Jahnvi Kapoor: ಬಾಲಿವುಡ್ ಸುಂದರಿ ಜಾನ್ವಿ ಕಪೂರ್’ಗೆ RCBಯ ಆ ಇಬ್ಬರು ಆಟಗಾರರೇ ಫೇವರೇಟ್ ಕ್ರಿಕೆಟರ್ಸ್!

Sun, 25 Feb 2024-3:01 pm,

ಇದೀಗ ಈ ವರದಿಯಲ್ಲಿ ಬಾಲಿವುಡ್‌ ನಟಿ ಜಾನ್ವಿ ಕಪೂರ್ ಅವರಿಗೆ ಇಷ್ಟವಾದ ಇಬ್ಬರು ಭಾರತೀಯ ಕ್ರಿಕೆಟಿಗರ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ವತಃ ಅವರೇ ಹೆಸರನ್ನು ಬಹಿರಂಗಪಡಿಸಿದ್ದಾರೆ.

ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಎರಡನೇ ಬಾರಿಗೆ ತಂದೆಯಾಗಿದ್ದಾರೆ. ಫೆಬ್ರವರಿ 15 ರಂದು ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಇದನ್ನು ಸ್ವತಃ ಕಿಂಗ್ ಕೊಹ್ಲಿ ಅವರೇ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಜಾನ್ವಿ ಕಪೂರ್ ಹೇಳಿಕೆ ವೈರಲ್ ಆಗುತ್ತಿದೆ. ಹಿರಿಯ ನಟಿ ದಿವಂಗತ ಶ್ರೀದೇವಿ ಅವರ ಹಿರಿಯ ಮಗಳು ಜಾನ್ವಿ ಕಪೂರ್, ವಿರಾಟ್ ಕೊಹ್ಲಿ ಮತ್ತು ದಿನೇಶ್ ಕಾರ್ತಿಕ್ ಅವರನ್ನು ತಮ್ಮ ನೆಚ್ಚಿನ ಆಟಗಾರರು ಎಂದು ಹೆಸರಿಸಿದ್ದಾರೆ.

ಐಪಿಎಲ್ 2024ರ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿದೆ.

IPL 2024 ರ 17 ನೇ ಋತುವಿನ ಮೊದಲ ಪಂದ್ಯವು ಮಾರ್ಚ್ 22 ರಿಂದ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವೆ ನಡೆಯಲಿದೆ. ಈ ಉದ್ಘಾಟನಾ ಪಂದ್ಯದಲ್ಲಿ ಮತ್ತೊಮ್ಮೆ 38 ವರ್ಷದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಬೆಂಗಳೂರು ಪರ ಕಣಕ್ಕಿಳಿಯಲಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link