿದಿನ ಸೇವಿಸುತ್ತಾರೆ.. ಅತಿಯಾಗಿ ತಿನ್ನುವುದನ್ನು ಸಹ ನಿಯಂತ್ರಿಸುತ್ತಾರೆ. ಸಾಕಷ್ಟು ಪ್ರಮಾಣದ ನೀರನ್ನು ಕುಡಿಯಲು ಮರೆಯುವುದಿಲ್ಲ. ಹಣ್ಣಿನ ರಸವನ್ನು ಕುಡಿಯುತ್ತಾರೆ..
ನಟ ರಜನಿಕಾಂತ್ ಅವರು ಜಂಕ್ ಫುಡ್ ಅನ್ನು ಸಂಪೂರ್ಣವಾಗಿ ತ್ಯಜಿಸಿದ್ದಾರೆ.. ಫಾಸ್ಟ್ ಫುಡ್, ಚೀಸ್, ಮೇಯನೇಸ್, ಮಾಂಸದ ಕೊಬ್ಬುಗಳನ್ನು ಎಂದಿಗೂ ತಿನ್ನುವುದಿಲ್ಲ. ಅಷ್ಟೇ ಅಲ್ಲ, ಅವರು ಉಪ್ಪು ಮತ್ತು ಕೃತಕ ಸಿಹಿಕಾರಕಗಳನ್ನು ತಪ್ಪಿಸುತ್ತಾರೆ. ಮನೆ ಅಡುಗೆಯನ್ನ ಮಾತ್ರ ತಿನ್ನುತ್ತಾರೆ..
ನಾವು ಕೆಲಸ ಮಾಡದಿದ್ದಾಗ ಹೇಗೆ ವಿಶ್ರಾಂತಿ ಪಡೆಯುತ್ತೇವೆ. ಹಾಗಯೇ ಶೂಟಿಂಗ್ ಬಿಡುವಿನ ಸಮಯದಲ್ಲಿ ರಜನಿ ಅವರು ತಮ್ಮ ತೋಟದ ಮನೆಗೆ ಹೋಗುತ್ತಾರೆ. ಅಲ್ಲಿಗೆ ಪಕೃತಿ ಮಧ್ಯ ಸ್ವಚ್ಛ ಗಾಳಿಯನ್ನು ಸೇವಿಸುತ್ತ ಕಾಲ ಕಳೆಯುತ್ತಾರೆ..