Infertility in Women: ಬಂಜೆತನಕ್ಕೆ ನೀವು ಮಾಡುವ ಈ ತಪ್ಪುಗಳು ಕೂಡಾ ಕಾರಣವಾಗಿರಬಹುದು
ಸ್ತ್ರೀರೋಗತಜ್ಞರ ಪ್ರಕಾರ, ಮಹಿಳೆ ಅಧಿಕ ತೂಕ ಅಥವಾ ಬೊಜ್ಜು ಹೊಂದಿದ್ದರೆ, ಗರ್ಭಧಾರಣೆಯ ಮೊದಲು ತೂಕ ಇಳಿಸಿಕೊಳ್ಳಲು ಪ್ರಯತ್ನಿಸಬೇಕು. ಏಕೆಂದರೆ ಬೊಜ್ಜು ಹಾರ್ಮೋನುಗಳ ಉತ್ಪಾದನೆಯ ಮೇಲೆ ಪರಿಣಾಮ ಬೀರುವುದರಿಂದ ಗರ್ಭ ಧರಿಸಲು ತೊಂದರೆ ಉಂಟುಮಾಡುತ್ತದೆ.
ಹೇಗೆ ಹೆಚ್ಚುವರಿ ಕೊಬ್ಬು ಮತ್ತು ಸ್ಥೂಲಕಾಯತೆಯು ಬಂಜೆತನಕ್ಕೆ ಕಾರಣವಾಗಬಹುದೋ, ಅದೇ ರೀತಿಯಲ್ಲಿ ಹೆಚ್ಚು ತೆಳ್ಳನೆಯ ದೇಹ ಹೊಂದಿದ್ದರೂ ಕೂಡಾ ತಾಯಿಯಾಗುವುದಕ್ಕೆ ತೊಡಕುಂಟು ಮಾಡಬಹುದು. ನೀವು ತಾಯಿಯಾಗಲು ಬಯಸಿದರೆ, ಆರೋಗ್ಯಕರ ಬಿಎಂಐ ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.
ಅಮೇರಿಕನ್ ಸೊಸೈಟಿ ಫಾರ್ ರಿಪ್ರೊಡಕ್ಟಿವ್ ಮೆಡಿಸಿನ್ ಪ್ರಕಾರ, ಸುಮಾರು 13 ಪ್ರತಿಶತದಷ್ಟು ಬಂಜೆತನ ಪ್ರಕರಣಗಳು ಮಹಿಳೆಯರ ಧೂಮಪಾನದಿಂದಾಗಿ ಸಂಭವಿಸುತ್ತವೆ. ಸಿಗರೆಟ್ ಹೊಗೆ ಪುರುಷರು ಮತ್ತು ಮಹಿಳೆಯರ ದೇಹದಲ್ಲಿನ ಹಾರ್ಮೋನುಗಳಿಗೆ ಹಾಗೂ ಡಿಎನ್‌ಎಗೆ ಹಾನಿ ಉಂಟು ಮಾಡುತ್ತದೆ.
ಮಹಿಳೆ ಪ್ರತಿದಿನ ಆಲ್ಕೊಹಾಲ್ ಸೇವಿಸಿದರೆ, ಅದು ನೇರವಾಗಿ ಅಂಡೋತ್ಪತ್ತಿ ಮತ್ತು ಬಂಜೆತನಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಕಾರಣವಾಗುತ್ತದೆ. ಇದಲ್ಲದೆ, ಗರ್ಭಾವಸ್ಥೆಯಲ್ಲಿ ಮಹಿಳೆ ಆಲ್ಕೊಹಾಲ್ ಸೇವಿಸಿದರೆ, ಅವಧಿಗೆ ಮುನ್ನ ಮಗು ಜನಿಸುವ ಅಪಾಯವಿರುತ್ತದೆ.
ಸಾಮಾನ್ಯವಾಗಿ 25 ರಿಂದ 35 ವರ್ಷ ಮಗುವಿಗೆ ಜನ್ಮ ನೀಡಲು ಸರಿಯಾದ ಸಮಯ ಎಂದು ವೈದ್ಯರು ಪರಿಗಣಿಸುತ್ತಾರೆ. ಏಕೆಂದರೆ 35 ವರ್ಷದ ನಂತರ ಮಹಿಳೆಯರ ಅಂಡಾಶಯದಲ್ಲಿ ಕಂಡುಬರುವ ಮೊಟ್ಟೆಗಳ ಗುಣಮಟ್ಟ ಕ್ಷೀಣಿಸಲು ಪ್ರಾರಂಭಿಸುತ್ತದೆ. ಇದರಿಂದಾಗಿ ಅವರು ಸಹಜವಾಗಿ ತಾಯಿಯಾಗುವುದು ಕಷ್ಟ ಸಾಧ್ಯವಾಗಬಹುದು.