ಕ್ಲಾಸ್ ಟಾಪರ್ ಅನುಷ್ಕಾ ಶರ್ಮಾ.. ಹಾಗಾದ್ರೆ ವಿರಾಟ್ ವಿದ್ಯಾರ್ಹತೆ ಏನು? ಶಿಕ್ಷಣ ಪೂರ್ಣಗೊಳಿಸಿದ್ದು ಕರ್ನಾಟಕದ ಈ ಸ್ಕೂಲ್’ನಲ್ಲಿ!
ನಟಿ ಅನುಷ್ಕಾ ಶರ್ಮಾ ಬಾಲಿವುಡ್’ನಲ್ಲಿ ವಿಶೇಷ ಗುರುತನ್ನು ಸೃಷ್ಟಿಸಿದ್ದಾರೆ. ನಟಿಯಾಗಬೇಕು ಎಂದು ಬಯಸಿರದ ಅನುಷ್ಕಾ, ಅಚಾನಕ್ ಆಗಿ ಈ ಕ್ಷೇತ್ರಕ್ಕೆ ಕಾಲಿಟ್ಟರು.
ಅನುಷ್ಕಾ ಶರ್ಮಾ ಮೇ 1, 1988 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಜನಿಸಿದರು. ಅವರ ತಂದೆ ಕುಮಾರ್ ಶರ್ಮಾ ಸೇನೆಯಲ್ಲಿ ಅಧಿಕಾರಿಯಾಗಿದ್ದರು. ತಾಯಿ ಆಶಿಮಾ ಶರ್ಮಾ ಗೃಹಿಣಿ. ಸಹೋದರ ಕರ್ಣೇಶ್ ಶರ್ಮಾ ಮರ್ಚೆಂಟ್ ನೇವಿಯಲ್ಲಿದ್ದು, ಈಗ ಚಲನಚಿತ್ರ ನಿರ್ಮಾಪಕರಾಗಿದ್ದಾರೆ. ಸೇನಾ ಕುಟುಂಬದಿಂದ ಬಂದ ಅನುಷ್ಕಾ ಅವರ ಬಾಲ್ಯ ಸಾಕಷ್ಟು ಶಿಸ್ತಿನಲ್ಲೇ ಕಳೆದಿತ್ತು.
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಬಾಲ್ಯದಿಂದಲೂ ಅಧ್ಯಯನದಲ್ಲಿ ತುಂಬಾ ಚುರುಕಾಗಿದ್ದರು. ತಮ್ಮ ಶಾಲಾ ಶಿಕ್ಷಣವನ್ನು ಬೆಂಗಳೂರಿನ ಆರ್ಮಿ ಶಾಲೆಯಲ್ಲಿ ಮಾಡಿದರು. ಮನೆಯಲ್ಲಿ ಶಿಸ್ತು ಮತ್ತು ಅಧ್ಯಯನದ ವಾತಾವರಣದಿಂದಾಗಿ ಕ್ಲಾಸ್’ನಲ್ಲಿ ಯಾವತ್ತೂ ಟಾಪರ್ ಇವರೇ.
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಬಾಲ್ಯದಿಂದಲೂ ಅಧ್ಯಯನದಲ್ಲಿ ತುಂಬಾ ಚುರುಕಾಗಿದ್ದರು. ತಮ್ಮ ಶಾಲಾ ಶಿಕ್ಷಣವನ್ನು ಬೆಂಗಳೂರಿನ ಆರ್ಮಿ ಶಾಲೆಯಲ್ಲಿ ಮಾಡಿದರು. ಮನೆಯಲ್ಲಿ ಶಿಸ್ತು ಮತ್ತು ಅಧ್ಯಯನದ ವಾತಾವರಣದಿಂದಾಗಿ ಕ್ಲಾಸ್’ನಲ್ಲಿ ಯಾವತ್ತೂ ಟಾಪರ್ ಇವರೇ.
ಅಂದಹಾಗೆ ವಿರಾಟ್ ಕೊಹ್ಲಿ 12ನೇ ಪಾಸ್ ಆಗಿದ್ದಾರೆ. ಕ್ರಿಕೆಟ್’ಗಾಗಿ ಶಿಕ್ಷಣವನ್ನೇ ತೊರೆದಿದ್ದರು. ಆದರೆ ಅನುಷ್ಕಾ ಶರ್ಮಾ ಅರ್ಥಶಾಸ್ತ್ರದಲ್ಲಿ ಎಂಎ ಪದವಿ ಪಡೆದಿದ್ದಾರೆ. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬಿಎ ಓದಿರುವ ಅವರು, ಕಾಲೇಜ್ ಟಾಪರ್ ಕೂಡ ಹೌದು.
ಅನುಷ್ಕಾ ಶರ್ಮಾ ಕಾಲೇಜು ಮುಗಿದ ನಂತರ ಮಾಡೆಲಿಂಗ್’ನತ್ತ ಗಮನ ಹರಿಸಲು ಬಯಸಿದ್ದರು. ನಟಿಯಾಗುವ ಯೋಚನೆ ಕೂಡ ಇರಲಿಲ್ಲ. ಪದವಿ ಮುಗಿದ ನಂತರ ಅನುಷ್ಕಾ ಶರ್ಮಾ ಮುಂಬೈಗೆ ತೆರಳಿದರು. ಅಲ್ಲಿ ಮಾಡೆಲಿಂಗ್’ನಲ್ಲಿ ವೃತ್ತಿಜೀವನವನ್ನು ಮಾಡಲು ಎಲೈಟ್ ಮಾಡೆಲ್ ಮ್ಯಾನೇಜ್‌ಮೆಂಟ್’ಗೆ ಸೇರಿದರು.
2007 ರಲ್ಲಿ ಲ್ಯಾಕ್ಮೆ ಫ್ಯಾಶನ್ ವೀಕ್’ನಲ್ಲಿ ಪಾದಾರ್ಪಣೆ ಮಾಡಿದ ನಂತರ, ಅನೇಕ ಬ್ರ್ಯಾಂಡ್‌ಗಳಿಂದ ಕೊಡುಗೆಗಳನ್ನು ಸ್ವೀಕರಿಸಲು ಪ್ರಾರಂಭಿಸಿದರು. ಅದಾದ ಕೆಲ ದಿನಗಳ ಬಳಿಕ, ನಟನಾ ಸ್ಕೂಲ್ ಪ್ರವೇಶಿಸಿದ ಅವರು, ಆಡಿಷನ್ ಕೂಡ ನೀಡಲು ಪ್ರಾರಂಭಿಸಿದರು.
ಅನುಷ್ಕಾ ಶರ್ಮಾ 2008 ರಲ್ಲಿ ಶಾರುಖ್ ಖಾನ್ ಅಭಿನಯದ ಚಿತ್ರದ ಮೂಲಕ ಬಾಲಿವುಡ್’ಗೆ ಪಾದಾರ್ಪಣೆ ಮಾಡಿದರು.