ಮಾತಿನ ಮಲ್ಲ ಸೃಜನ್ ಲೋಕೇಶ್ ಭವ್ಯ ಬಂಗಲೆ ಹೇಗಿದೆ ಗೊತ್ತಾ? ಅದ್ಭುತ ವಿನ್ಯಾಸದ ಈ ಮನೆಯ ಒಳಾಂಗಣ ಫೋಟೋಸ್ ಇಲ್ಲಿವೆ
ಕನ್ನಡ ಕಿರು ತೆರೆಯಲ್ಲಿ ಮಾತಿನ ಮಲ್ಲ ಎಂದೇ ಹೆಸರು ಪಡೆದವರು ಸೃಜನ್ ಲೋಕೇಶ್. ಇವರು ತಾವು ನಡೆಸಿಕೊಟ್ಟ ಕಾರ್ಯಕ್ರಮದಿಂದಲೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿದ್ದಾರೆ.
ಸೃಜನ್ ಲೋಕೇಶ್ ಮನೆಯ ಹೆಸರೇ ಚಂದ. ಆ ಹೆಸರು ಕೇಳಿದರೆ ಸಾಕು ಅದೇನೂ ಧನ್ಯತಾ ಭಾವ. ಹೌದು, ಇವರ ಮನೆಯ ಹೆಸರು ಶಬರಿ.
ಇನ್ನು ಎಲ್ಲಾ ಮನೆಗಳಂತೆ ಇವರ ಮನೆಗೆ ಕಾಲಿಂಗ್ ಬೆಲ್ ಇಲ್ಲ. ಬದಲಿಗೆ ಮಂದಿರದ ಹಾಗೆ ಘಂಟೆಯನ್ನು ಮುಖ್ಯ ದ್ವಾರದಲ್ಲಿ ಹಾಕಲಾಗಿದೆ. ಮನೆಗೆ ಬರುವವರು ಆ ಘಂಟೆ ಬಾರಿಸಬೇಕು.
ಈ ಮನೆಯ ಪ್ರಮುಖ ಆಕರ್ಷಣೆಯೇ ದೇವರ ಮನೆ . ಇನ್ನು ಮನೆಗೆ ಪ್ರವೇಶ ಪಡೆಯುತ್ತಿದ್ದಂತೆ ಕಣ್ಣಿಗೆ ಬೀಳುವುದು ಸುಂದರ ದೇವರ ಕೋಣೆ. ಈ ಜಾಗದಲ್ಲಿ ಹಿಂದೆ ಹುತ್ತ ಇತ್ತಂತೆ. ಆ ಜಾಗದಲ್ಲಿಯೇ ದೇವರ ಮನೆ ನಿರ್ಮಾಣ ಮಾಡಿದ್ದಾರೆ.
ಇಲ್ಲಿ ಎಲ್ಲರ ಜೊತೆ ಕುಳಿತು ಟಿವಿ ನೋಡುವುದಕ್ಕಾಗಿಯೇ ಟಿವಿ ಹಾಲ್ ಕೂಡಾ ಇದೆ.
ಮನೆಯ ವಿನ್ಯಾಸ ಕೂಡಾ ಅತ್ಯದ್ಭುತವಾಗಿದೆ. ಸಾಮಾನ್ಯ ಮನೆಗಿಂತ ಭಿನ್ನವಾಗಿ ಈ ಮನೆ ಕಾಣುತ್ತದೆ.
ಮನೆ ಮುಂದೆ ಸುಂದರ ಗಾರ್ಡನ್ ಇದೆ. ಮನೆಯೆಂದರೆ ಹೀಗೆಯೇ ಇರಬೇಕು ಎಂದು ಕನಸು ಕಾಣುವವರು ಈ ಮನೆಯ ಲುಕ್ ಅನ್ನು ಒಮ್ಮೆ ನೋಡಲೇ ಬೇಕು.