18 ತಿಂಗಳ ಬಾಕಿ ಡಿಎ ಬಗ್ಗೆ ಹೊರ ಬಿತ್ತು ಮಾಹಿತಿ ! ಸರ್ಕಾರಿ ನೌಕರರಿಗೆ ಈ ದಿನ ರಿಲೀಸ್ ಆಗಲಿದೆ ಹಣ
ಮೂಲಗಳ ಪ್ರಕಾರ, ಉದ್ಯೋಗಿಗಳಿಗೆ ನೀಡಬೇಕಾದ ಡಿಎ ಬಾಕಿ ಜೊತೆಗೆ ಫಿಟ್‌ಮೆಂಟ್ ಅಂಶವನ್ನು ಸಹ ಹೆಚ್ಚಿಸಲಾಗುವುದು. ಹೀಗಾದರೆ ಉದ್ಯೋಗಿಗಳಿಗೆ ದೊಡ್ಡ ವರದಾನವಾಗಲಿದೆ.
ಕರೋನವೈರಸ್ ಸಾಂಕ್ರಾಮಿಕ ಸಮಯದಲ್ಲಿ, ತುಟ್ಟಿಭತ್ಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಪರಿಸ್ಥಿತಿ ಸುಧಾರಿಸಿದ ಇದನ್ನು ಮತ್ತೆ ಆರಂಭಿಸಲಾಯಿತು. ಜನವರಿ ಒಂದರಿಂದ ಜೂನ್ 30 ರವರೆಗಿನ ಫ್ರೀಜ್ ಮಾಡಿದ ಡಿಎ ಬಾಕಿಯನ್ನು ನೌಕರರ ಖಾತೆಗಳಿಗೆ ಇನ್ನೂ ಜಮಾ ಮಾಡಿಲ್ಲ.
ಇದರ ಪ್ರಕಾರ ಇನ್ನೂ 18 ತಿಂಗಳ ತುಟ್ಟಿಭತ್ಯೆಯನ್ನು ಸರ್ಕಾರ ಪಾವತಿಸಬೇಕು. ಈ ಕುರಿತು ನೌಕರರು ನಿರಂತರವಾಗಿ ಮನವಿ ಸಲ್ಲಿಸುತ್ತಿದ್ದಾರೆ. ಈಗ ಶೀಘ್ರವೇ ಇದಕ್ಕೆ ಅನುಮೋದನೆ ದೊರೆಯುವ ವಿಶ್ವಾಸವಿದೆ.
ಒಂದು ಲೆಕ್ಕಾಚಾರದ ಪ್ರಕಾರ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 2 ಲಕ್ಷಕ್ಕೂ ಅಧಿಕ ಡಿಎ ಬಾಕಿಯನ್ನು ಪಡೆಯುವ ಸಾಧ್ಯತೆ ಇದೆ. ಈ ಬಗ್ಗೆ ಸರ್ಕಾರ ಇನ್ನೂ ಅಧಿಕೃತ ನಿರ್ಧಾರ ಕೈಗೊಂಡಿಲ್ಲ. ಆದರೆ, ವರದಿಗಳನ್ನು ನಂಬುವುದಾದರೆ ಶೀಘ್ರದಲ್ಲೇ ಸರ್ಕಾರ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ.
ಮೋದಿ ಸರ್ಕಾರ ಶೀಘ್ರದಲ್ಲೇ ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸಲಿದೆ. ಇದರಿಂದ ನೌಕರರ ಮೂಲ ವೇತನ ಗಣನೀಯವಾಗಿ ಏರಿಕೆಯಾಗುವುದು ಖಚಿತ. ಇದು ಮೂಲ ವೇತನದ ಹೆಚ್ಚಳಕ್ಕೂ ಕಾರಣವಾಗುತ್ತದೆ.
ಮುಂದಿನ ವರ್ಷ ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಈ ಪರಿಸ್ಥಿತಿಯಲ್ಲಿ, ಕೇಂದ್ರ ಸರ್ಕಾರಿ ನೌಕರರ ಬೆಂಬಲವನ್ನು ಪಡೆಯಲು ಸರ್ಕಾರವು ಅವರ ಬಹುಕಾಲದ ಬೇಡಿಕೆಗಳಾದ ಡಿಎ ಅರಿಯಾರ್, ಫಿಟ್‌ಮೆಂಟ್ ಅಂಶವನ್ನು ಈಡೇರಿಸಬಹುದು ಎಂದು ಹೇಳಲಾಗುತ್ತಿದೆ.