ʼಬೆಂಗಳೂರಿಗೂ ಅನುಷ್ಕಾಗೂ ನಂಟು.. ವಿರುಷ್ಕಾ ಕ್ಯೂಟ್ ಲವ್ ಸ್ಟೋರಿʼ : ಕೊಹ್ಲಿ ಪತ್ನಿ ಬಗ್ಗೆ ನಿಮಗೆಷ್ಟು ಗೊತ್ತು..!
ರಬ್ ನೇ ಬನಾ ದಿ ಜೋಡಿ, ಪಿಕೆ, ಬ್ಯಾಂಡ್ ಬಾಜಾ ಬಾರಾತ್, ಜಬ್ ತಕ್ ಹೈ ಜಾನ್, ಏ ದಿಲ್ ಹೈ ಮುಷ್ಕಿಲ್, ಸುಯಿ ಧಾಗಾ, ಎನ್‌ಹೆಚ್ 10 ಮತ್ತು ಹೆಚ್ಚಿನ ಬಾಲಿವುಡ್ ಚಲನಚಿತ್ರಗಳಲ್ಲಿ ನಟಿಸಿರುವ ಅನುಷ್ಕಾ ಶರ್ಮಾ ಅತ್ಯಂತ ಜನಪ್ರಿಯ ಬಾಲಿವುಡ್ ನಟಿಯರಲ್ಲಿ ಒಬ್ಬರು. ಪ್ರಸ್ತುತ ಅವರು ʼಚಕ್ಡಾ ಎಕ್ಸ್‌ಪ್ರೆಸ್ʼ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
ವಿರಾಟ್ ಕೊಹ್ಲಿ ಅವರ ಪತ್ನಿ, ಅನುಷ್ಕಾ ಶರ್ಮಾ, 1 ನೇ ಮೇ 1998 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಜನಿಸಿದರು. ಅನುಷ್ಕಾ ಅವರ ತಂದೆ ಸೇನಾ ಅಧಿಕಾರಿಯಾಗಿದ್ದರೆ, ಅವರ ತಾಯಿ ಗೃಹಿಣಿಯಾಗಿದ್ದರು. ಆಕೆಗೆ ಒಬ್ಬ ಹಿರಿಯ ಸಹೋದರನಿದ್ದಾನೆ.
ಅನುಷ್ಕಾ ಶರ್ಮಾ ಅವರ ಪೂರ್ವಜರ ಮನೆ ಡೆಹ್ರಾಡೂನ್‌ನಲ್ಲಿದೆ, ಅಲ್ಲಿ ಅವರ ತಂದೆ ಮದುವೆಯಾಗುವ ಮೊದಲು ವಾಸಿಸುತ್ತಿದ್ದರು. ಅವರ ಅಜ್ಜಿ ಈಗಲೂ ಆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅನುಷ್ಕಾ ತಂದೆ ಉತ್ತರ ಪ್ರದೇಶ ಮೂಲದವರಾಗಿದ್ದರೆ, ತಾಯಿ ಗರ್ವಾಲಿ.
ಅನುಷ್ಕಾ ಶರ್ಮಾ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅಸ್ಸಾಂನ ಮಾರ್ಗರಿಟಾದ ಸೇಂಟ್ ಮೇರಿಸ್ ಶಾಲೆಯಲ್ಲಿ ಮಾಡಿದರು. ಎಂಎಸ್ ಧೋನಿ ಪತ್ನಿ ಸಾಕ್ಷಿ ಧೋನಿ ಶಾಲಾ ದಿನಗಳಲ್ಲಿ ಸಹಪಾಠಿಯಾಗಿದ್ದರು. ಇಂದಿಗೂ ಅವರು ಗುಡ್ ಫ್ರೇಂಡ್ಸ್.
ಅನುಷ್ಕಾ ತನ್ನ ಶಾಲಾ ಶಿಕ್ಷಣವನ್ನು ಬೆಂಗಳೂರಿನ ಆರ್ಮಿ ಶಾಲೆಯಲ್ಲಿ ಮುಗಿಸಿದರು. ನಂತರ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಿಂದ ಬಿ.ಎ ಪದವಿ ಪಡೆದರು. ಮಾಡೆಲಿಂಗ್ ಇಲ್ಲವೇ ಪತ್ರಿಕೋದ್ಯಮದಲ್ಲಿ ವೃತ್ತಿಜೀವನ ಮುಂದುವರಿಸಲು ನಿರ್ಧರಿಸಿದ್ದರು. ಅವರಿಗೆ ನಟಿಯಾಗುವ ಆಸೆ ಇರಲಿಲ್ಲ.
ಶರ್ಮಾ ಅವರು ಮಾಡೆಲಿಂಗ್ ವೃತ್ತಿಯನ್ನು ಮುಂದುವರಿಸಲು ಮುಂಬೈಗೆ ತೆರಳಿದರು. ಪ್ರಸಿದ್ಧ ಫ್ಯಾಷನ್ ಶೋಗಳಲ್ಲಿ ಕೆಲಸ ಮಾಡಲು ನಿರ್ಧರಿಸಿ ಅಂತಿಮವಾಗಿ ನಟನಾ ಶಾಲೆಗೆ ಸೇರಲು ನಿರ್ಧರಿಸಿದರು. ನಂತರ ಅವರು ಚಲನಚಿತ್ರಗಳಲ್ಲಿನ ಪಾತ್ರಗಳಿಗಾಗಿ ಆಡಿಷನ್ ಮಾಡಲು ಪ್ರಾರಂಭಿಸಿದರು. ಅಂತಿಮವಾಗಿ 2008 ರಲ್ಲಿ ರಬ್ ನೇ ಬನಾ ದಿ ಜೋಡಿಯೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.
ಅನುಷ್ಕಾ ಶುದ್ಧ ಸಸ್ಯಾಹಾರಿ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರೂ ಭಾರತದಲ್ಲಿರುವ ಪ್ರಾಣಿ ದಯಾಸಂಘಗಳಂತಹ ಎನ್‌ಜಿಒಗಳಿಗೆ ಹಣವನ್ನು ದೇಣಿಗೆ ನೀಡುತ್ತಾರೆ. ಇಬ್ಬರಿಗೂ ಪ್ರಾಣಿಗಳೆಂದರೆ ತುಂಬಾ ಇಷ್ಟ.