Shreya Ghoshal : ಗ್ಲಾಮರ್ ಕ್ವೀನ್ ಆದ ಮೆಲೋಡಿ ಕ್ವೀನ್..! ಕ್ಯೂಟ್ ಶ್ರೇಯಾ ಘೋಷಾಲ್ ಫೋಟೋಸ್ ನೋಡಿ..
ಜನಪ್ರಿಯ ಗಾಯಕಿ ಶ್ರೇಯಾ ಘೋಷಾಲ್ ತಮ್ಮ ಮಧುರವಾದ ಧ್ವನಿಯಿಂದ ಲಕ್ಷಾಂತರ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ.
ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಬೆಂಗಾಲಿ, ಮರಾಠಿ, ಅಸ್ಸಾಮಿ, ಪಂಜಾಬಿ, ಒರಿಯಾ ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ.
ಕನ್ನಡದಲ್ಲಿ 300ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರ ಹಾಡುಗಳಿಗೆ ರಾಷ್ಟ್ರಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಲು ಲಭಿಸಿವೆ..
ಶ್ರೀಯಾ ಘೋಷಾಲ್ ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ಗಾಯಕರಲ್ಲಿ ಒಬ್ಬರು. ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ಗಾಯಕಿಯರಲ್ಲಿ ಇವರೂ ಒಬ್ಬರು.
ಶ್ರೇಯಾ ಘೋಷಾಲ್ ತನ್ನ ಬಾಲ್ಯದ ಸ್ನೇಹಿತ ಶಿಲಾಧಿತ್ಯ ಮುಖೋಪಾಧ್ಯಾಯ ಅವರನ್ನು ವಿವಾಹವಾದರು, ದಂಪತಿಗೆ ದೇವಯಾನ್ ಎಂಬ ಒರ್ವ ಮಗನಿದ್ದಾನೆ.
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಶ್ರೇಯಾ ಘೋಷಾಲ್ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಸಂಗೀತ ಕಚೇರಿಗಳ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿರುತಾರೆ.
ಗಾಯಕಿ ಶ್ರೇಯಾ ಇತ್ತೀಚಿನ ಫೋಟೋಶೂಟ್ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅನಂತ್ ಅಂಬಾನಿ ರಾಧಿಕಾ ಮರ್ಚಂಟ್ ಅವರ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಾಗ ತೆಗೆದ ಫೋಟೋಗಳನ್ನು ಶ್ರೇಯಾ ಪೋಸ್ಟ್ ಮಾಡಿದ್ದಾರೆ.
ಸ್ವಲ್ಪ ಗ್ಲಾಮರಸ್ ಇರುವ ಶ್ರೇಯಾ ಫೋಟೋಗಳಿಗೆ ಲೈಕ್ ಮತ್ತು ಕಾಮೆಂಟ್ ಮಹಾಪೂರವೇ ಹರಿದು ಬರುತ್ತಿದೆ.