International Women`s Day 2023: ಜೀವನದಲ್ಲಿ ಯಾವಾಗಲು ತಲೆ ಎತ್ತಿ ಬದುಕುತ್ತಾರೆ ಈ ಮೂರು ರಾಶಿಗಳ ಹುಡುಗಿಯರು!
ಮೇಷ ರಾಶಿ: ಈ ರಾಶಿಯ ಹುಡುಗಿಯರು ತುಂಬಾ ನಿರ್ಭೀತರು ಹಾಗೂ ಧೈರ್ಯಶಾಲಿಗಳಾಗಿರುತ್ತಾರೆ. ಈ ಹುಡುಗಿಯರು ಯಾರ ಒತ್ತಡಕ್ಕೂ ಒಳಗಾಗಿ ಕೆಲಸ ಮಾಡುವುದಿಲ್ಲ. ಈ ಹುಡುಗಿಯರು ಪ್ರತಿ ಸವಾಲನ್ನು ಸ್ವೀಕರಿಸುತ್ತಾರೆ. ಅಲ್ಲದೆ, ಪ್ರತಿಕೂಲ ಸಂದರ್ಭಗಳಲ್ಲಿಯೂ ಇವರು ಶಾಂತವಾಗಿರುತ್ತಾರೆ. ಈ ರಾಶಿಯ ಹುಡುಗಿಯರು ತಮ್ಮ ಧೈರ್ಯದಿಂದ ತಮ್ಮ ಜೀವನದಲ್ಲಿ ಯಶಸ್ಸಿನ ಹಲವು ಕಥೆಗಳನ್ನು ಬರೆಯುತ್ತಾರೆ. ಈ ಹುಡುಗಿಯರು ಕ್ರೀಡೆಯಲ್ಲೂ ಮುಂದಿರುತ್ತಾರೆ. ಆದರೆ ಅವರು ಸ್ವಲ್ಪ ಮುಂಗೋಪದ ಸ್ವಭಾವದವರು. ಅಲ್ಲದೆ ಏನೇ ಹೇಳಬೇಕೆಂದರೂ ಮುಖದ ಮೇಲೆಯೇ ಕಡ್ಡಿ ಮುರಿದ ಹಾಗೆ ಹೇಳುತ್ತಾರೆ. ಮೇಷ ರಾಶಿಗೆ ಮಂಗಳ ಅಧಿಪತಿಯಾಗಿರುವ ತುಂಬಾ ಕಾರಣ ಮಂಗಳ ಅವರಿಗೆ ಈ ಗುಣಗಳನ್ನು ನೀಡುತ್ತಾನೆ. .
ಸಿಂಹ ರಾಶಿ: ಈ ರಾಶಿಗೆ ಸೇರಿದ ಹುಡುಗಿಯರು ಸ್ವಾಭಿಮಾನಿ ಮತ್ತು ತುಂಬಾ ನಿರ್ಭೀತರಾಗಿರುತ್ತಾರೆ. ಇವರು ಯಾರಿಗೂ ಹೆದರುವುದಿಲ್ಲ ಮತ್ತು ಯಾರ ಒತ್ತಡದಲ್ಲಿಯೂ ಕೆಲಸ ಮಾಡುವುದಿಲ್ಲ. ಇವರ ಮುಖದಲ್ಲಿ ಒಂದು ವಿಶೇಷ ರೀತಿಯ ತೀಕ್ಷ್ಣತೆ ಇರುತ್ತದೆ. ಇನ್ನೊಂದೆಡೆ ಇವರಿಗೆ ಏನೇ ಹೇಳಬೇಕೆಂದು ಅನಿಸಿದರೆ ಅದನ್ನು ಮುಖದ ಮೇಲೆಯೇ ಹೇಳುತ್ತಾರೆ. ಅವರ ವ್ಯಕ್ತಿತ್ವವೂ ಆಕರ್ಷಕವಾಗಿರುತ್ತದೆ. ಎಲ್ಲದರಲ್ಲೂ ತಮ್ಮದೇ ಆದ ಅಭಿಪ್ರಾಯ ಇವರು ಹೊಂದಿರುತ್ತಾರೆ. ಅಲ್ಲದೆ ಇವರು ಆತ್ಮವಿಶ್ವಾಸದಿಂದ ಕೂಡಿರುತ್ತಾರೆ. ಅರ್ಥಾತ್ ಯಾರಾದರೂ ಇವರ ಆತ್ಮಗೌರವಕ್ಕೆ ಧಕ್ಕೆ ತಂದರೆ ಅದನ್ನು ಇವರು ಸಹಿಸುವುದಿಲ್ಲ. ಸೂರ್ಯನು ಸಿಂಹ ರಾಶಿಯ ಅಧಿಪತಿಯಾಗಿದ್ದು, ಆತ ಅವರಿಗೆ ಈ ಗುಣಗಳನ್ನು ನೀಡುತ್ತಾನೆ.
ಮಕರ ರಾಶಿ: ಈ ರಾಶಿಗಳ ಹುಡುಗಿಯರು ನಿರ್ಭೀತರು ಹಾಗೂ ತುಂಬಾ ಶ್ರಮಜೀವಿಗಳಾಗಿರುತ್ತಾರೆ. ಇದೇ ವೇಳೆ, ತಮ್ಮ ಜೀವನದಲ್ಲಿ ಬರುವ ಪ್ರತಿ ಸವಾಲನ್ನು ಸ್ವೀಕರಿಸುವಲ್ಲಿ ಇವರು ಮುಂದಿರುತ್ತಾರೆ. ಸಮಯ ಬಂದಾಗ ತನ್ನ ನಿರ್ಭಯತೆಯನ್ನು ಇವರು ತೋರಿಸುತ್ತಾರೆ. ಅಲ್ಲದೆ, ಇವರು ಉತ್ತಮ ಬಾಸ್ ಎಂದು ಕೂಡ ಸಾಬೀತಾಗುತ್ತಾರೆ. ಎಲ್ಲರನ್ನು ಕರೆದುಕೊಂಡು ಹೋಗುವ ನಾಯಕತ್ವದ ಗುಣ ಇವರಲ್ಲಿರುತ್ತದೆ. ಇವರು ತಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುತ್ತಾರೆ. ಇವರು ಸೋಮಾರಿಗಳನ್ನು ಇಷ್ಟಪಡುವುದಿಲ್ಲ. ಶನಿ ದೇವನು ಮಕರ ರಾಶಿಯ ಅಧಿಪತಿಯಾಗಿದ್ದಾನೆ, ಆದ್ದರಿಂದ ಅವನು ಈ ಗುಣಗಳನ್ನು ಅವರಿಗೆ ದಯಪಾಲಿಸುತ್ತಾನೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)