Photo Gallery: ಅರಮನೆಯಂತಿರುವ ಎಂ.ಎಸ್.ಧೋನಿ ಲಕ್ಷುರಿಯಸ್ ಬಂಗಲೆ ಹೇಗಿದೆ ನೋಡಿ
)
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್.ಧೋನಿ ಅವರ ಮನೆಯ ಮುಂಭಾಗದ ವಿನ್ಯಾಸವು ಅದ್ಭುತವಾಗಿದೆ. ಛಾವಣಿಯ ಬಣ್ಣ ಕಪ್ಪಾಗಿದ್ದು, ನೋಡಲು ಸುಂದರವಾಗಿದೆ. ಮಾಹಿ ಬಂಗಲೆ 7 ಎಕರೆಗಳಲ್ಲಿ ಹರಡಿಕೊಂಡಿದೆ. ಈ ಐಷಾರಾಮಿ ಬಂಗಲೆ ರಾಂಚಿಯಲ್ಲಿದೆ.
)
ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂ.ಎಸ್.ಧೋನಿ ಬೈಕ್‌ಗಳ ಬಗ್ಗೆ ವಿಶೇಷ ಒಲವು ಹೊಂದಿದ್ದಾರೆ ಎಂಬುದು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗೂ ತಿಳಿದಿದೆ. ಅವರ ಬಳಿ ವಿವಿಧ ಮಾದರಿಯ ದ್ವಿಚಕ್ರ ವಾಹನಗಳ ಬಹುದೊಡ್ಡ ಸಂಗ್ರಹವಿದೆ. ಹೀಗಾಗಿ ತಮ್ಮ ಬಂಗಲೆಯಲ್ಲಿ ಬೈಕ್‌ಗಳಿಗಾಗಿಯೇ ಪ್ರತ್ಯೇಕ ಸ್ಥಳದ ವ್ಯವಸ್ಥೆ ಮಾಡಿಕೊಂಡಿದ್ದಾರೆ.
)
ಎಂ.ಎಸ್.ಧೋನಿಯ ಐಷಾರಾಮಿ ಬಂಗಲೆಯಲ್ಲಿ ಜಿಮ್, ಈಜುಕೊಳ ಮತ್ತು ಪಾರ್ಕ್ ಹಾಗೂ ಅನೇಕ ಒಳಾಂಗಣ ಆಟಗಳನ್ನು ಆಡಲು ಸಾಕಷ್ಟು ಸ್ಥಳಾವಕಾಶವಿದೆ.
ಎಂ.ಎಸ್.ಧೋನಿಯ ಬಂಗಲೆಯ ಒಳಭಾಗವು ತುಂಬಾ ಅದ್ಭುತವಾಗಿದೆ. ಅವರ ಲಿವಿಂಗ್ ರೂಮಿನಲ್ಲಿ ಬ್ರೌನ್ ವೆಲ್ವೆಟ್ ಸೋಫಾ ಮತ್ತು ಕಾಫಿ ಟೇಬಲ್ ಕೂಡ ಇದೆ. ಈ ಭವ್ಯವಾದ ಒಳಾಂಗಣವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
ಎಂ.ಎಸ್.ಧೋನಿಯವರ ಐಷಾರಾಮಿ ಬಂಗಲೆಯಲ್ಲಿ ಮಲಗುವ ಕೋಣೆಯು ಸಾಕಷ್ಟು ಆಧುನಿಕವಾಗಿದೆ. ಅವರ ಹಾಸಿಗೆಯ ಭಾಗವು ಬಹುತೇಕ ಚಾವಣಿಯನ್ನು ಮುಟ್ಟುವಂತಿದೆ. ಅತ್ಯುತ್ತಮವಾಗಿ ಮನೆಯ ಮಲಗುವ ಕೋಣೆಗಳನ್ನು ಸಿದ್ಧಪಡಿಸಲಾಗಿದೆ. ಇಲ್ಲಿ ಸಕಲ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ.