Infinix Smart TV: ಕೇವಲ 9,499 ರೂ.ಗೆ 32 ಇಂಚಿನ Infinix ಸ್ಮಾರ್ಟ್ ಟಿವಿ!

Sat, 08 Jun 2024-11:14 pm,

Infinix ಕಂಪನಿಯ 32Y1 Plus Smart TV ಜೂನ್ 24ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ TV ಅದ್ಭುತ ದೃಶ್ಯ ಅನುಭವ ನೀಡಲಿದ್ದು, 250 ನಿಟ್‌ಗಳವರೆಗೆ ಗರಿಷ್ಠ ಬ್ರೈಟ್‌ನೆಸ್ ಹೊಂದಿರುವ HD-ಸಿದ್ಧ LED ಡಿಸ್ಪ್ಲೇ ಹೊಂದಿದೆ. ಇದು ಡಾಲ್ಬಿ ಆಡಿಯೋ ಬೆಂಬಲದೊಂದಿಗೆ 16 ವ್ಯಾಟ್‌ಗಳ ಆಡಿಯೋ ಔಟ್‌ಪುಟ್ ನೀಡುತ್ತದೆ. ಅದ್ಭುತ ಧ್ವನಿ ಅನುಭವ ಹೊಂದಿರುವ ಈ ಟಿವಿ ಬಹು ಕನೆಕ್ಟಿವಿಟಿ ಆಯ್ಕೆಗಳು ಮತ್ತು ಹಲವಾರು ಇನ್‌ಬಿಲ್ಟ್ ಅಪ್ಲಿಕೇಶನ್‌ಗಳೊಂದಿಗೆ ಲಭ್ಯವಿರಲಿದೆ.

32 ಇಂಚಿನ Infinix 32Y1 Plus ಸ್ಮಾರ್ಟ್ ಟಿವಿಯು ಅತಿ ಕಡಿಮೆ ಬೆಲೆ 9,499 ರೂ.ಗೆ ಲಭ್ಯವಿರಲಿದೆ. ಈ ಸ್ಮಾರ್ಟ್ ಟಿವಿಯು ಇತ್ತೀಚಿನ ದೃಶ್ಯ ಮತ್ತು ಆಡಿಯೋ ತಂತ್ರಜ್ಞಾನವನ್ನು, ಸ್ಮಾರ್ಟ್ ಫೀಚರ್‌ಗಳೊಂದಿಗೆ ಸಂಯೋಜಿಸಿ ಉತ್ತಮ ವೀಕ್ಷಣೆಯ ಅನುಭವ ನೀಡುತ್ತದೆ. 32Y1 Plus ಸ್ಮಾರ್ಟ್ ಟಿವಿಯು LED ಡಿಸ್ಪ್ಲೇ ಹೊಂದಿದ್ದು, ದೃಶ್ಯಗಳಿಗೆ ಜೀವ ತುಂಬುತ್ತದೆ. 

ಇದರ HD-ready, 250nits ವರೆಗಿನ ಗರಿಷ್ಠ ಬ್ರೈಟ್‌ನೆಸ್ ಸ್ಪಷ್ಟವಾದ ಪ್ರದರ್ಶನ ಒದಗಿಸುತ್ತದೆ. ಸ್ಮಾರ್ಟ್ ಟಿವಿ ಆಡಿಯೋ ಸಿಸ್ಟಮ್ ನಿಮಗೆ ಇಷ್ಟವಾಗುತ್ತದೆ. ಇದು 16 ವ್ಯಾಟ್‌ಗಳ ಆಡಿಯೋ ಔಟ್‌ಪುಟ್ & ಸ್ಟಿರಿಯೋ ಸ್ಪೀಕರ್‌ಗಳೊಂದಿಗೆ ಡಾಲ್ಬಿ ಆಡಿಯೋವನ್ನು ಬೆಂಬಲಿಸುತ್ತದೆ. ಸಿನಿಮಾ, ಸಂಗೀತ ಮತ್ತು ಗೇಮ್‌ಗಳಿಗೆ ಅದ್ಭುತ ಸೌಂಡ್ ಸಿಸ್ಟಂ ಹೊಂದಿದೆ.

32Y1 Plus Smart TVಯು ಕ್ವಾಡ್-ಕೋರ್ ಪ್ರೊಸೆಸರ್ ಮೂಲಕ 4GB ಮೆಮೊರಿಯೊಂದಿಗೆ ಸುಗಮ ಮತ್ತು ಸ್ಪಂದಿಸುವ ಕಾರ್ಯಕ್ಷಮತೆ ಹೊಂದಿದೆ. ಇದು ಎರಡು HDMI ಪೋರ್ಟ್‌ಗಳು, ಎರಡು USB ಪೋರ್ಟ್‌ಗಳು, LAN ಸಂಪರ್ಕ, ಹೆಡ್‌ಫೋನ್ ಜ್ಯಾಕ್ ಹೊಂದಿದೆ. HDMI ಪೋರ್ಟ್‌ಗಳಲ್ಲಿ ಒಂದು HDMI ARCಅನ್ನು ಬೆಂಬಲಿಸುತ್ತದೆ. ವೈರ್‌ಲೆಸ್ ಸಂಪರ್ಕಕ್ಕಾಗಿ Miracast ಇದೆ. ಇದು ಸಾಧನಗಳಿಂದ ಟಿವಿ ಸ್ಕ್ರೀನ್‌ಗೆ ಸುಲಭವಾಗಿ ಹಂಚಿಕೊಳ್ಳಲು ಸಹಾಯ ಮಾಡುತ್ತದೆ.

ಈ ಟಿವಿಯು ಬಳಕೆದಾರ ಸ್ನೇಹಿ ರಿಮೋಟ್ ಕಂಟ್ರೋಲ್‌ನೊಂದಿಗೆ ಬರುತ್ತದೆ. ಇದನ್ನು ಸರಳ ಮತ್ತು ಬಳಕೆಗೆ ಸುಲಭವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದಲ್ಲದೆ Jio Cinema, Hotstar, Prime Video, YouTubeನಂತಹ ಜನಪ್ರಿಯ ಸ್ಟ್ರೀಮಿಂಗ್ ಅಪ್ಲಿಕೇಶ್‌ಗಳನ್ನು Access ಮಾಡಲು ಹಾಟ್‌ ಕೀ ಕೂಡ ಇದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link