ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ತಂದೆ-ತಾಯಿ ಯಾರು ಗೊತ್ತೇ? ಇವರೂ ಸಹ ಖ್ಯಾತ ಕ್ರೀಡಾಪಟುಗಳು… ಈ ಫುಟ್ಬಾಲ್ ಚತುರ ಮದ್ವೆಯಾಗಿದ್ದು ತನ್ನ ಕೋಚ್ ಮಗಳನ್ನೇ
ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ. ಜೂನ್ 6 ರಂದು ಕುವೈತ್ ವಿರುದ್ಧ ಫಿಫಾ ವಿಶ್ವಕಪ್ 2026 ಕ್ವಾಲಿಫೈಯರ್ ಪಂದ್ಯದ ನಂತರ ನಿವೃತ್ತಿ ಹೊಂದುವುದಾಗಿ ಮೇ 16ರಂದು ಘೋಷಿಸಿದ್ದಾರೆ.
ಭಾರತೀಯ ಫುಟ್ಬಾಲ್ ತಂಡ ಮತ್ತು ಹೆಸರನ್ನು ವಿಭಿನ್ನ ಹಂತಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು ಸುನಿಲ್ ಛೆಟ್ರಿ. ನಾವಿಂದು ಈ ವರದಿಯಲ್ಲಿ ಸುನಿಲ್ ಛೆಟ್ರಿ ಅವರ ಹಿನ್ನೆಲೆ, ತಂದೆ ತಾಯಿ ಯಾರು, ಪತ್ನಿಯ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ.
ಛೆಟ್ರಿ ಪತ್ನಿ ಹೆಸರು ಸೋನಂ ಭಟ್ಟಾಚಾರ್ಯ. ಕೋಲ್ಕತ್ತಾದಲ್ಲಿ ನಡೆದ ಪಂದ್ಯದ ವೇಳೆ ಸೋನಂ ಅವರನ್ನು ನೋಡಿದ ಛೆಟ್ರಿ, ಮನಸೋತಿದ್ದರು. ನಂತರ ಇಬ್ಬರೂ ಪರಸ್ಪರ ಸ್ನೇಹಿತರ ಮೂಲಕ ಮತ್ತೆ ಭೇಟಿಯಾದರು. ಇದಾದ ನಂತರ ಇಬ್ಬರೂ ಡೇಟಿಂಗ್ ಮಾಡಲು ಪ್ರಾರಂಭಿಸಿದರು.
ದೀರ್ಘಕಾಲದವರೆಗೆ ಪರಸ್ಪರ ಡೇಟಿಂಗ್ ಮಾಡಿದ ಸುನಿಲ್ ಛೆಟ್ರಿ ಮತ್ತು ಸೋನಮ್ ಭಟ್ಟಾಚಾರ್ಯ 4 ಡಿಸೆಂಬರ್ 2017 ರಂದು ವಿವಾಹವಾದರು.
ಸುನಿಲ್ ಛೆಟ್ರಿ ಮತ್ತು ಸೋನಮ್ ಭಟ್ಟಾಚಾರ್ಯ ದಂಪತಿಗೆ ಒಬ್ಬ ಮುದ್ದಾದ ಮಗನಿದ್ದು, ಹೆಸರು ಧ್ರುವ. ಕಳೆದ ವರ್ಷ ಆಗಸ್ಟ್ 31 ರಂದು ಜನಿಸಿದರು.
ಅಂದಹಾಗೆ ಸುನಿಲ್ ಛೆಟ್ರಿ ಅವರ ಪತ್ನಿ ಸೋನಂ ಭಟ್ಟಾಚಾರ್ಯ ಮಾಜಿ ಫುಟ್ಬಾಲ್ ಆಟಗಾರ ಸುಬ್ರತಾ ಭಟ್ಟಾಚಾರ್ಯ ಅವರ ಪುತ್ರಿ.
39 ವರ್ಷದ ಸುನಿಲ್ ಛೆಟ್ರಿ ತಮ್ಮ ವೃತ್ತಿಜೀವನದಲ್ಲಿ ಒಟ್ಟು 145 ಬಾರಿ ಭಾರತವನ್ನು ಪ್ರತಿನಿಧಿಸಿದ್ದಾರೆ, ಈ ಸಂದರ್ಭದಲ್ಲಿ 93 ಗೋಲುಗಳನ್ನು ಗಳಿಸಿದ್ದಾರೆ.
ಇನ್ನು ಇವರ ತಂದೆ-ತಾಯಿ ಬಗ್ಗೆ ಮಾತನಾಡುವುದಾದರೆ, ಸುನಿಲ್ ಛೆಟ್ರಿ ತಂದೆ ಆರ್ಮಿ ಮ್ಯಾನ್ ಕೆಬಿ ಛೆಟ್ರಿ ಮತ್ತು ತಾಯಿ ಸುಶೀಲಾ, ಇವರಿಬ್ಬರು ಸಹ ಫುಟ್ಬಾಲ್ ಹಿನ್ನೆಲೆಯುಳ್ಳವರು. ಅಷ್ಟೇ ಅಲ್ಲದೆ, ಸುಶೀಲಾ ನೇಪಾಳ ರಾಷ್ಟ್ರೀಯ ಫುಟ್ಬಾಲ್ ತಂಡದಲ್ಲಿ ಆಡಿದ್ದರು. ಇನ್ನು ಸುನಿಲ್ ಜನಿಸಿದ್ದು, ಆಗಸ್ಟ್ 3, 1984 ರಂದು ತೆಲಂಗಾಣದ ಸಿಕಂದರಾಬಾದ್‌ನಲ್ಲಿ.