ಸುನಿಲ್ ಗವಾಸ್ಕರ್ ಸಹೋದರಿಯನ್ನೇ ಪಟಾಯಿಸಿ ಮದುವೆಯಾದ ಭಾರತದ ಶ್ರೇಷ್ಠ ಬಲಗೈ ಬ್ಯಾಟರ್ ಇವರೇ! ಈತ ಕನ್ನಡಿಗನೂ ಹೌದು…
ಮೊದಲು ಗವಾಸ್ಕರ್ ನಾಯಕ ಎಂದುಕೊಂಡಿದ್ದ ತಂಡಕ್ಕೆ, ಮೆಗಾ ಈವೆಂಟ್’ಗೆ ಕೆಲವು ತಿಂಗಳ ಮೊದಲು ಶಾಕ್ ಕಾದಿತ್ತು. ಆಯ್ಕೆದಾರರು ಕಪಿಲ್ ದೇವ್’ಗೆ ನಾಯಕತ್ವವನ್ನು ಹಸ್ತಾಂತರಿಸಿದ್ದರು. ಇದಾದ ನಂತರ ಇಬ್ಬರ ನಡುವಿನ ಸಂಬಂಧವು ಸ್ವಲ್ಪ ಸಮಯದವರೆಗೆ ಹದಗೆಟ್ಟಿತು. ಆದರೆ ಶೀಘ್ರದಲ್ಲೇ ಕಪಿಲ್ ಮತ್ತು ಗವಾಸ್ಕರ್ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಟೀಂ ಇಂಡಿಯಾ ಪರ ಆಡಿದರು.
ಗವಾಸ್ಕರ್ ಬಗ್ಗೆ ಕ್ರಿಕೆಟ್ ಜಗತ್ತಿಗೆ ಗೊತ್ತಿಲ್ಲದ ಮತ್ತೊಂದು ಸತ್ಯವಿದೆ. ಅವರ ಸಹೋದರಿ ಕವಿತಾ, ಭಾರತೀಯ ತಂಡದ ಓರ್ವ ಆಟಗಾರನನ್ನು ವಿವಾಹವಾಗಿದ್ದಾರೆ. ಆದರೆ ಆ ಕ್ರಿಕೆಟಿಗ 1983ರ ವಿಶ್ವಕಪ್ ತಂಡದಲ್ಲಿ ಇರಲಿಲ್ಲ.
ಗುಂಡಪ್ಪ ವಿಶ್ವನಾಥ್ ಅವರು ಸುದೀರ್ಘ ಕಾಲ ಆಡಿದ ಭಾರತದ ಸ್ಟಾರ್ ಬ್ಯಾಟ್ಸ್‌ಮನ್. ವಿಶ್ವನಾಥ್ ಕರ್ನಾಟಕ ಮೂಲದವರಾಗಿದ್ದು, ಕುಟುಂಬ ಸಮೇತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಗವಾಸ್ಕರ್’ಗೆ ಇಬ್ಬರು ಸಹೋದರಿಯರು. ಕವಿತಾ ಮತ್ತು ನೂತನ್. ಅದರಲ್ಲಿ ಕವಿತಾ ಮದುವೆಯಾಗಿದ್ದು, ಶ್ರೇಷ್ಠ ಬಲಗೈ ಬ್ಯಾಟರ್ ವಿಶ್ವನಾಥ್ ಅವರನ್ನು.
ಗವಾಸ್ಕರ್ ಮತ್ತು ವಿಶ್ವನಾಥ್ ನಡುವಿನ ಸಾಮಾನ್ಯ ಅಂಶವೆಂದರೆ ಅವರಿಬ್ಬರೂ 1949 ರಲ್ಲಿ ಜನಿಸಿದ್ದು. ಇಬ್ಬರೂ 5 ಅಡಿ 5 ಇಂಚು ಎತ್ತರ. ಗವಾಸ್ಕರ್ 125 ಟೆಸ್ಟ್ ಪಂದ್ಯಗಳನ್ನು ಆಡಿದ್ದು 10,122 ರನ್ ಗಳಿಸಿದ್ದಾರೆ. ವಿಶ್ವನಾಥ್ 91 ಟೆಸ್ಟ್‌ಗಳಲ್ಲಿ 6,080 ರನ್ ಗಳಿಸಿದ್ದಾರೆ.