ಕಳೆದ 8 ತಿಂಗಳಲ್ಲಿ ಸಂಪೂರ್ಣ ನೆಲ ಕಚ್ಚಿದ ಬಾಲಿವುಡ್ ಸಿನಿಮಾಗಳಿವು ..!

Thu, 18 Aug 2022-3:32 pm,

ರಕ್ಷಾ ಬಂಧನ: ಅಕ್ಷಯ್ ಕುಮಾರ್ ಅವರ 2022 ರಲ್ಲಿ ಬಿಡುಗಡೆಯಾದ ಮೂರನೇ ಚಿತ್ರ ಇದಾಗಿದೆ. ಆದರೆ ಈ ಚಿತ್ರ ಕೂಡಾ ಯಾವುದೇ ರೀತಿಯ ಮ್ಯಾಜಿಕ್ ಮಾಡಲೇ ಇಲ್ಲ. ಈ ಚಿತ್ರ ಇದುವರೆಗೆ ಗಳಿಸಿದ್ದು ಕೇವಲ  34 ಕೋಟಿ ಎಂದು ಹೇಳಲಾಗುತ್ತಿದೆ.  

ಲಾಲ್ ಸಿಂಗ್ ಚಡ್ಡಾ: ಬಹಳ ಸಮಯದ ನಂತರ ಅಮೀರ್ ಲಾಲ್ ಸಿಂಗ್ ಚಡ್ಡಾ ಮೂಲಕ ತೆರೆ ಮೇಲೆ ಬಂದಿದ್ದಾರೆ. ಕೆಲವರು ಈ ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಆದರೆ ಬಹುತೇಕ ಮಂದಿ ಈ ಚಿತ್ರದಿಂದ ದೂರವೇ ಉಳಿದಿದ್ದಾರೆ. ಅಮೀರ್ ಖಾನ್ ಅವರ ಬು ನಿರೀಕ್ಷಿತ ಚಿತ್ರ ಈ ರೀತಿ ಸೋಲುತ್ತದೆ ಎಂದು ಯಾರೂ ಅಂದುಕೊಂಡಿರಲಿಕ್ಕಿಲ್ಲ. 180 ಕೋಟಿಯ ಈ ಚಿತ್ರ 50 ಕೋಟಿ  ಗಳಿಸುವಲ್ಲಿ ಮಾತ್ರ ಸಫಲವಾಗಿದೆ.       

ಶಂಶೇರಾ: ರಣಬೀರ್ ಕಪೂರ್ ಅಭಿನಯದ ಶಂಶೇರಾ ಚಿತ್ರದ ಟ್ರೇಲರ್ ನೋಡಿ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡುವ ನಿರೀಕ್ಷೆ ಇತ್ತು. ಆದರೆ ಚಿತ್ರ ಬಿಡುಗಡೆಯಾದಾಗ ಅದರ ವಿಮರ್ಶೆ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. 

ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್: ಇನ್ನು ಈ ವರ್ಷ ಬಿದುಗದೆತಾದ ಅಕ್ಷಯ್ ಕುಮಾರ ಅಭಿನಯದ ಎರಡನೇ ಚಿತ್ರ ಪೃಥ್ವಿರಾಜ್  ಚೌಹಾಣ್.  ಈ ಚಿತ್ರ ಕೂಡಾ ಅತ್ಯಂತ ಹೀನಾಯವಾಗಿ ಸೋತಿದೆ. ಚಿತ್ರ ವೀಕ್ಷಣೆಗೆ ಪ್ರೇಕ್ಷಕರೇ ಇಲ್ಲದ ಕಾರಣ ಪ್ರದರ್ಶನಗಳನ್ನು ರದ್ದುಗೊಳಿಸಬೇಕಾಯಿತು. ಈ ಚಿತ್ರ ನಿರ್ಮಾಣಕ್ಕೆ 300 ಕೋಟಿ ಖರ್ಚು ಮಾಡಲಾಗಿದ್ದು, ಚಿತ್ರ  ಗಳಿಸಿದ್ದು ಕೇವಲ  64 ಕೋಟಿ.   

ರಾಧೆ ಶ್ಯಾಮ್: ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ್ ಕೂಡ ಈ ವರ್ಷ ಬಿಡುಗಡೆಯಾಡ ಚಿತ್ರಗಳಲ್ಲಿ ಒಂದು, ಇದು ಕೂಡಾ ಬಾಕ್ಸ್ ಆಫೀಸ್‌ನಲ್ಲಿ ಯಾವುದೇ ರೀತಿಯ ಮ್ಯಾಜಿಕ್ ಸೃಷ್ಟಿ ಮಾಡಲಿಲ್ಲ.  300 ಕೋಟಿ ವೆಚ್ಚದ ಈ ಚಿತ್ರ ಗಳಿಸಿದ್ದು 154 ಕೋಟಿ.    

ಬಚ್ಚನ್ ಪಾಂಡೆ: ಇನ್ನು ಈ ವರ್ಷದ ದೊಡ್ಡ ಫ್ಲಾಪ್ ಬಚ್ಚನ್ ಪಾಂಡೆ. ಈ ಚಿತ್ರದ ಬಗ್ಗೆ ಬಹಳ ದಿನಗಳಿಂದ ಚರ್ಚೆಗಳು ನಡೆಯುತ್ತಿದ್ದವು.  ಆದರೆ ವೀಕ್ಷಕ ಪ್ರಭುವಿಗೆ ಚಿತ್ರದ ಕಥೆ ಇಷ್ಟವಾಗಲಿಲ್ಲ. ಪರಿಣಾಮ  150 ಕೋಟಿ ರೂಪಾಯಿ ವೆಚ್ಚದ ಈ ಚಿತ್ರ  50 ಕೋಟಿ ಮಾತ್ರ ಗಳಿಸಲು ಶಕ್ತವಾಯಿತು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link