Intercontinental Shanghai Wonderland: ವಿಶ್ವದ ಮೊಟ್ಟಮೊದಲ Underground Hotel ಇದು, ಬನ್ನಿ ನೋಡೋಣ
1. ಇಂಟರ್ ಕ್ವಾಂಟಿನೆಂಟಲ್ ಶಾಂಘೈ ವಂಡರ್ ಲ್ಯಾಂಡ್ (Intercontinental Shanghai Wonderland) - ಈ ಭೂಗತ ಹೋಟೆಲ್ ತನ್ನ ವಿಶಿಷ್ಟ ವಿನ್ಯಾಸದ ಜೊತೆಗೆ ಬೃಹತ್ ರೂಪದ ಕಾರಣ ಚರ್ಚೆಯಲ್ಲಿದೆ. ಈ 5 ಸ್ಟಾರ್ ಹೋಟೆಲ್ ಅನ್ನು ಮಧ್ಯ ಚೀನಾದ ಶೇಷಾನ್ ಪರ್ವತ ಶ್ರೇಣಿಯ 90 ಮೀಟರ್ ದೊಡ್ಡ ಬಂಡೆಯೊಳಗೆ ನಿರ್ಮಿಸಲಾಗಿದೆ. 88 ಮೀಟರ್ ಆಳದ ಈ ಹೋಟೆಲ್‌ನ ಹೆಸರು ಇಂಟರ್‌ಕಾಂಟಿನೆಂಟಲ್ ಶಾಂಘೈ ವಂಡರ್ಲ್ಯಾಂಡ್ (Intercontinental Shanghai Wonderland) ಮತ್ತು ಶಿಮಾವೊ ಕ್ವಾರಿ ಹೋಟೆಲ್. ಈ ಹೋಟೆಲ್‌ನ ಕೆಳಗಿನ ಎರಡು ಮಹಡಿಗಳು ನೀರಿನೋಳಗಿವೆ.
2. ಈ ಹೋಟೆಲ್ ನಲ್ಲಿ 383 ರೂಮಗಳಿವೆ - 49,409 ಚದರ ಮೀಟರ್ ಗಳಷ್ಟು ಹರಡಿರುವ ಈ ಹೋಟೆಲ್‌ನಲ್ಲಿ ಪ್ರವಾಸಿಗರಿಗಾಗಿ 383 ಕೊಠಡಿಗಳನ್ನು ನಿರ್ಮಿಸಲಾಗಿದ್ದು, ಸಮುದ್ರದ ನೋಟ ಎಲ್ಲ ಸಮಯದಲ್ಲೂ ಲಭ್ಯವಿದೆ. ಇದೇ ವೇಳೆ, ಈ ಹೋಟೆಲ್ನ ಎರಡು ಮಹಡಿಗಳನ್ನು 10 ಮೀಟರ್ ಆಳದಲ್ಲಿ ಅಕ್ವೇರಿಯಂನಿಂದ (Aquarium) ಸುತ್ತುವರೆದಿದೆ.
3. ಗ್ಲಾಸ್ ವಾಟರ್ ಫಾಲ್ ಈ ಹೋಟೆಲ್ ನ ಮುಖ್ಯ ಆಕರ್ಷಣೆ - ಈ ಹೋಟೆಲ್‌ನ ಪ್ರಮುಖ ಆಕರ್ಷಣೆಯೆಂದರೆ ಗ್ಲಾಸ್ ಜಲಪಾತ, ಇದನ್ನು ಹೋಟೆಲ್‌ನ ಮಧ್ಯಭಾಗದಲ್ಲಿ ನಿರ್ಮಿಸಲಾಗಿದ್ದು, ಹೋಟೆಲ್‌ನ ಪ್ರತಿಯೊಂದು ಕೋಣೆಯಿಂದಲೂ ಇದು ಕಂಗೊಳಿಸುತ್ತದೆ. ಇದು ಪ್ರವಾಸಿಗರ ಅನುಭವವನ್ನು ಹೆಚ್ಚು ಅದ್ಭುತಗೊಳಿಸುತ್ತದೆ. ಇದಲ್ಲದೆ ಪ್ರವಾಸಿಗರು ಪ್ರಕೃತಿಯ ಸೌಂದರ್ಯದೊಂದಿಗೆ ಬಂಗೀ ಜಂಪಿಂಗ್ ಮತ್ತು ರಾಕ್ ಕ್ಲೈಂಬಿಂಗ್ ಮುಂತಾದ ಚಟುವಟಿಕೆಗಳನ್ನು ಸಹ ಆನಂದಿಸಬಹುದು.
4. 10 ವರ್ಷಗಳಲ್ಲಿ ಈ ಹೋಟೆಲ್ ನಿರ್ಮಾಣಗೊಂಡಿದೆ - ಬ್ರಿಟಿಷ್ ಆರ್ಕಿಟೆಕ್ಟ್ ಮಾರ್ಟಿನ್ ಜೋಕ್ಮನ್ ವಿನ್ಯಾಸಗೊಳಿಸಿದ ಈ ಭೂಗತ ಹೋಟೆಲ್ ನಿರ್ಮಾಣಕ್ಕೆ ಸುಮಾರು 10 ವರ್ಷಗಳ ಕಾಲ ಬೇಕಾಯಿತು ಮತ್ತು ಸುಮಾರು 2000 ಕೋಟಿ ರೂ. ವೆಚ್ಚದಲ್ಲಿ ಇದು ನಿರ್ಮಾಣಗೊಂಡಿದೆ. ಈ ಹೋಟೆಲ್ ನ ಸೂಟ್‌ನಲ್ಲಿ ತಂಗಲು ಒಂದು ರಾತ್ರಿಯ ಬಾಡಿಗೆ ಸುಮಾರು 35 ಸಾವಿರ ರೂಪಾಯಿಗಳು ಪಾವತಿಸಬೇಕು.
5. ವಿಶ್ವಕ್ಕೆ ಉದಾಹರಣೆಯಾಗಿದೆ ಈ ಹೋಟೆಲ್ - ಹೋಟೆಲ್ ಕುರಿತು ಮಾಹಿತಿ ನೀಡುವ SNC-Lavalin’s ಅಟ್ ಕಿಂಗ್ ಕಂಪನಿಯ ಸಿನಿಯರ್ ಡಿಸೈನ್ ಡೈರೆಕ್ಟರ್ ಜೇಸನ್ ಹುಚಿಂಗ್ಸ್, "ನಾವು ಪ್ರಯತ್ನಪಟ್ಟ ಸಾಕಷ್ಟು ಸಂಗತಿಗಳಿಗೆ ಈ ಹೋಟೆಲ್ ಉದಾಹರಣೆಯಾಗಿದೆ. ಬಾಳಿಕೆ, ಹೊಸ ಅನ್ವೇಷಣೆ, ವಿಶಿಷ್ಟ ಹಾಗೂ ಪ್ರೇರಣಾದಾಯಕ ಈ ಹೋಟೆಲ್ ಆಗಿದೆ. ನಮ್ಮ ಕ್ಲೈಂಟ್ ಹಾಗೂ ಇದರಲ್ಲಿ ಶಾಮೀಲಾಗಿರುವ ನಮ್ಮ ಡಿಸೈನ್ ತಂಡಕ್ಕೆ ಇದರ ಶ್ರೇಯಸ್ಸು ಸಲ್ಲುತ್ತದೆ" ಎಂದಿದ್ದಾರೆ.