ಬ್ರಿಟನ್ ರಾಣಿಗಿಂತ ಹೆಚ್ಚಿನ ಸಂಪತ್ತು ಹೊಂದಿರುವ ಕನ್ನಡತಿ ಯಾರು ಗೊತ್ತೇ!
ಬೆಂಗಳೂರು: ಭಾರತದ ಅತಿದೊಡ್ಡ ಐಟಿ ಕಂಪನಿಯ ಇನ್ಫೋಸಿಸ್ ನಿರ್ದೇಶಕ ನಾರಾಯಣ್ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಬ್ರಿಟನ್ನಿನ ಶ್ರೀಮಂತ ಮಹಿಳೆಯರಲ್ಲಿ ಒಬ್ಬರು. ಯುಕೆ ಮಾಧ್ಯಮಗಳ ಪ್ರಕಾರ ಇತ್ತೀಚೆಗೆ ಬಿಡುಗಡೆಯಾದ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಅಕ್ಷತಾ ಬ್ರಿಟನ್ ರಾಣಿ ಎಲಿಜಬೆತ್ II ರನ್ನು ಹಿಂದಿಕ್ಕಿದ್ದಾರೆ.
ಬ್ರಿಟಿಷ್ ಪತ್ರಿಕೆ ದಿ ಗಾರ್ಡಿಯನ್‌ನ ವರದಿಯ ಪ್ರಕಾರ, ಬ್ರಿಟನ್‌ನ ರಾಣಿ ಎಲಿಜಬೆತ್ 350 ಮಿಲಿಯನ್ ಪೌಂಡ್ ಅರ್ಥಾತ್ 3,400 ಕೋಟಿ ರೂ. ಸಂಪತ್ತನ್ನು ಹೊಂದಿದ್ದಾರೆ. ಅಕ್ಷತಾ ಮೂರ್ತಿ ಅವರ ಆಸ್ತಿ ಸುಮಾರು 430 ಮಿಲಿಯನ್ ಪೌಂಡ್ ಅಂದರೆ 4,200 ಕೋಟಿ ರೂ.ಗಳಷ್ಟಿದೆ.
ವಾಸ್ತವವಾಗಿ ನಾರಾಯಣ ಮೂರ್ತಿ ಅವರ ಮಗಳು ಅಕ್ಷತಾ ಇನ್ಫೋಸಿಸ್ನಲ್ಲಿ 0.91% ಪಾಲನ್ನು ಹೊಂದಿದ್ದಾರೆ. ಇದಲ್ಲದೆ ಅವರು ಇತರ ಕೆಲವು ಕಂಪನಿಗಳಲ್ಲೂ ಪಾಲನ್ನು ಹೊಂದಿದ್ದಾರೆ. ಇವುಗಳ ಬೆಲೆ ಸುಮಾರು 430 ಮಿಲಿಯನ್ ಪೌಂಡ್‌ಗಳು ಅಂದರೆ 4,300 ಕೋಟಿ ರೂ. ಕಂಪನಿಗಳಲ್ಲಿನ ಪಾಲಿನಿಂದಾಗಿ ಅಕ್ಷತಾ ಬ್ರಿಟನ್‌ನ ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ.
ಮಾಹಿತಿಯ ಪ್ರಕಾರ, ಅಕ್ಷತಾ ಅವರ ಪತಿ ರಿಷಿ ಸುನಕ್ 200 ಮಿಲಿಯನ್ ಪೌಂಡ್ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಅಂದರೆ ಸುಮಾರು 2000 ಕೋಟಿ ರೂಪಾಯಿಗಳು. ಬ್ರಿಟನ್‌ನಲ್ಲಿ ಹಣಕಾಸು ಸಚಿವರಾಗಿರುವುದರ ಹೊರತಾಗಿ ಅವರು ಅಲ್ಲಿನ ಶ್ರೀಮಂತ ಸಂಸದರೂ ಆಗಿದ್ದಾರೆ.
ವಾಸ್ತವವಾಗಿ ಯುಕೆಯಲ್ಲಿ ಪ್ರತಿಯೊಬ್ಬ ಮಂತ್ರಿಯು ಎಲ್ಲಾ ಹಣಕಾಸಿನ ಮೂಲಗಳನ್ನು ಘೋಷಿಸುವ ಅಗತ್ಯವಿದೆ. ಯುಕೆಯಲ್ಲಿ ಎಲ್ಲಾ ಮಂತ್ರಿಗಳು ನಿಕಟ ಕುಟುಂಬ ಸದಸ್ಯರ ಹಣಕಾಸಿನ ವಿವರಗಳನ್ನು ಬಹಿರಂಗವಾಗಿ ಪ್ರಕಟಿಸಬೇಕಿದೆ. ಬ್ರಿಟಿಷ್ ಪತ್ರಿಕೆ ದಿ ಗಾರ್ಡಿಯನ್ ನಡೆಸಿದ ತನಿಖೆಯ ಪ್ರಕಾರ, ಯುಕೆ ಚಾನ್ಸೆಲರ್ ಮತ್ತು ನಾರಾಯಣ್ ಮೂರ್ತಿ ಅವರ ಅಳಿಯ ರಿಷಿ ಸುನಕ್ ಅವರು ತಮ್ಮ ಪತ್ನಿ ಅಕ್ಷತಾ ಮೂರ್ತಿ ಅವರ ಹಣಕಾಸಿನ ಹಿಡುವಳಿಗಳನ್ನು ಬಹಿರಂಗಪಡಿಸಿಲ್ಲ ಎಂದು ತಿಳಿದುಬಂದಿದೆ.
ಇದರ ನಂತರ, ಯುಕೆನಲ್ಲಿ ಹಣಕಾಸು ಸಚಿವರಾಗಿರುವ ಅಕ್ಷತಾ ಅವರ ಪತಿ ರಿಷಿ ಸುನಕ್ ಅವರು ತಮ್ಮ ಆಸ್ತಿಗಳನ್ನು ಬಹಿರಂಗಪಡಿಸುವಲ್ಲಿ ಪಾರದರ್ಶಕವಾಗಿಲ್ಲ ಎಂಬ ಪರಿಶೀಲನೆಗೆ ಒಳಪಟ್ಟಿದ್ದಾರೆ. ಗಾರ್ಡಿಯನ್ ಪತ್ರಿಕೆ ಅಕ್ಷತಾ ಇತರ ಹಲವಾರು ಕಂಪನಿಗಳಲ್ಲಿ ನಿರ್ದೇಶಕರಾಗಿದ್ದಾರೆ ಎಂದು ಉಲ್ಲೇಖಿಸಿದೆ. ಆದರೆ ರಿಷಿ ಅದನ್ನು ಸರ್ಕಾರಿ ರಿಜಿಸ್ಟರ್‌ನಲ್ಲಿ ಉಲ್ಲೇಖಿಸಿಲ್ಲ.