ಎಂಎಸ್ ಧೋನಿಗೆ ದಕ್ಷಿಣ ಭಾರತದ ಈ ಆಹಾರವೇ ಫೇವರೇಟ್: IPL ಟೈಂನಲ್ಲಿ ಬ್ರೇಕ್ ಫಾಸ್ಟ್’ಗೆ ಇದೇ ಬೇಕಂತೆ!

Sun, 24 Mar 2024-3:40 pm,
MS Dhoni favorite food

ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ 2024ರಲ್ಲಿ ಚೆನ್ನೈ ಪರ ಆಡುತ್ತಿರುವ ಮಾಹಿ, ನಾಯಕತ್ವ ತ್ಯಜಿಸಿದ್ದಾರೆ. ಜೊತೆಗೆ ಈ ಸೀಸನ್ ಅವರ ಕೊನೆಯ ಐಪಿಎಲ್ ಲೀಗ್ ಆಗಲಿದೆ ಎಂದು ಅನೇಕರು ಹೇಳುತ್ತಿದ್ದಾರೆ.

MS Dhoni favorite food

ಇನ್ನು ನಾವಿಂದು ಈ ವರದಿಯಲ್ಲಿ ಎಂಎಸ್ ಧೋನಿಗೆ ಇಷ್ಟವಾದ ಆಹಾರದ ಬಗ್ಗೆ ಮಾಹಿತಿ ನೀಡಲಿದ್ದೇವೆ.

MS Dhoni favorite food

ಧೋನಿಗೆ ಬಟರ್ ಚಿಕನ್, ದೋಸೆ ಮತ್ತು ಚಹಾ ಅಂದ್ರೆ ಪಂಚಪ್ರಾಣವಂತೆ. “ಮೊದಲಿನಿಂದಲೂ ಬಟರ್ ಚಿಕನ್ ಅಂದ್ರೆ ಮಾಹಿಗೆ ತುಂಬಾ ಇಷ್ಟ. ಆದರೂ ಕಟ್ಟುನಿಟ್ಟಿನ ಡಯಟ್ ಫಾಲೋ ಮಾಡ್ತಾರೆ. ಚೀಟ್ ಡೇ ಬಂದಾಗಲೆಲ್ಲಾ ಬಟರ್ ಚಿಕನ್ ಆರ್ಡರ್ ಮಾಡ್ತಾರೆ. ಅದರ ಜೊತೆ ಚಿಕನ್ ಚಿಲ್ಲಿ ಮತ್ತು ಬಟರ್ ನಾನ್ ಸಿಕ್ಕರೆ ಹೇಳೋದೇ ಬೇಡ” ಎಂದು ಒಂದೊಮ್ಮೆ ಮಾಹಿ ಕೋಚ್ ಹೇಳಿಕೆ ನೀಡಿದ್ದರು.

ಮಾಹಿ ಫಿಟ್‌ನೆಸ್ ಪ್ರಿಯರಾಗಿದ್ದರೂ ಸಹ, ಪತ್ನಿ ಸಾಕ್ಷಿ ಮಾಡಿದ ಬಟರ್ ಚಿಕನ್ ಸವಿಯಲು ಅವರು ಇಷ್ಟಪಡುತ್ತಾರಂತೆ. ಹೀಗಂತ ಸ್ವತಃ ಮಂದಿರಾ ಬೇಡಿ ಸಂದರ್ಶನವೊಂದರಲ್ಲಿ ಮಾಹಿ ಹೇಳಿದ್ದಾರೆ. ಅಲ್ಲದೆ ಮನೆಯಲ್ಲಿ ನಾನ್ ವೆಜ್ ಫುಡ್ ತಿನ್ನಲು ಇಷ್ಟಪಡುತ್ತಾರಂತೆ. ಹೋಟೆಲ್ ಮತ್ತು ರೆಸ್ಟೋರೆಂಟ್ ಆಹಾರವನ್ನು ಹೆಚ್ಚಾಗಿ ತಪ್ಪಿಸುತ್ತಾರೆ ಎಂದು ಹೇಳಿಕೊಂಡಿದ್ದಾರೆ .

ಮಾಹಿಗೆ ಮತ್ತೊಂದು ವೀಕ್ನೆಸ್ ಚಹಾ. “ನಾನು ಎಲ್ಲಿಗೆ ಹೋದರೂ, ಜನ ಟೀ ಕುಡಿಯುತ್ತೀರಾ ಅಂತ ಕೇಳ್ತಾರೆ, ನನಗೆ ಬೇಡ ಎನ್ನಲೂ ಸಾಧ್ಯವಾಗದೆ ಕುಡಿಯುತ್ತೇನೆ. ಹಲವು ವರ್ಷಗಳಿಂದ ನಾನು ಚಹಾವನ್ನು ತ್ಯಜಿಸಬೇಕು ಎಂದು ಯೋಚಿಸುತ್ತಿದ್ದೇನೆ, ಆದರೆ ಅದು ಇನ್ನೂ ನನ್ನನ್ನು ಕಾಡುತ್ತಿರುವ ಒಂದು ವೀಕ್ನೆಸ್” ಎಂದು ಮಾಹಿ ಹೇಳಿಕೊಂಡಿದ್ದಾರೆ.

ಇನ್ನು ದಕ್ಷಿಣ ಭಾರತದ ಪ್ರಖ್ಯಾತ ತಿಂಡಿ ದೋಸೆ ಧೋನಿಗೆ ಪಂಚಪ್ರಾಣವಂತೆ. ಈ ವಿಷಯದ ಬಗ್ಗೆ, ಚೆನ್ನೈ ಸೂಪರ್ ಕಿಂಗ್ಸ್ ವೆಬ್‌ಸೈಟ್ ಆಲ್ ಥಿಂಗ್ಸ್ ಯೆಲ್ಲೋವ್’ನ ಮೊದಲ ಸಂಚಿಕೆಯಲ್ಲಿ ಕುಕ್ ಮಾತನಾಡಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link